ರಾಜಕೀಯ

Prajwal Revanna Sex Scandal: 'ಜಗತ್ತಿನ ಅತಿದೊಡ್ಡ ಮಹಿಳೆಯರ ಮಾನಹಾನಿ ಪ್ರಕರಣ: ಕರ್ನಾಟಕಕ್ಕೆ ಕಪ್ಪು ಚುಕ್ಕಿ': DK Suresh ಕಿಡಿ

ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಈ ಪ್ರಕರಣವನ್ನು 'ಜಗತ್ತಿನ ಅತೀ ದೊಡ್ಡ ಮಹಿಳೆಯರ ಮಾನಹಾನಿ ಪ್ರಕರಣ ಎಂದು ಕಿಡಿಕಾರಿದ್ದಾರೆ.

Prajwal Revanna Sex Scandal: 'ಜಗತ್ತಿನ ಅತಿದೊಡ್ಡ ಮಹಿಳೆಯರ ಮಾನಹಾನಿ ಪ್ರಕರಣ: ಕರ್ನಾಟಕಕ್ಕೆ ಕಪ್ಪು ಚುಕ್ಕಿ': DK Suresh ಕಿಡಿ
ಡಿಕೆ ಸುರೇಶ್
Published On :

ಬೆಂಗಳೂರು: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಈ ಪ್ರಕರಣವನ್ನು 'ಜಗತ್ತಿನ ಅತೀ ದೊಡ್ಡ ಮಹಿಳೆಯರ ಮಾನಹಾನಿ ಪ್ರಕರಣ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಬಿಜೆಪಿಯವರ ಸ್ವಾರ್ಥಕ್ಕೆ ಇಂದು 500ಕ್ಕೂ ಹೆಚ್ಚು ಮಹಿಳೆಯರ ಮಾನಹಾನಿಯಾಗಿದ್ದು, ಇದು ದೇಶದಲ್ಲೇ ಅತೀ ದೊಡ್ಡ ಸೆಕ್ಸ್ ಹಗರಣವಾಗಿದೆ. ಇದು ದೇಶದ ಅತೀ ದೊಡ್ಡ ಮಾನಹಾನಿ ಪ್ರಕರಣವಾಗಿದ್ದು, ಇತಿಹಾಸದಲ್ಲಿ ಬೇರಾವುದೇ ರಾಜ್ಯದಲ್ಲೂ ಇಂತಹ ಹೀನ ಕೃತ್ಯ ನಡೆದಿಲ್ಲ. ನಾನಂತೂ ಈ ಬಗ್ಗೆ ಕೇಳಿಲ್ಲ. ಈ ಪ್ರಕರಣದಿಂದ ದೇಶಕ್ಕೆ, ನಮ್ಮ ರಾಜ್ಯಕ್ಕೆ ಮತ್ತು ಕನ್ನಡಿಗರಿಗೆ ಆದ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂತೆಯೇ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸರಿಯಾದ ರೀತಿಯಲ್ಲಿ ತನಿಖೆ ಮಾಡಿ, ಸಂತ್ರಸ್ಥ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಮತ್ತು ಸಂತ್ರಸ್ಥ ಮಹಿಳೆಯರ ರಕ್ಷಣೆಯನ್ನು ಸರ್ಕಾರವೇ ಮಾಡಬೇಕು. ಫೋಟೋ ಮತ್ತು ವಿಡಿಯೋಗಳಲ್ಲಿರುವ ಮಹಿಳೆಯರಿಗೆ ತತ್ ಕ್ಷಣ ಭದ್ರತೆ ನೀಡಬೇಕು ಎಂದು ಡಿಕೆ ಸುರೇಶ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.