'ಕಷ್ಟಕಾಲದಲ್ಲಿ ಬೆನ್ನಿಗೆ ನಿಂತ ಕುಮಾರಣ್ಣಾ ನಿಮಗೆ ಥ್ಯಾಂಕ್ಸ್': ಮಾಜಿ ಸಿಎಂ ಕಾಲಿಗೆ ನಮಸ್ಕರಿಸಿದ ಪ್ರತಾಪ್ ಸಿಂಹ!
ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಇಂದು ಸೋಷಿಯಲ್ ಮೀಡಿಯೊವೊಂದರಲ್ಲಿ ಫೋಟೋ ಹಾಕಿ ಬರೆದಿರುವ ಸಾಲುಗಳು ಭಾರೀ ವೈರಲ್ ಆಗಿದೆ. ಅಷ್ಟೇ ಕುತೂಹಲ ಮೂಡಿಸಿದೆ ಕೂಡ.

ಮೈಸೂರು/ಬಿಡದಿ: ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಇಂದು ಸೋಷಿಯಲ್ ಮೀಡಿಯೊವೊಂದರಲ್ಲಿ ಫೋಟೋ ಹಾಕಿ ಬರೆದಿರುವ ಸಾಲುಗಳು ಭಾರೀ ವೈರಲ್ ಆಗಿದೆ. ಅಷ್ಟೇ ಕುತೂಹಲ ಮೂಡಿಸಿದೆ ಕೂಡ.
ಇತ್ತೀಚೆಗೆ ಹಾಸನ ಬಳಿ ಮರಗಳ ಮಾರಣಹೋಮ ವಿಚಾರದಲ್ಲಿ ಪ್ರತಾಪ್ ಸಿಂಹ ಅವರ ಸೋದರನ ಬಂಧನವಾಗಿ ಬಿಡುಗಡೆಯಾಗಿತ್ತು. ಲೋಕಸಭೆಯೊಳಗೆ ಪ್ರತಾಪ್ ಸಿಂಹ ಹೆಸರಿನಲ್ಲಿ ಪಾಸ್ ಗಿಟ್ಟಿಸಿಕೊಂಡು ಒಳನುಗ್ಗಿ ದಾಂಧಲೆ ನಡೆಸಿದ್ದು, ಮೈಸೂರು-ಕೊಡಗು ಕ್ಷೇತ್ರದ ಮುಂಬರುವ ಲೋಕಸಭೆ ಚುನಾವಣೆ ಸಂಬಂಧ ಹೀಗೆ ಹಲವು ವಿಷಯಗಳಿಗೆ ಸಂಸದ ಪ್ರತಾಪ್ ಸಿಂಹ ಸುದ್ದಿಯಲ್ಲಿರುತ್ತಾರೆ.
ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡದ್ದು ಗೊತ್ತೇ ಇದೆ. ಮೈಸೂರು, ಮಂಡ್ಯ ಕ್ಷೇತ್ರಗಳ ಟಿಕೆಟ್ ಗೆ ಜೆಡಿಎಸ್ ಆಕಾಂಕ್ಷಿಯಾಗಿದೆ ಎಂಬ ವದಂತಿ ಕೂಡ ಇದೆ.
ಸಂಸದ ಪ್ರತಾಪ್ ಸಿಂಹ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರನ್ನು ಇಂದು ಬೆಳಗ್ಗೆ ಅವರ ಬಿಡದಿ ತೋಟದ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಬ್ಬರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಕುಮಾರಸ್ವಾಮಿಯನ್ನು ಭೇಟಿ ಮಾಡಿರುವ ಪ್ರತಾಪ್ ಸಿಂಹ, ಅವರ ಕಾಲಿಗೆ ನಮಸ್ಕರಿಸಿ ಕಷ್ಟಕಾಲದಲ್ಲಿ ಸತ್ಯಸಂಗತಿಯನ್ನು ಜನರ ಮುಂದಿಟ್ಟು ಬೆನ್ನಿಗೆ ನಿಂತ ನಿಮಗೆ ಧನ್ಯವಾದ ಕುಮಾರಣ್ಣ ಎಂದು ಹೇಳಿದ್ದಲ್ಲದೆ ತಮ್ಮ ಭಾವನೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಕೂಡ ಹಂಚಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


