ರಾಜಕೀಯ

ನಿತೀಶ್‌ ಕುಮಾರ್‌ ಆಹ್ವಾನಿಸಿದ್ರು; ನನಗೀಗ 91 ವರ್ಷ, ಈ ವಯಸ್ಸಿನಲ್ಲಿ ಪ್ರಯೋಗ ಮಾಡಲು ಬಯಸುವುದಿಲ್ಲ: HD ದೇವೇಗೌಡ

ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷವನ್ನು ತಮ್ಮ ಜನತಾದಳ ಸಂಯುಕ್ತದ (ಜೆಡಿಯು) ಜತೆ ವಿಲೀನಗೊಳಿಸುವಂತೆ ಹಾಗೂ ವಿರೋಧ ಪಕ್ಷಗಳ ಐಎನ್‌ಡಿಐಎ ಬಣ ಸೇರುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಸ್ತಾಪಿಸಿದ್ದರು. ಆದರೆ ಅದನ್ನು ನಿರಾಕರಿಸಿದ್ದಾಗಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ತಿಳಿಸಿದ್ದಾರೆ.

ನಿತೀಶ್‌ ಕುಮಾರ್‌ ಆಹ್ವಾನಿಸಿದ್ರು; ನನಗೀಗ 91 ವರ್ಷ, ಈ ವಯಸ್ಸಿನಲ್ಲಿ ಪ್ರಯೋಗ ಮಾಡಲು ಬಯಸುವುದಿಲ್ಲ: HD ದೇವೇಗೌಡ
ಎಚ್.ಡಿ ದೇವೇಗೌಡ
Published On :

ಬೆಂಗಳೂರು: ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷವನ್ನು ತಮ್ಮ ಜನತಾದಳ ಸಂಯುಕ್ತದ (ಜೆಡಿಯು) ಜತೆ ವಿಲೀನಗೊಳಿಸುವಂತೆ ಹಾಗೂ ವಿರೋಧ ಪಕ್ಷಗಳ ಐಎನ್‌ಡಿಐಎ ಬಣ ಸೇರುವಂತೆ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಸ್ತಾಪಿಸಿದ್ದರು. ಆದರೆ ಅದನ್ನು ನಿರಾಕರಿಸಿದ್ದಾಗಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ತಿಳಿಸಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ದೇವೇಗೌಡ, ಹಿಂದಿನ ಜನತಾದಳದ ವಿವಿಧ ಗುಂಪುಗಳಾದ ಜೆಡಿಯು- ಜೆಡಿಎಸ್ ಹಾಗೂ ಸಮಾಜವಾದಿ ಪಕ್ಷವನ್ನೂ ಒಳಗೊಂಡಂತೆ ಜನತಾ ಫ್ರೀಡಂ ಫ್ರಂಟ್ ರಚಿಸುವ ಬಯಕೆಯೊಂದಿಗೆ ಸುಮಾರು ಮೂರು ನಾಲ್ಕು ತಿಂಗಳ ಹಿಂದೆ ನಿತೀಶ್ ಕುಮಾರ್ ನನ್ನನ್ನು ಸಂಪರ್ಕಿಸಿದರು ಎಂದು ಹೇಳಿದರು

ಜೆಡಿಯು ಜೊತೆಗೆ ಜೆಡಿಎಸ್‌ ವಿಲೀನವಾಗಿ ಇಂಡಿಯಾ ಒಕ್ಕೂಟ ಸೇರುವ ಕುರಿತು ನಿತೀಶ್‌ ಕುಮಾರ್‌ ಆಹ್ವಾನ ನೀಡಿದ್ದರು ಇದನ್ನ ಜೆಡಿಎಸ್‌ ನಿರಾಕರಿಸಿತ್ತು ಎಂದು ಬಿಜೆಪಿ ಜೊತೆಗೆ ಮೈತ್ರಿಯಾಗಿ ಎರಡು ವಾರಗಳ ಬಳಿಕ ಜೆಡಿಎಸ್‌ ವರಿಷ್ಠರಾದ ಹೆಚ್‌ ಡಿ ದೇವೇಗೌಡರು ಹೇಳಿದ್ದಾರೆ.

ನಾಲ್ಕು ತಿಂಗಳ ಹಿಂದೆ ಜನತಾ ಫ್ರೀಡಂ ಫ್ರಂಟ್ ಪ್ರಸ್ತಾವನೆಯೊಂದಿಗೆ ಸಂಪರ್ಕಿಸಲಾಯಿತು. ಆದರೆ, ನಾನು ಒಪ್ಪುವುದಿಲ್ಲ ಎಂದು ಹೇಳಲಾಯಿತು ಎಂದ ದೇವೇಗೌಡ್ರು, ನನಗೆ ರಾಷ್ಟ್ರೀಯ ಹುದ್ದೆಗಳಲ್ಲಿ ಆಸಕ್ತಿ ಇಲ್ಲ. ಈಗಾಗಲೇ ನನಗೆ 91 ವರ್ಷ ಮತ್ತು ಕಾಂಗ್ರೆಸ್ ನನ್ನನ್ನು ಹೇಗೆ ಕೈಬಿಟ್ಟಿದೆ ಎಂಬುದನ್ನು ನೋಡಿದ್ದೇನೆ. ಈ ವಯಸ್ಸಿನಲ್ಲಿ ನನಗೆ ಯಾವುದೇ ಪ್ರಯೋಗಗಳು ಬೇಡ ಎಂದು ಹೇಳಿದರು. ನನ್ನ ಮನವೊಲಿಸಲು ನಿತೀಶ್ ತಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕಳುಹಿಸಿದರು. ಆದರೆ, ನಾನು ಒಪ್ಪಲಿಲ್ಲ. ನಾನು ಅವರಿಗೆ ಹೇಳಿದ್ದೇನೆ, ನೀವು ಮುಂದುವರಿಯಲು ಬಯಸಿದರೆ, ನೀವು ಇತರ ಪಕ್ಷಗಳನ್ನು ಸಂಪರ್ಕಿಸಬಹುದು ಎಂದು ಹೇಳಿದ್ದೇನೆ ಎಂದರು.

ಈ ಹಿಂದೆ ಜೆಡಿಎಸ್‌ನಲ್ಲಿ ಇದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ದೇವೇಗೌಡ, ಕಾಂಗ್ರೆಸ್‌ನ ಸಿದ್ದರಾಮಯ್ಯ... ನಾನು ರಾಜಕಾರಣಕ್ಕೆ ತಂದ ವ್ಯಕ್ತಿ... ಜೆಡಿಎಸ್ ಬಂದರೆ ನಾನು ಹೊರನಡೆಯುತ್ತೇನೆ ಎಂದು ಹೇಳಿದ್ದರು ಎಂದರು.

ನಾನು ಮತ್ತಷ್ಟು ಚರ್ಚೆ ನಡೆಸಲು ಬಯಸುವುದಿಲ್ಲ. ನಾನು ಸಾಕಷ್ಟು ಅನುಭವಿಸಿದ್ದೇನೆ ಎಂದು ಜೆಡಿಎಸ್, ಬಿಜೆಪಿಯ 'ಬಿ' ಟೀಂ ಎಂದು 2018ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟೀಕಿಸಿದ್ದರ ಕುರಿತು ಪ್ರತಿಕ್ರಿಯಿಸಿದರು. ಈ ಟೀಕೆಯನ್ನು ಕಳೆದ ಪುನರುಚ್ಚರಿಸಿದ್ದರು.

ರಾಹುಲ್ ಗಾಂಧಿ ಅವರು ಜೆಡಿಎಸ್ ಪಕ್ಷಕ್ಕೆ ಬಿಜೆಪಿಯ 'ಬಿ' ಟೀಮ್ ಪ್ರಮಾಣಪತ್ರ ನೀಡಿದ್ದರು. ಕಳೆದ ಚುನಾವಣೆಯಲ್ಲಿ ಮಾತ್ರವಲ್ಲ, ಅದರ ಹಿಂದಿನ ಚುನಾವಣೆಯಲ್ಲಿ ಕೂಡ ಎಂದು ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.