ಹೇ ಪ್ರಭು! ಚಹಾ ಮಾರಿಕೊಂಡು ಆದರೂ ಬದುಕಬಹುದು, ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ! ಯತ್ನಾಳ್ ಹೇಳಿದ್ದು ಯಾರಿಗೆ?
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕವಾದ ನಂತರ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾರ್ಮಿಕವಾಗಿ ಫೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ಟೀಕೆಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ.

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ನೇಮಕವಾದ ನಂತರ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾರ್ಮಿಕವಾಗಿ ಫೋಸ್ಟ್ ಮಾಡುವ ಮೂಲಕ ಕಾಂಗ್ರೆಸ್ ಟೀಕೆಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ.
ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ ಅಂತ ಹೊರಗೆ ಟೀ ಕುಡಿಯಲು ಹೋದವರು ಜಗನ್ನಾಥ ಭವನದ ಎದುರು ಟೀ ಮಾರಿಕೊಂಡು ಕೂತಿದ್ದಾರಂತೆ, ಮೋದಿ ಮಾದರಿ!! ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?! "ಜಾರಿದವರ ಯತ್ನ ಬೆಲ್ಲ" ಆಗ್ಲಿಲ್ಲವಲ್ಲಪ್ಪ ಎಂಬ ಕಾಂಗ್ರೆಸ್ ಫೋಸ್ಟ್ ಗೆ ಪ್ರತಿಕ್ರಿಯಿಸಿರುವ ಯತ್ನಾಳ್, ಹೇ ಪ್ರಭು! ಚಹಾ ಮಾರಿಕೊಂಡು ಆದರೂ ಬದುಕಬಹದು, ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ! ಎಂದಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ವರ್ಗಾವಣೆ ವಿಚಾರದಲ್ಲಿ ಕುಮಾರಸ್ವಾಮಿ ಆರೋಪಿಸಿದ ಆ ವಿವೇಕಾನಂದ ಬೇರೆ, "ಹಲೋ ಅಪ್ಪ" ವಿವೇಕಾನಂದ ಬೇರೆ! ಸಿದ್ದರಾಮಯ್ಯನವರು ಸ್ಪಷ್ಟನೆ ನೀಡಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಇದು ಸಿದ್ದರಾಮಯ್ಯ ಅವರನ್ನು ಸಮರ್ಥನೆಯ ಹೇಳಿಕೆಯೋ ಅಥವಾ ಟೀಕೆಯೋ ಗೊತ್ತಿಲ್ಲ. ಇದಕ್ಕೂ ಮುನ್ನ ನ ದೈನ್ಯಂ, ನ ಪಲಾಯನಂ, ಯೋಧ ಎಂದಿಗೂ ದೂರಲಾರ ಅಥವಾ ವಿಷಾದ ವ್ಯಕ್ತಪಡಿಸಲಾರ ಎಂದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


