ರಾಜ್ಯಾದ್ಯಂತ ಜನರ ಚಿತ್ತ ಬಿಜೆಪಿಯತ್ತ, ಕಮಲ ಅರಳಿಸಲು ಸಜ್ಜು: ಪ್ರಧಾನಿ ಮೋದಿ
ರಾಜ್ಯಾದ್ಯಂತ ಜನರ ಚಿತ್ತ ಬಿಜೆಪಿಯತ್ತ ಹೊರಳಿದ್ದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿಸಲು ಸಜ್ಜಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.

ನಂಜನಗೂಡು: ರಾಜ್ಯಾದ್ಯಂತ ಜನರ ಚಿತ್ತ ಬಿಜೆಪಿಯತ್ತ ಹೊರಳಿದ್ದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿಸಲು ಸಜ್ಜಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕಾಶಿ ನಂಜನಗೂಡಿನಲ್ಲಿಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಯೋಗ, ಆಯುರ್ವೇದ ಅಥವಾ ಭಾರತೀಯ ಮಸಾಲೆಗಳಾಗಲಿ, ಅವುಗಳನ್ನು ಜನಪ್ರಿಯಗೊಳಿಸಲು ಕಾಂಗ್ರೆಸ್ ಎಂದಿಗೂ ಏನನ್ನೂ ಮಾಡಲಿಲ್ಲ. ನಾವು ಈ ದೃಷ್ಟಿಯನ್ನು ಬದಲಾಯಿಸಿದ್ದು, ಫಲಿತಾಂಶವನ್ನು ಎಲ್ಲರೂ ನೋಡುತ್ತಿದ್ದೀರಿ ಎಂದರು.
ಕಾಂಗ್ರೆಸ್ ನಾಯಕರು ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಈ ಮಹಾನ್ ರಾಜ್ಯದ ಶ್ರೀಮಂತ ಕೊಡುಗೆಯನ್ನು ಏಕೆ ಅವಮಾನಿಸಿದ್ದಾರೆ? ಎಂದು ಪ್ರಶ್ನಿಸಿದರು. ಅಲ್ಲದೇ ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ಇಡೀ ದೇಶದಲ್ಲಿಯೇ ನಂಬರ್ 1 ರಾಜ್ಯವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಭ್ರಷ್ಟಾಚಾರ ಮತ್ತು ತುಷ್ಟೀಕರಣ ಮಾಡುವ ಕಾಂಗ್ರೆಸ್‌ನಿಂದ ಯುವಕರ ಭವಿಷ್ಯವನ್ನು ರೂಪಿಸಲು ಸಾಧ್ಯವೇ? ಮೊದಲ ಬಾರಿಗೆ ಮತದಾನ ಮಾಡುವವರು ಈ ಬಗ್ಗೆ ಚಿಂತಿಸಿ. ನಿಮ್ಮ ಪೋಷಕರು ಅನುಭವಿಸಿದ ಕಷ್ಟವನ್ನು ನೀವು ಕೂಡಾ ಪಡಬಾರದೆಂದು ನಿಮ್ಮೆಲ್ಲಾ ಕಷ್ಟಗಳನ್ನು ನಿವಾರಿಸಲು ನಾನಿದ್ದೇನೆ ಎಂದರು.
ಇದನ್ನೂ ಓದಿ: 'ಹೆದರಿದ' ಕಾಂಗ್ರೆಸ್ ಪ್ರಚಾರ ನಿಲ್ಲಿಸಿದ್ದವರನ್ನು ಮತ್ತೆ ಕರೆತಂದಿದೆ: ಸೋನಿಯಾ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಕಾಂಗ್ರೆಸಿಗರಿಗೆ ಸೋಲಿನ ಭೀತಿ ಕಾಡುತ್ತಿದೆ. ಎಷ್ಟರಮಟ್ಟಿಗೆ ಎಂದರೆ ತಮ್ಮ ಸೋಲಿಗೆ ಯಾರನ್ನು ಹೊಣೆಯಾಗಿಸುವುದು ಎಂಬ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯವನ್ನು ವಿಂಗಡಿಸುವ ವಿಚ್ಛಿದ್ರಕಾರಿ ಮನಸ್ಥಿತಿ ಇರುವ, ವಿದೇಶಿ ಶಕ್ತಿಗಳೊಂದಿಗೆ ಜೊತೆಗೂಡಿ ಭಾರತದ ಸಾರ್ವಭೌಮತ್ವವನ್ನು ಅವಮಾನಿಸುವ ಕಾಂಗ್ರೆಸ್‌ಗೆ ಪ್ರತಿ ಕನ್ನಡಿಗನೂ ತಕ್ಕ ಉತ್ತರ ಕೊಡಲೇಬೇಕು ಎಂದು ಜನತೆಯಲ್ಲಿ ಮನವಿ ಮಾಡಿದರು.
ನಂತರ ನಂಜನಗೂಡಿ ಪ್ರಸಿದ್ಧ ನಂಜುಂಡೇಶ್ವರಿ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆಯನ್ನು ಪ್ರಧಾನಿ ಮೋದಿ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


