ರಾಜಕೀಯ

ನೀವು 'ಇಂಡಿಯಾ'ಗೆ ಸವಾಲು ಹಾಕುತ್ತೀರಾ?: ಬೆಂಗಳೂರಲ್ಲಿ ಬಿಜೆಪಿ ವಿರುದ್ಧ ಗುಡುಗಿದ ಮಮತಾ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಒಂದಾಗಿರುವ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯನ್​ ನ್ಯಾಷನಲ್ ಡೆವಲಪ್ ಮೆಂಟಲ್​​ ಇನ್​ಕ್ಲೂಸಿವ್​​​​ ಅಲೈನ್ಸ್(INDIA) ಎಂದು...

ನೀವು 'ಇಂಡಿಯಾ'ಗೆ ಸವಾಲು ಹಾಕುತ್ತೀರಾ?: ಬೆಂಗಳೂರಲ್ಲಿ ಬಿಜೆಪಿ ವಿರುದ್ಧ ಗುಡುಗಿದ ಮಮತಾ
ಮಮತಾ ಬ್ಯಾನರ್ಜಿ
Published On :

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಒಂದಾಗಿರುವ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯನ್​ ನ್ಯಾಷನಲ್ ಡೆವಲಪ್ ಮೆಂಟಲ್​​ ಇನ್​ಕ್ಲೂಸಿವ್​​​​ ಅಲೈನ್ಸ್(INDIA) ಎಂದು ನಾಮಕರಣ ಮಾಡಲಾಗಿದ್ದು, ನೀವು 'ಇಂಡಿಯಾ'ಗೆ ಸವಾಲು ಹಾಕುತ್ತೀರಾ? ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಮಂಗಳವಾರ ಗುಡುಗಿದ್ದಾರೆ.

ಇಂದು ಬೆಂಗಳೂರಿನಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಎನ್‌ಡಿಎ, ನೀವು INDIAಗೆ ಸವಾಲು ಹಾಕುತ್ತೀರಾ? ಬಿಜೆಪಿ, ಇಂಡಿಯಾಗೆ ಸವಾಲು ಹಾಕಬಹುದೇ? ಇತರರು INDIAಗೆ ಸವಾಲು ಹಾಕಬಹುದೇ? ನಾವು ನಮ್ಮ ಮಾತೃಭೂಮಿಯನ್ನು ಪ್ರೀತಿಸುತ್ತೇವೆ. ನಾವು ಈ ದೇಶದ ದೇಶಭಕ್ತರು. ನಾವು ಯುವಕರಿಗಾಗಿ, ರೈತರಿಗಾಗಿ, ನಾವು ದಲಿತರಿಗಾಗಿ, ಉತ್ತಮ ಆರ್ಥಿಕತೆಗಾಗಿ, ದೇಶಕ್ಕಾಗಿ ನಾವು ಒಗ್ಗಟ್ಟಾಗಿದ್ದೇವೆ" ಎಂದರು.

ಎನ್​ಡಿಎಗೆ ಅಸ್ತಿತ್ವವೇ ಇಲ್ಲ. ಸರ್ಕಾರವನ್ನು ಖರೀದಿ ಮಾಡುವುದೇ ಅದರ ಕೆಲಸ. ಅದಕ್ಕೆ ಉದಾಹರಣೆ ಮಣಿಪುರ ಇರಬಹುದು, ಉತ್ತರ ಪ್ರದೇಶ ಇರಬಹುದು, ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಅದನ್ನು ನೋಡಿರಬಹುದು. ಸರ್ಕಾರವನ್ನು ಬೀಳಿಸುವುದು, ಸರ್ಕಾರ ಖರೀದಿ ಮಾಡುವುದು ಬಿಜೆಪಿಯವರ ಕೆಲಸವಾಗಿದೆ. ಅಧಿಕಾರ ದುರ್ಬಳಕೆ ಮಾಡಿ ಪ್ರಜಾಪ್ರಭುತ್ವವನ್ನು ಖರೀದಿಸುತ್ತಿದೆ ಎಂದು ಬಿಜೆಪಿ ವಿರುದ್ಧ ದೀದಿ ವಾಗ್ದಾಳಿ ನಡೆಸಿದರು.

ನಾವು ನಮ್ಮ ತಾಯಿ ನಾಡನ್ನು ಪ್ರೀತಿಸುತ್ತೇವೆ. ನಾವು ಜನರಿಗಾಗಿ ದೇಶಕ್ಕಾಗಿ ಕೆಲಸ ಮಾಡುತ್ತೇವೆ. ಮುಂದಿನ ನಮ್ಮ ಎಲ್ಲಾ ಹೋರಾಟ ಇಂಡಿಯಾ ಹೆಸರಿನಲ್ಲಿ‌ ನಡೆಯಲಿದೆ. ಸಾಧ್ಯವಾದ್ರೆ ನಮ್ಮನ್ನು‌ ಎದುರಿಸಿ ಎಂದು ಎನ್​ಡಿಎ ಮೈತ್ರಿಕೂಟಕ್ಕೆ ಟಿಎಂಸಿ ಮುಖ್ಯಸ್ಥೆ ಸವಾಲು ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.