ರಾಜಕೀಯ

ಯಡ್ಡಿಯೂರಪ್ಪನವರಿಗೆ ಕಲ್ಲು ಹೊಡೆದ್ರೆ ಪೆಟ್ಟು ಬೀಳೋದು ಬಿಜೆಪಿಗೇ: ಬಿ ವೈ ವಿಜಯೇಂದ್ರ

ಯಡಿಯೂರಪ್ಪನವರಿಗೆ(B S Yedyurappa) ಕಲ್ಲು ಹೊಡೆದರೆ ಪೆಟ್ಟು ಬೀಳೋದು ಬಿಜೆಪಿ (BJP) ಮೇಲೆಯೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಎಸ್‌ವೈ ಅವರ ಪುತ್ರ ಬಿ.ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.

ಯಡ್ಡಿಯೂರಪ್ಪನವರಿಗೆ ಕಲ್ಲು ಹೊಡೆದ್ರೆ ಪೆಟ್ಟು ಬೀಳೋದು ಬಿಜೆಪಿಗೇ: ಬಿ ವೈ ವಿಜಯೇಂದ್ರ
ಬಿ ಎಸ್ ಯಡಿಯೂರಪ್ಪ-ಬಿ ವೈ ವಿಜಯೇಂದ್ರ
Published On :

ವಿಜಯಪುರ: ಯಡಿಯೂರಪ್ಪನವರಿಗೆ(B S Yedyurappa) ಕಲ್ಲು ಹೊಡೆದರೆ ಪೆಟ್ಟು ಬೀಳೋದು ಬಿಜೆಪಿ (BJP) ಮೇಲೆಯೇ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಬಿಎಸ್‌ವೈ ಅವರ ಪುತ್ರ ಬಿ.ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ. 

ಯಡ್ಡಿಯೂರಪ್ಪ ಹಿರಿಯರು ಅವರ ಬಗ್ಗೆ ಮಾತನಾಡಲ್ಲ’ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ವಿಜಯಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಿರಿಯರಾದಂತಹ ಯತ್ನಾಳ್ ಅವರ ಹೇಳಿಕೆಯನ್ನ ನಾನು ಗಮನಿಸಿದ್ದೇನೆ. ಇದು ಉತ್ತಮ ಬೆಳವಣಿಗೆ ಎಂದು ಭಾವಿಸಬಹುದು. ಪಕ್ಷದ ಹಿತದೃಷ್ಟಿಯಿಂದ ಯಡ್ಡಿಯೂರಪ್ಪ ಅವರಿಗೆ ಕಲ್ಲು ಹೊಡೆದ್ರೆ ಅದರ ಪೆಟ್ಟು ಬೀಳೋದು ಬಿಜೆಪಿ ಮೇಲೆಯೇ ಎಂದಿದ್ದಾರೆ. 

ಈಗಲಾದರೂ ಅರ್ಥ ಮಾಡಿಕೊಂಡು ಯತ್ನಾಳ್ ಅವರು ಹೇಳಿಕೆ ಕೊಟ್ಟಿರುವುದನ್ನು ಸ್ವಾಗತ ಮಾಡುತ್ತೇನೆ. ಏನೇ ಸಮಸ್ಯೆ ಇದ್ದರೂ, ಏನೇ ಗೊಂದಲಗಳು ಇದ್ದರೂ ಅವುಗಳನ್ನು ಕುಳಿತು ಚರ್ಚೆ ಮಾಡಿ ಪಕ್ಷದೊಳಗೇ ಬಗೆಹರಿಸಿಕೊಳ್ಳಬೇಕೆ ಹೊರತು ಬಹಿರಂಗವಾಗಿ ಹೇಳಿಕೆ ನೀಡುವುದು ಸೂಕ್ತವಲ್ಲ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಅಂದರೆ ಕೆಲವು ಸಮಸ್ಯೆಗಳನ್ನ ಸರಿಮಾಡಿಕೊಂಡು ಮುಂದೆ ಹೋಗಬೇಕಾಗುತ್ತದೆ. ಬರುವ ದಿನದಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.