'ಅಣ್ಣ ಮಾತನಾಡೋದನ್ನ ತಮ್ಮ ಕೇಳ್ತಾ ಇರಬೇಕು, ಕುಮಾರಸ್ವಾಮಿ ಸಮಾಧಾನಕ್ಕೆ ಏನಾದರೂ ಮಾತನಾಡಲಿ': ಡಿ ಕೆ ಶಿವಕುಮಾರ್
'ಮಾಯಾನೋ, ಜ್ಯೋತಿಷ್ಯನೋ, ಧರ್ಮನೋ, ಶ್ರಮನೋ ಒಟ್ಟಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಳೆದ ಮೂರು ವರ್ಷಗಳ ಶ್ರಮ ಇದೆ, ನಮ್ಮ ಕಾರ್ಯಕರ್ತರನ್ನು ಮಲಗಲು ಬಿಟ್ಟಿಲ್ಲ, ಆ ಶ್ರಮದ ಪ್ರತಿಫಲ ಇವತ್ತು ಅನುಭವಿಸುತ್ತಿದ್ದೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಆರೋಪಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರು: 'ಮಾಯಾನೋ, ಜ್ಯೋತಿಷ್ಯನೋ, ಧರ್ಮನೋ, ಶ್ರಮನೋ ಒಟ್ಟಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಳೆದ ಮೂರು ವರ್ಷಗಳ ಶ್ರಮ ಇದೆ, ನಮ್ಮ ಕಾರ್ಯಕರ್ತರನ್ನು ಮಲಗಲು ಬಿಟ್ಟಿಲ್ಲ, ಆ ಶ್ರಮದ ಪ್ರತಿಫಲ ಇವತ್ತು ಅನುಭವಿಸುತ್ತಿದ್ದೇವೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ಆರೋಪಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಸರ್ಕಾರದ ವಿರುದ್ಧ ಹೆಚ್ಡಿಕೆ ವರ್ಗಾವಣೆ ದಂಧೆ, ಸಚಿವರು ಗುತ್ತಿಗೆದಾರರಿಂದ ಪರ್ಸೆಂಟೇಜ್ ಕಮಿಷನ್ ಗೆ ಬೇಡಿಕೆಯಿಡುತ್ತಿರುವ ಆರೋಪ ಮಾಡಿರುವುದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಉತ್ತರಿಸಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಸಮಾಧಾನಕ್ಕೆ ಏನಾದರೂ ಮಾತನಾಡಲಿ, ಪಾಪ ಅವರು ಸಿಂಗಾಪುರಕ್ಕೋ, ಇನ್ನೆಲ್ಲಿಗೋ ಹೋಗಿ ವಿಶ್ರಾಂತಿ ತೆಗೆದುಕೊಂಡು ಬಂದಿದ್ದಾರೆ, ಒಳ್ಳೆದಾಗಲಿ ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಅವರ ಆಶೀರ್ವಾದ ಬಹಳ ಮುಖ್ಯ. ಅವರ ಮಾರ್ಗದರ್ಶನ ಬಹಳ ಮುಖ್ಯ, ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗವಿದೆ, ಎಲ್ಲಿ ಭಗವಂತ ಇದ್ದಾನೋ ಅಲ್ಲಿ ಭಕ್ತಿಯಿದೆ. ಇದನ್ನೋ ನಂಬಿಕೊಂಡು ಶ್ರಮಪಟ್ಟು ಇಂದು ಈ ಮಟ್ಟಕ್ಕೆ ಬಂದಿದ್ದೇವೆ. ಜನ ವಿಶ್ವಾಸ, ನಂಬಿಕೆಯಿಟ್ಟು ವೋಟ್ ಹಾಕಿ ಗೆಲ್ಲಿಸಿದ್ದಾರೆ, ಅವರ ಋಣ ನಮ್ಮ ಮೇಲಿದ್ದು ಕೆಲಸ ಮಾಡಬೇಕು ಎಂದರು.
ಅವರ ಅನುಭವದಿಂದ ಮಾತನಾಡುತ್ತಾರೆ, ಅಣ್ಣ ಮಾತನಾಡುದನ್ನ ತಮ್ಮ ಕೇಳ್ತಾ ಇರಬೇಕು ಎಂದು ಕೂಡ ಟಾಂಗ್ ಕೊಟ್ಟರು. ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ನಾವು ಕುಟುಂಬ ಸಮೇತ ಪ್ರವಾಸ ಹೋಗಿದ್ದು ಯುರೋಪ್ಗೆ ಆದ್ರೆ, ಸರ್ಕಾರ ಕೆಡವಲು ಹೋಗಿದ್ದೇವೆ ಎಂಬ ರೀತಿ ಬಿಂಬಿಸಲಾಗಿದೆ. 19 ಸ್ಥಾನ ಗೆದ್ದ ನಮ್ಮ ಬಗ್ಗೆ ಎಷ್ಟು ಭಯ ಇದೆ ಎಂದು ಅವರ ಹೇಳಿಕೆಯಿಂದ ಗೊತ್ತಾಗುತ್ತದೆ ಎಂದು ಕಳೆದ ರಾತ್ರಿ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


