ಸಿಎಂ-ಡಿಸಿಎಂ ವೈಯಕ್ತಿಕ ಹಿತಾಸಕ್ತಿಯ ಮೇಲಾಟದಲ್ಲಿ ರಾಜ್ಯದ ರೈತರ ಬದುಕು ದುರ್ಬರ!
ತಮ್ಮ ಪ್ರಚಾರ ಕಾಪಾಡಿಕೊಳ್ಳಲು ಆಗಾಗ ರಾಷ್ಟ್ರಭಕ್ತ ಸಂಘಟನೆಗಳನ್ನು ಎಳೆದು ತರಬೇಕಾಗಿರುವ ದಯನೀಯ ಸ್ಥಿತಿಗೆ ಇವರು ತಲುಪಿಬಿಟ್ಟರಲ್ಲಾ! ಛೇ ಕಾಲೆಳೆದಿದೆ.

ಬೆಂಗಳೂರು: ಸ್ವಂತಕ್ಕೆ ಮತ್ತು ಕುಟುಂಬಕ್ಕಾಗಿ ಮಾತ್ರವೇ "ದುಡಿಯುತ್ತಾ", ಅಂಥದ್ದೇ ಪಕ್ಷದ ಸಂಸ್ಕಾರ ಪಡೆದ ಪ್ರಿಯಾಂಕ್ ಖರ್ಗೆಯವರಿಗೆ ಇತರರನ್ನು ಉದ್ಧಾರ ಮಾಡುವುದು ಬಿಡಿ, ಅದನ್ನು ಕಾಣುವುದೂ ಸಾಧ್ಯವಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ತಮ್ಮ ಪ್ರಚಾರ ಕಾಪಾಡಿಕೊಳ್ಳಲು ಆಗಾಗ ರಾಷ್ಟ್ರಭಕ್ತ ಸಂಘಟನೆಗಳನ್ನು ಎಳೆದು ತರಬೇಕಾಗಿರುವ ದಯನೀಯ ಸ್ಥಿತಿಗೆ ಇವರು ತಲುಪಿಬಿಟ್ಟರಲ್ಲಾ! ಛೇ ಕಾಲೆಳೆದಿದೆ. ಸಿಎಂ-ಡಿಸಿಎಂ ಅವರ ವೈಯಕ್ತಿಕ ಹಿತಾಸಕ್ತಿಯ ಮೇಲಾಟದಲ್ಲಿ ರಾಜ್ಯದ ರೈತರ ಬದುಕು ದುರ್ಬರವಾಗುತ್ತಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ತಾರಕಕ್ಕೇರಿದ ಬಣಗಳ ಜಗಳ..!
ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು..!
ಜಿ.ಪರಮೇಶ್ವರ್
ಡಿ.ಕೆ.ಶಿವಕುಮಾರ್
ಮಲ್ಲಿಕಾರ್ಜುನ್ ಖರ್ಗೆ
ಎಂ.ಬಿ.ಪಾಟೀಲ್
ಚುನಾವಣೆ ನಂತರ ಉಪ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು..!
ಹೆಚ್.ಸಿ.ಮಹದೇವಪ್ಪ
ಬಿ.ಕೆ.ಹರಿಪ್ರಸಾದ್
ಕೆ.ಎನ್.ರಾಜಣ್ಣ
ಸತೀಶ್ ಜಾರಕಿಹೊಳಿ
ಜಮೀರ್ ಅಹ್ಮದ್ ಖಾನ್ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯದಲ್ಲಿ ಬರಗಾಲ ಬಂದಿದೆ ಕುಡಿಯಲು ನೀರಿಲ್ಲ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಇದ್ಯಾವುದರ ಚಿಂತೆ ಇಲ್ಲದ #ATMSarkara ಸಂತೆಯಲ್ಲಿ ಬೀದಿ ಜಗಳ ಮಾಡುತ್ತಾ ಕರ್ನಾಟಕವನ್ನು ಬಲಿಕೊಡುತ್ತಿದೆ ಎಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


