ರಾಜಕೀಯ

ರಾಹುಲ್‌ ಗಾಂಧಿಯ ಮುಂದಿನ ಟಾರ್ಗೆಟ್‌ ಭಾರತೀಯ ಸೇನೆ: ವಿಡಿಯೋ ಹಂಚಿಕೊಂಡು ಬಿಜೆಪಿ ಕಿಡಿ!

ಇಷ್ಟು ಕಾಲ ಜಾತಿ-ಜಾತಿಗಳ ನಡುವೆ, ಭಾಷೆ-ಭಾಷೆಗಳ ನಡುವೆ ಕಂದಕ ಸೃಷ್ಟಿಸಲು ಹರಸಾಹಸಪಡುತ್ತಾ ಬಂದ ರಾಹುಲ್‌ ಗಾಂಧಿಯ ಮುಂದಿನ ಟಾರ್ಗೆಟ್‌ ಭಾರತೀಯ ಸೇನೆ ಎಂದು ಬಿಜೆಪಿ ಕಿಡಿಕಾರಿದೆ.

ರಾಹುಲ್‌ ಗಾಂಧಿಯ ಮುಂದಿನ ಟಾರ್ಗೆಟ್‌ ಭಾರತೀಯ ಸೇನೆ: ವಿಡಿಯೋ ಹಂಚಿಕೊಂಡು ಬಿಜೆಪಿ ಕಿಡಿ!
ರಾಹುಲ್ ಗಾಂಧಿ
Published On :

ನವದೆಹಲಿ: ಇಷ್ಟು ಕಾಲ ಜಾತಿ-ಜಾತಿಗಳ ನಡುವೆ, ಭಾಷೆ-ಭಾಷೆಗಳ ನಡುವೆ ಕಂದಕ ಸೃಷ್ಟಿಸಲು ಹರಸಾಹಸಪಡುತ್ತಾ ಬಂದ ರಾಹುಲ್‌ ಗಾಂಧಿಯ ಮುಂದಿನ ಟಾರ್ಗೆಟ್‌ ಭಾರತೀಯ ಸೇನೆ ಎಂದು ಬಿಜೆಪಿ ಕಿಡಿಕಾರಿದೆ.

ಅದರ ಹಿಂದಿರುವ ಕಾರಣಗಳೇನು? ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಉತ್ತರವಿದೆ ಎಂದು ಹೇಳಿದ್ದು, ಅಷ್ಟಕ್ಕೂ ರಾಹುಲ್‌ ಗಾಂಧಿಯವರಿಗೆ ಈ ಮನಸ್ಥಿತಿ ಯಾಕೆ? ಎಂದು ಪ್ರಶ್ನಿಸಿದೆ.

ಡೋಕ್ಲಾಮ್‌ ವಿವಾದದ ಸಮಯದಲ್ಲಿ ನಮ್ಮ ಹೆಮ್ಮೆಯ ಸೈನಿಕರು, ಚೀನಾದ ಸೈನಿಕರೊಂದಿಗೆ ವೀರಾವೇಷದಿಂದ ಹೋರಾಡುತ್ತಿರುವ ಸಂದರ್ಭದಲ್ಲಿ, ರಾಹುಲ್‌ ಗಾಂಧಿಯವರು ರಹಸ್ಯವಾಗಿ ಚೀನಾದ ರಾಯಭಾರಿಯನ್ನು ಭೇಟಿ ಮಾಡಿ, ಅವರೊಂದಿಗೆ ಏಕೆ ನ್ಯೂಡಲ್ಸ್‌ ತಿಂದರು ಎಂಬ ಪ್ರಶ್ನೆಗೆ ಇದುವರೆಗೂ ರಾಹುಲ್‌ ಗಾಂಧಿಯವರಿಂದ ಉತ್ತರ ಬಂದಿಲ್ಲ. ಆದರೆ ಈಗ ದೇಶವನ್ನು ಕಾಯ್ದ ಹೆಮ್ಮೆಯ ಸೈನಿಕರ ನಡುವೆ ಬೆಂಕಿ ಹಚ್ಚುವಂತಹ ಕೆಲಸಕ್ಕೆ ರಾಹುಲ್ ಗಾಂಧಿಯವರು ಮುಂದಾಗಿರುವುದು ಕ್ಷಮಿಸಲಾರದಂತಹ ಅಪರಾಧ ಎಂದು ಟೀಕಾ ಪ್ರಹಾರ ನಡೆಸಿದೆ. 

ತಮ್ಮ ಸ್ವಾರ್ಥ ರಾಜಕಾರಣದ ಸಾಧನೆಗಾಗಿ ರಾಹುಲ್‌ ಗಾಂಧಿಯವರು ಎಂತಹ ಕೆಳ ಮಟ್ಟಕ್ಕಾದರೂ ಇಳಿಯುತ್ತಾರೆಂಬುದು ಅವರ ನಡೆಗಳಿಂದಲೇ ಸಾಬೀತಾಗಿದೆ. ಪ್ರತಿ ಕ್ಷಣ ಭಾರತವನ್ನು ಒಡೆಯುವ ಬಗ್ಗೆ ಯೋಚಿಸುವವರು, ಭಾರತ್‌ ಜೋಡೋ ಹೆಸರಿನಲ್ಲಿ ಯಾತ್ರೆ ಮಾಡಿದ್ದು ಸಹ ಬರೀ ನಾಟಕ ಎಂದು ಕಿಡಿಕಾರಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.