ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ಅನುಕೂಲ, ಐ ವಿಶ್ ದೆಮ್ ಆಲ್ ದಿ ಬೆಸ್ಟ್: ಡಿ ಕೆ ಶಿವಕುಮಾರ್
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಮೈತ್ರಿಯಾದರೆ ಬಹಳ ಸಂತೋಷ; ಈ ಹಿಂದೆ ಕುಮಾರಣ್ಣ, ಅಶೋಕಣ್ಣ ಮೈತ್ರಿ ಮಾಡಿಕೊಂಡಿದ್ದರು. ಈಗ ಮೈತ್ರಿಯಾದರೆ ಸಿದ್ಧಾಂತ ಹೇಗೆ ಉಳಿಸಿಕೊಳ್ತಾರೋ ಗೊತ್ತಿಲ್ಲ ಎಂದರು.

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಮೈತ್ರಿಯಾದರೆ ಬಹಳ ಸಂತೋಷ; ಈ ಹಿಂದೆ ಕುಮಾರಣ್ಣ, ಅಶೋಕಣ್ಣ ಮೈತ್ರಿ ಮಾಡಿಕೊಂಡಿದ್ದರು. ಈಗ ಮೈತ್ರಿಯಾದರೆ ಸಿದ್ಧಾಂತ ಹೇಗೆ ಉಳಿಸಿಕೊಳ್ತಾರೋ ಗೊತ್ತಿಲ್ಲ. ಜೆಡಿಎಸ್ ಉಳಿದುಕೊಳ್ಳುತ್ತೋ ಇಲ್ವೋ ಗೊತ್ತಿಲ್ಲ. ಮೈತ್ರಿ ಮಾತುಕತೆಗೆ ನಮ್ಮ ವಿರೋಧವಿಲ್ಲ, ಐ ವಿಶ್ ದೆಮ್ ಆಲ್ ದಿ ಬೆಸ್ಟ್’, ಕಾಂಗ್ರೆಸ್ ಗೆ ಅನುಕೂಲವೇ ಎಂದರು.
ಆಪರೇಷನ್ ಹಸ್ತದ ಬಗ್ಗೆ ಮಾತನಾಡಿ, ‘ನಾನು ಆಪರೇಷನ್ ಹಸ್ತಕ್ಕೆ ವಿರೋಧ; ನಮ್ಮದು ಸ್ನೇಹದ ಹಸ್ತ. ನಮ್ಮ ಸಿದ್ಧಾಂತ, ಭಾರತ್ ಜೋಡೋ ಯಾತ್ರೆಗೆ ಯಾರು ಮೆಚ್ಚುಗೆ ಕೊಡುತ್ತಾರೋ ಅವರನ್ನು ಅಪ್ಪಿಕೊಂಡು ಬರಮಾಡಿಕೊಳ್ಳುತ್ತೇವೆ ಎಂದರು.
ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮನಗರ ಬಂದ್ ರಾಜಕೀಯ ಪ್ರೇರಿತ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಮೆಡಿಕಲ್ ಕಾಲೇಜಿನ ಟೆಂಡರ್ ನಡೆದಿತ್ತು. ಭೂಮಿ ಪೂಜೆ ಆಗುವ ಹೊತ್ತಿಗೆ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದರು. ಯೂನಿವರ್ಸಿಟಿ ಒಂದು ಕಡೆ ಮೆಡಿಕಲ್ ಕಾಲೇಜು ಇನ್ನೊಂದು ಕಡೆ ಆಗುತ್ತೆ. ಮೆಡಿಕಲ್ ಕಾಲೇಜು ಕನಕಪುರಕ್ಕೆ ಕೊಡುವುದಕ್ಕೆ ಕುಮಾರಸ್ವಾಮಿ ದಡ್ಡರಲ್ಲ. ಪ್ರತಿಭಟನೆ ಮಾಡುವವರು ಹಾಗೂ ಜನರ ಮಧ್ಯೆ ಜಗಳ ಮಾಡುವವರು ಮಾಡಿಕೊಳ್ಳಲಿ ಎಂದು ಬಿಜೆಪಿಯ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದರು.
ನಗರದ ಫ್ರೀಡಂಪಾರ್ಕಿನಲ್ಲಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಕೇಂದ್ರ ಸರ್ಕಾರದಿಂದ ಮೊದಲು ಮೇಕೆದಾಟು, ಮಹಾದಾಯಿಗೆ ಅನುಮತಿ ಕೊಡಿಸಲಿ. ಜನ ಅವರನ್ನು ವೀರೋಧಿಸಿದ್ದಕ್ಕೆ ಪ್ರತಿಪಕ್ಷ ನಾಯಕನ್ನು ಆಯ್ಕೆ ಮಾಡಲಿಕ್ಕೆ ಆಗಲಿಲ್ಲ. ಗ್ಯಾರಂಟಿ ಯೋಜನೆಗಳು ಜಾರಿ ಆಗಿದೆ; ಅದಕ್ಕೆ ಅವರಿಗೆ ಸಹಿಸಲಿಕ್ಕೆ ಆಗಲಿಲ್ಲ. ನೂರು ದಿನಗಳಲ್ಲಿ ಅಭಿವೃದ್ಧಿ ಮಾಡಿದ್ವಿ, ದೇಶದಲ್ಲಿ ಇಂತಹ ಪಕ್ಷ ಇದೆಯಾ ಪ್ರತಿಭಟನೆ ಮಾಡುವುದಾದ್ರೆ ಮಾಡಲಿ ಬಿಡಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


