ನಮ್ಮ ದೇಶಕ್ಕೆ ಇಂಡಿಯಾ ಒಪ್ಪಿತ ಹೆಸರು, ಅದನ್ನು ಭಾರತ್ ಎಂದು ಬದಲಾಯಿಸುವ ಅಗತ್ಯವಿಲ್ಲ: ಸಿಎಂ ಸಿದ್ದರಾಮಯ್ಯ
'ಇಂಡಿಯಾ' ಎಂಬುದು ದೇಶಕ್ಕೆ ಒಪ್ಪಿತ ಪದವಾಗಿದ್ದು, ಅದನ್ನು 'ಭಾರತ್' ಎಂದು ಬದಲಾಯಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.

ಬೆಂಗಳೂರು: 'ಇಂಡಿಯಾ' ಎಂಬುದು ದೇಶಕ್ಕೆ ಒಪ್ಪಿತ ಪದವಾಗಿದ್ದು, ಅದನ್ನು 'ಭಾರತ್' ಎಂದು ಬದಲಾಯಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಇಂಡಿಯಾ ಎಂಬ ಪದವನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ ಮತ್ತು ಅದನ್ನು 'ಭಾರತದ ಸಂವಿಧಾನ' ಎಂದು ಕರೆಯಲಾಗುತ್ತದೆ ಎಂದು ಅವರು ತಿಳಿಸಿದರು.
ಜಿ20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ''ಪ್ರೆಸಿಡೆಂಟ್ ಆಫ್ ಭಾರತ್' ಎಂದು ಬರೆಯಲಾಗಿದೆ. ಈ ಆಹ್ವಾನ ಪತ್ರಿಕೆ ವೈರಲ್ ಆದ ನಂತರ ಭುಗಿಲೆದ್ದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, "ನಮ್ಮ ಸಂವಿಧಾನದಲ್ಲಿ 'ಇಂಡಿಯಾ' ಎಂದು ಸಂಯೋಜಿಸಲಾಗಿದೆ. 'ಇಂಡಿಯಾ' ಎಂಬುದು ನಮ್ಮ ದೇಶಕ್ಕೆ ಒಪ್ಪಿತ ಹೆಸರು ಎಂದರು.
ಇಂಡಿಯಾ ಹೆಸರನ್ನು ಭಾರತ್ ಮಾಡುವ ಅವಶ್ಯಕತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇಶದ ಹೆಸರನ್ನು 'ಇಂಡಿಯಾ'ದಿಂದ 'ಭಾರತ್' ಎಂದು ಬದಲಾಯಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ನಡುವೆಯೇ 'ದಿ ಪ್ರೆಸಿಡೆಂಟ್ ಆಫ್ ಭಾರತ್' ಹೆಸರಿನಲ್ಲಿ ನೀಡಲಾದ ಜಿ 20 ಔತಣಕೂಟದ ಆಹ್ವಾನ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


