ರಾಜಕೀಯ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್'ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಡಿಮ್ಯಾಂಡ್!

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯಾಗಬಲ್ಲೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶನಿವಾರ ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್'ಗೆ ಶಾಸಕ ಬೇಳೂರು ಗೋಪಾಲಕೃಷ್ಣ ಡಿಮ್ಯಾಂಡ್!
ಬೇಳೂರು ಗೋಪಾಲಕೃಷ್ಣ
Published On :

ಬೆಂಗಳೂರು: ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯಾಗಬಲ್ಲೆ ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶನಿವಾರ ಹೇಳಿದರು.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಬಿಜೆಪಿಯವರ ದುರಾಡಳಿತ ಕೊನೆ ಮಾಡಲು ನಾನೇ ಸಮರ್ಥ ಅಭ್ಯರ್ಥಿ. ಹಾಗಾಗಿ, ಕ್ಷೇತ್ರಕ್ಕೆ ನಾನು ಕಾಂಗ್ರೆಸ್‍ನಿಂದ ಪ್ರಬಲ ಅಭ್ಯರ್ಥಿ ಆಗಬಲ್ಲೆ. ನನಗೆ ಟಿಕೆಟ್ ಕೊಟ್ಟರೆ ಗೆಲುವು ಸಾಧಿಸಲಿದ್ದೇನೆ ಎಂದು ಹೇಳಿದರು.

ಗೃಹ ಸಚಿವ ಡಾ. ಜಿ ಪರಮೇಶ್ವರ್ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾತನಾಡಿ, ಊಟಕ್ಕೆ ಕರೆದರೆ ಅದು ಬಣ ರಾಜಕಾರಣ ಆಗಲ್ಲ. ಸಿಎಂ, ಡಿಕೆಶಿ ಇಬ್ಬರು ನಾಯಕತ್ವದಲ್ಲಿ ಸರ್ಕಾರ ನಡೀತಿದೆ. ಬಣ ರಾಜಕಾರಣ ಇಲ್ಲ. ಈ ಕುಮಾರಸ್ವಾಮಿ ಮಧ್ಯದಲ್ಲಿ ಸ್ವಲ್ಪ ಕೈ ಆಡಿಸ್ತಿದ್ದಾರೆ. ಕುಮಾರಸ್ವಾಮಿ ಈಗ ಸ್ವಲ್ಪ ಚಿಗುರಿಕೊಂಡಿದ್ದಾರೆ. ಮೋದಿಯವರನ್ನು ಭೇಟಿ ಮಾಡಿ ಬಂದ ನಂತರ ಕುಮಾರಸ್ವಾಮಿ ಚಿಗುರಿಕೊಂಡಿದ್ದಾರೆ ಎಂದು ತಿಳಿಸಿದರು.

ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್. ಡಿಕೆಶಿ ಅವರಿಂದ ಕುಮಾರಸ್ವಾಮಿ ಸಿಎಂ ಆದರು. ಡಿಕೆಶಿ ಏನು ಅನ್ಯಾಯ ಮಾಡಿದ್ದಾರೆ ಅವರಿಗೆ? ಅವರ ತಾಲ್ಲೂಕನ್ನ ಬೆಂಗಳೂರಿಗೆ ಸೇರಿಸಿದರೆ ಎಡಿಕೆಗೆ ಏನು ಸಮಸ್ಯೆ? ಅವರ ತಾಲ್ಲೂಕನ್ನ ಅಭಿವೃದ್ಧಿ ಮಾಡ್ತಿದ್ದಾರೆ ಡಿಕೆಶಿ ಕನಕಪುರ ಜಿಲ್ಲೆ ಮಾಡಲಿ ಬಿಡಿ ಎಂದರು.

ಶಿವಮೊಗ್ಗದಲ್ಲಿ ಯಡಿಯೂರಪ್ಪ ಯಾಕೆ ಏರ್‌ಪೋರ್ಟ್ ಮಾಡಿದರು? ಶಿವಮೊಗ್ಗದಲ್ಲಿ ಯಡಿಯೂರಪ್ಪ ಜಮೀನು ಇದೆ ಅದಕ್ಕಾಗಿ ಏರ್‌ಪೋರ್ಟ್ ಮಾಡಿದರು. ಕನಕಪುರದಲ್ಲೂ ಡಿಕೆಶಿ ಸೇರಿ ಹಲವರ ಜಮೀನು ಇದೆ. ಜನರ ಜಮೀನೂ ಇದೆ. ಕನಕಪುರ ಅಭಿವೃದ್ಧಿ ಮಾಡಿದರೆ ಇವರಿಗೇನು ಸಮಸ್ಯೆ? ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.