ಕನ್ನಡಿಗರ ಹಣ ಲೂಟಿ ಮಾಡಿ ಹೈಕಮಾಂಡ್ ಹೊಟ್ಟೆ ತುಂಬಿಸುವುದು ಸರಿಯೇ? ಮೋಜು ಮಾಡಲು ಸರ್ಕಾರ ಟೂರ್ ಹೋಗಿದ್ದೇಕೆ?
ಅಕ್ಕಿ ಹೆಸರಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮೋಸದ ರಾಜಕಾರಣ ಮಾತ್ರ ಮಾಡುತ್ತಿಲ್ಲ, ಕಳ್ಳತನಕ್ಕೇ ಇಳಿದುಬಿಟ್ಟಿದೆ ಬಿಜೆಪಿ ಕರ್ನಾಟಕ ಟ್ವಿಟ್ಟರ್ ನಲ್ಲಿ ಆರೋಪಿಸಿದೆ.

ಬೆಂಗಳೂರು: ಅಕ್ಕಿ ಹೆಸರಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮೋಸದ ರಾಜಕಾರಣ ಮಾತ್ರ ಮಾಡುತ್ತಿಲ್ಲ, ಕಳ್ಳತನಕ್ಕೇ ಇಳಿದುಬಿಟ್ಟಿದೆ ಬಿಜೆಪಿ ಕರ್ನಾಟಕ ಟ್ವಿಟ್ಟರ್ ನಲ್ಲಿ ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಜಾರ್ಜ್ ಅವರ ಇಂಧನ ಇಲಾಖೆ ಮಾತ್ರವಲ್ಲ, ಕೆಎಚ್ ಮುನಿಯಪ್ಪ ಅವರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲೂ ಹೆಗ್ಗಣಗಳ ಕಾಟ ಜೋರಾಗಿದೆ. ಲಂಚ ಕೊಡುವುದಕ್ಕಾಗಿಯೇ ಅಕ್ರಮ ಅಕ್ಕಿ ಮಾರಾಟ ಮಾಡುತ್ತಿರುವುದು ಈಗೇನೂ ಗುಟ್ಟಾಗಿ ಉಳಿದಿಲ್ಲ, ತನ್ನಿಂದ ಕೊಡಲು ಅಕ್ಕಿಯೇ ಇಲ್ಲ ಎನ್ನುತ್ತಿರುವ ಕರ್ನಾಟಕ, ಕಲೆಕ್ಷನ್ ಆಸೆಗೆ ಟನ್‌ಗಟ್ಟಲೆ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುವ ಹಂತಕ್ಕೆ ತಲುಪಿದೆ ಎಂದು ಲೇವಡಿ ಮಾಡಿದೆ.
ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಛೀ ಥೂ ಎನಿಸಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಅವರಿಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳು:
▪ ಮೋದಿ ಸರ್ಕಾರದ 5 ಕೆಜಿ ಅಕ್ಕಿ ನೀವು ಕೊಡುತ್ತಿಲ್ಲ ಏಕೆ?
▪ ನೀವೇ ಹೇಳಿದ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ ಏಕೆ?
▪ ಗೃಹ ಲಕ್ಷ್ಮಿ ಹೆಸರಲ್ಲಿ ಸ್ವಾಭಿಮಾನಿ ಮಹಿಳೆಯರನ್ನು ವಂಚಿಸಿದ್ದು ಏಕೆ?
▪ ಕನ್ನಡಿಗರ ಹಣವನ್ನು ಲೂಟಿ ಮಾಡಿ ಹೈಕಮಾಂಡ್ ಹೊಟ್ಟೆ ತುಂಬಿಸುತ್ತಿರುವುದು ಸರಿಯೇ?
▪ ಬರಗಾಲವನ್ನು ನಿರ್ವಹಣೆ ಮಾಡಲಿಲ್ಲ, ಪರಿಹಾರವೂ ಕೊಟ್ಟಿಲ್ಲ ಏಕೆ?
▪ ನಾಡಿನ ಜನತೆ ಸಂಕಷ್ಟದಲ್ಲಿರುವಾಗ ನಿಮಗೆ ಪಂಚ ರಾಜ್ಯ ಚುನಾವಣೆ ಮುಖ್ಯವೇ?
▪ ನಮ್ಮನ್ನು ಉದ್ಧಾರ ಮಾಡುತ್ತೇವೆಂದು ಬಂದು ಬೆಲೆ ಏರಿಕೆ ಮೂಲಕ ತುಳಿದಿದ್ದು ಸರಿಯೇ?
▪ ಕಾವೇರಿಯನ್ನು ಕಳ್ಳತನದಿಂದ ಬಿಟ್ಟು ನಮಗೆ ವಂಚಿಸಿದ್ದೇಕೆ?
▪ ತೆಲಂಗಾಣ ಚುನಾವಣೆ ಹಣವನ್ನು ಮಂಚದ ಕೆಳಗೆ ಬಚ್ಚಿಟ್ಟಿದ್ದು ಅಲ್ಲದೆ ಮೋಜು ಮಾಡಲು ಸರ್ಕಾರ ಅಲ್ಲಿಗೆ ಟೂರ್ ಹೋಗಿದ್ದೇಕೆ?
ಸ್ವಯಂಘೋಷಿತ ಆರ್ಥಿಕ ತಜ್ಞ ಮಜವಾದಿ ಸಿದ್ದರಾಮಯ್ಯ ಅವರ ಬಳಿ ಜನರ ಈ ಪ್ರಶ್ನೆಗಳಿಗೆ ಒಂದಕ್ಕಾದರೂ ಉತ್ತರವಿದೆಯೇ? ಎಂದು ಪ್ರಶ್ನಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


