ಕಿಯೋನಿಕ್ಸ್ ಅವ್ಯವಹಾರ: ತನಿಖೆ ನಂತರ ಬಿಜೆಪಿಯ ಮಾಜಿ ಸಚಿವರು ಪರಪ್ಪನ ಅಗ್ರಹಾರದ ಮುದ್ದೆ ರುಚಿ ನೋಡುವುದು ಖಚಿತ!
ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ(ಕಿಯೋನಿಕ್ಸ್ ) ರೂ.500 ಕೋಟಿ ಅವ್ಯವಹಾರದ ತನಿಖೆ ಪೂರ್ಣಗೊಂಡ ನಂತರ ಬಿಜೆಪಿಯ ಹಲವು ಮಾಜಿ ಸಚಿವರು ಪರಪ್ಪನ ಅಗ್ರಹಾರದ ಮುದ್ದೆಯ ರುಚಿ ನೋಡುವುದು ಖಚಿತ ಎಂದು ಕಾಂಗ್ರೆಸ್ ಹೇಳಿದೆ.

ಬೆಂಗಳೂರು: ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ(ಕಿಯೋನಿಕ್ಸ್ ) ರೂ.500 ಕೋಟಿ ಅವ್ಯವಹಾರದ ತನಿಖೆ ಪೂರ್ಣಗೊಂಡ ನಂತರ ಬಿಜೆಪಿಯ ಹಲವು ಮಾಜಿ ಸಚಿವರು ಪರಪ್ಪನ ಅಗ್ರಹಾರದ ಮುದ್ದೆಯ ರುಚಿ ನೋಡುವುದು ಖಚಿತ ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಹಿಂದಿನ ತಮ್ಮ ಕಮಿಷನ್ ವ್ಯವಹಾರಗಳ ಬಿಲ್ ಗಳನ್ನು ಹಿಡಿದು ಈಗ ಬೊಬ್ಬೆ ಹೊಡೆಯುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್ ನಲ್ಲಿ ನಡೆದ ರೂ. 500 ಕೋಟಿ ಅಕ್ರಮ ಅವ್ಯವಹಾರಗಳು ಈಗ ಹೊರಬರುತ್ತಿವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಕಿಯೋನಿಕ್ಸ್ ಅಕ್ರಮದ ತನಿಖೆ ನಡೆಸಲು ಪ್ರಿಯಾಂಕ್ ಖರ್ಗೆ ತೀರ್ಮಾನಿಸಿರುವುದಾಗಿ ತಿಳಿಸಿದೆ.

ಗುರುವಾರ ಲೆಕ್ಕಪರಿಶೋಧನಾ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಿಯಾಂಕ್ ಖರ್ಗೆ, 2018-19 ರಿಂದ 2022-23ರ ಅವಧಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಮಾಡಿದ್ದರು. ಕಂಪ್ಯೂಟರ್, ಲ್ಯಾಪ್ ಟಾಪ್, ಯುಪಿಎಸ್, ಸಿಸಿಟಿವಿ ಕ್ಯಾಮರಾ, ಸ್ಮಾರ್ಟ್ ತರಗತಿಯ ಉಪಕರಣಗಳು, ಟೇಬಲ್ ಗಳು ಸೇರಿದಂತೆ ವಿವಿಧ ಸಾಮಾಗ್ರಿಗಳ ಖರೀದಿ, ಪೂರೈಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


