ಶಕ್ತಿ ಸೌಧಕ್ಕಾಗಿ ಕದನ: ಹಳೇ ಮೈಸೂರು ಭಾಗದಲ್ಲಿ ಕೇಸರಿಗೆ 'ಬಜರಂಗ ಬಲಿ ಬಲ'; ಜೆಡಿಎಸ್ ಭದ್ರಕೋಟೆಯಲ್ಲಿ ಅರಳುತ್ತಾ ಕಮಲ?
ರಾಜ್ಯ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹೀಗಾಗಿ ಎಲ್ಲಾ ಪಕ್ಷಗಳು ಗೆಲ್ಲುವ ತಯಾರಿ ನಡೆಸುತ್ತಿವೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಂತೆ ತಿರುಗೇಟು ನೀಡಲು ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಿದೆ.

By Santwana Bhattacharya
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹೀಗಾಗಿ ಎಲ್ಲಾ ಪಕ್ಷಗಳು ಗೆಲ್ಲುವ ತಯಾರಿ ನಡೆಸುತ್ತಿವೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಂತೆ ತಿರುಗೇಟು ನೀಡಲು ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಿದೆ.
ತಮ್ಮ ಎಲ್ಲಾ ಭಾಷಣಗಳಲ್ಲಿಯೂ ಭಾರತ್ ಮಾತಾ ಕಿ ಜೈ ಎಂದು ಹೇಳುವ ಮೂಲಕ ನೆರೆದಿದ್ದ ಜನರನ್ನು ರೋಮಾಂಚನಗೊಳಿಸುತ್ತಿದ್ದ ಮೋದಿ ಘೋಷಣೆ ಈಗ ಜೈ ಬಜರಂಗ್ ಬಲಿಯತ್ತ ವಾಲಿದೆ. ಅಧಿಕಾರಕ್ಕೆ ಬಂದರೆ ಪಿಎಫ್‌ಐ ಜೊತೆಗೆ ಬಜರಂಗದಳವನ್ನು ನಿಷೇಧಿಸುವ ಭರವಸೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡಿತ್ತು. ಇದಾದ ನಂತರ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ತಡರಾತ್ರಿ ಟ್ವೀಟ್ ಮಾಡುವ ಮೂಲಕ ತಮ್ಮ ಪಕ್ಷದ ಉದ್ದೇಶವನ್ನು ಪುನರುಚ್ಚರಿಸಿದರು.
ಹಲವಾರು ರಾಜ್ಯ ಮಟ್ಟದ ನಾಯಕರು ಪ್ರಣಾಳಿಕೆಯಲ್ಲಿ ಇದು ಹೇಗೆ ಬಂತು ಎಂದು ತಲೆ ಕೆರೆದುಕೊಳ್ಳುತ್ತಿದ್ದಾರೆ. ಹೆಚ್ಚಿನವರು ಪ್ರಚಾರದಲ್ಲಿ ನಿರತರಾಗಿದ್ದ ಕಾರಣ ಸಮಾಲೋಚನೆ ಇಲ್ಲದೆ ಪ್ರಣಾಳಿಕೆಯಲ್ಲಿ ನಿಷೇಧದ ಪರಿಕಲ್ಪನೆ ಸೇರಿಸಲಾಯಿತು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿರುವ ಈ ಅಂಶವನ್ನು ಯಾರೊಬ್ಬರೂ ಒಪ್ಪುತ್ತಿಲ್ಲ, ಆದರೂ, ಕಾಂಗ್ರೆಸ್ ಎಂದಿಗೂ ಲೂಸ್ ಬಾಲ್ ಬೌಲ್ ಮಾಡುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಅಂತೆಯೇ ಸಿಕ್ಸರ್ ಹೊಡೆಯಬಹುದಾದ ಫುಲ್ ಟಾಸ್ ಬಿಡಲು ಪ್ರಧಾನಿ ನರೇಂದ್ರ ಮೋದಿ ಒಲವು ತೋರುವುದಿಲ್ಲ.
ಮತದಾನಕ್ಕೆ ಕೇವಲ ಒಂದು ವಾರ ಸಮಯವಿದೆ, ಇಂತ ವೇಳೆಯಲ್ಲಿ ಬಿಜೆಪಿ ಪಕ್ಷ, ‘ಡಬಲ್ ಇಂಜಿನ್ ಸರ್ಕಾರ್’ ಎಂಬ ಏಕಾತನತೆಯ ಭರವಸೆಗಿಂತ ಉತ್ತಮವಾದದ್ದನ್ನು ಜನರಿಗೆ ಡಂಗುರ ಸಾರಿಕೊಂಡು ಹೇಳುವ ಅವಕಾಶ ಬಂದೊದಗಿದೆ.
ಬಿಜೆಪಿ ಪ್ರತ್ಯಸ್ತ್ರಕ್ಕೆ ಸಿದ್ದರಾಮಯ್ಯ ಸ್ವಲ್ಪ ತಬ್ಬಿಬ್ಬಾಗಿದ್ದಾರೆ. ಆಗಿರುವ ಹಾನಿಯನ್ನು ಸರಿಪಡಿಸಲು ಇನ್ನಿಲ್ಲದ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಈ ಹಿಂದೆ ನಿಯಮಿತವಾಗಿ ಪಠಿಸುತ್ತಿದ್ದ 'ವಂದೇ ಮಾತರಂ' ನಿಲ್ಲಿಸಿ 'ಜೈ ಹಿಂದ್' ಘೋಷಣೆಗೆ ವಾಲಿದ್ದಾರೆ.
ಡ್ಯಾಮೇಜ್ ಕಂಟ್ರೋಲ್ ಗಾಗಿ ಕಾಂಗ್ರೆಸ್ ನಾಯಕರು ಹನುಮಾನ್ ಚಾಲೀಸಾವನ್ನು ಹೊರತರಬೇಕೇ ಎಂದು ಯೋಚಿಸುತ್ತಿರುವಂತೆ ಕಾಣುತ್ತಿದೆ. ತಮ್ಮ ಪಕ್ಷದ ಜೀವ ಉಳಿಸಲು ಕಾಂಗ್ರೆಸ್ ಮತ್ತೆ ವಾಯುಪುತ್ರ ಹನುಮಂತ ದೇವರ ಮೊರೆ ಹೋಗುವ ಸಾಧ್ಯತೆಯಿದೆ.
ಹಳೆ ಮೈಸೂರಿನಲ್ಲಿ-ಬೆಂಗಳೂರಿನ 28 ಸ್ಥಾನಗಳನ್ನು ಒಳಗೊಂಡಂತೆ 87 ವಿಧಾನಸಭಾ ಕ್ಷೇತ್ರಗಳಿಗೆವೆ. ಈ ಭಾಗದಲ್ಲಿ ಬಜರಂಗ ದಳ ಕಾರ್ಯಕರ್ತರು ಕರಾವಳಿ ಕರ್ನಾಟಕದಲ್ಲಿರುವಷ್ಟು ಸಕ್ರಿಯವಾಗಿಲ್ಲ, ಅಥವಾ ಹಿಂದುತ್ವ ಹೆಚ್ಚಾಗಿ ಹರಡಿಕೊಂಡಿಲ್ಲ.
ಎರಡನೆಯದು ಹಳೆಯ ಮೈಸೂರು ಭಾಗ ಕೇಸರಿ ಪಕ್ಷದ ಪ್ರಯೋಗಾಲಯವಾಗಿದೆ. ಹಾಗಾಗಿ ಅದು ವ್ಯತ್ಯಾಸವನ್ನು ಮಾಡಬಹುದು. ಕಾಂಗ್ರೆಸ್ ಲೆಕ್ಕಾಚಾರಗಳನ್ನು ಬದಿಗಿಟ್ಟರೆ, ಕರ್ನಾಟಕದಲ್ಲಿ ಹಿಂದುತ್ವಕ್ಕಿಂತ ಹೆಚ್ಚು ಎದ್ದುಕಾಣುವ ಅಂಶವೆಂದರೆ ಜಾತಿ, ಮತ್ತು ಆ ವಿಷಯದ ಸುತ್ತ ರಾಜಕೀಯವೂ ಸುತ್ತಿಕೊಂಡಿದೆ.
ಇದನ್ನೂ ಓದಿ: ಶಕ್ತಿ ಸೌಧಕ್ಕಾಗಿ ಕದನ: ಕರಾವಳಿ ಕರ್ನಾಟಕದಲ್ಲಿ ಸಂಘ ಸಿದ್ಧಾಂತದ ಸಖ್ಯ; ಅಭಿವೃದ್ಧಿಗಿಂತ ಜನರಿಗೆ ಧರ್ಮ ರಾಜಕಾರಣ ಮುಖ್ಯ!
ಇದು ಪ್ರಜಾಪ್ರಭುತ್ವದ ಅತ್ಯಂತ ಶಾಂತವಲ್ಲದ ಪ್ರಕ್ರಿಯೆ. ಏಕೆಂದರೆ ಹೆಚ್ಚು ತುಳಿತಕ್ಕೊಳಗಾದ 'ಎಸ್‌ಸಿ-ಎಡ ಪಂಗಡ ಮುಖ್ಯವಾಗಿ ರಾಜ್ಯದ ಶೇ. 17.5 ರಷ್ಟಿದೆ. ಪರಿಶಿಷ್ಟ ಜಾತಿಗಳಲ್ಲಿ ಮಾದಿಗರಂತಹ ಕುಶಲಕರ್ಮಿ ಗುಂಪುಗಳನ್ನು ಬಿಜೆಪಿ ಓಲೈಸುತ್ತಿರುವುದು ಒಂದು ಉದಾಹರಣೆಯಾಗಿದೆ. 20 ಸಮುದಾಯಗಳನ್ನು ಒಳಗೊಂಡಿರುವ ಮತ್ತು ಕರ್ನಾಟಕದ ದಲಿತ ಸಮುದಾಯಕ್ಕೆ ಸೇರಿದ ಸರಿಸುಮಾರು ಶೇ. 33 ಪ್ರತಿಶತದಷ್ಟಿರುವ 'ಎಡಗೈ' ಪರಿಶಿಷ್ಟ ಜಾತಿಗಳಿಗೆ ಬೊಮ್ಮಾಯಿ ಸರ್ಕಾರವು 6.5 ಪ್ರತಿಶತದಷ್ಟು ಆಂತರಿಕ ಮೀಸಲಾತಿಯನ್ನು ನೀಡಿದೆ.
ಮೋದಿ ಮತ್ತು ಅಮಿತ್ ಶಾ ತಮ್ಮ ಮಠಾಧೀಶರು ಹಾಗೂ ಸಮುದಾಯದ ಮುಖ್ಯಸ್ಥರನ್ನು ತಿಂಗಳಿನಿಂದ ಭೇಟಿ ನೀಡಿದ್ದಾರೆ.ಕಾಂಗ್ರೆಸ್‌ನಲ್ಲಿ ಎಸ್‌ಸಿ-ಎಡ ಗುಂಪಿಗೆ ಸೇರಿದ ಕೆ.ಎಚ್ ಮುನಿಯಪ್ಪ ಅವರಂತಹ ನಾಯಕರಿದ್ದಾರೆ.
ಎಸ್‌ಸಿ-ಬಲ ಸಮುದಾಯಗಳು, ಹೆಚ್ಚಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಕಾಂಗ್ರೆಸ್‌ನ ಆಡಳಿತದಿಂದ ಹೆಚ್ಚು ಲಾಭ ಪಡೆದಿದ್ದಾರೆ. ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಸ್‌ಸಿ-ಬಲ ಪಂಗಡಕ್ಕೆ ಸೇರಿದವರಾಗಿದ್ದಾರೆ.
ಆದಾಗ್ಯೂ, ಹಳೆಯ ಮೀಸಲಾತಿ ಸೂತ್ರದಿಂದ ಹೆಚ್ಚು ಲಾಭ ಪಡೆದವರು ಬಂಜಾರರು ಮತ್ತು ಭೋವಿ ಜನಾಂಗವದರಾಗಿದ್ದಾರೆ. ಈ ಸಮುದಾಯದ ಬೆಂಬಲ 2019 ರಿಂದ ಕಾಂಗ್ರೆಸ್‌ನಿಂದ ಬಿಜೆಪಿಗೆ ಶಿಫ್ಟ್ ಆಗಿದೆ.
ಈ ಹಿಂದೆ ಕಡಿಮೆ ಪ್ರಾತಿನಿಧ್ಯವಿಲ್ಲದೆ ಉಳಿದಿದ್ದ ಜಾತಿಗಳ ಸಾಮಾಜಿಕ ಒಕ್ಕೂಟವನ್ನು ಕಾರ್ಯತಂತ್ರವಾಗಿ ರೂಪಿಸುವಲ್ಲಿ, ಮೋದಿ-ಶಾ ನೇತೃತ್ವದ ಬಿಜೆಪಿ ಹೆಚ್ಚು ಗಮನ ಹರಿಸಿದೆ. ಆದರೆ, ಹಳೇ ಮೈಸೂರು ಭಾಗದಲ್ಲಿ ಅರ್ಧ ಡಜನ್ ಕ್ಷೇತ್ರಗಳಲ್ಲಿ ಈ ಸಮುದಾಯದ ಪ್ರಾಬಲ್ಯವಿದೆ.
ವರುಣಾದಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿಯ ಲಿಂಗಾಯತ ನಾಯಕ ವಿ ಸೋಮಣ್ಣ ವಿರುದ್ಧ ಸ್ಪರ್ಧಿಸುತ್ತಿದ್ದಾರೆ, ಅವರು ಅಂತಹ ಸೂಕ್ಷ್ಮ ಸಾಮಾಜಿಕ ಮೈತ್ರಿಯ ವಿರುದ್ಧ ಕಣಕ್ಕಿಳಿದಿದ್ದಾರೆ. ಮಾಜಿ ಸಿಎಂಗೆ ಇದು ಕಠಿಣ ಹೋರಾಟವಾಗಿದೆ.
ಅಮಿತ್ ಶಾ ಲಿಂಗಾಯತ-ಎಸ್‌ಸಿ (ಎಡ) ಬಲವರ್ಧನೆ ಪ್ರಯತ್ನಿಸುತ್ತಿದ್ದಾರೆ. ಅಮಿತ್ ಶಾ ಬಿಎಸ್‌ವೈ ರ್ಯಾಲಿಯಲ್ಲಿ ಬಹು ಸಂಖ್ಯೆಯಲ್ಲಿ ಲಿಂಗಾಯತರು ಕಾಣಸಿಕೊಂಡರು. ಇಲ್ಲಿ ಸುಮಾರು 55,000 ಲಿಂಗಾಯತ ಮತದಾರರಿದ್ದಾರೆ. ದಲಿತರು ಕೂಡ 50,000 ಸಂಖ್ಯೆಯಲ್ಲಿದ್ದಾರೆ.
ಅವರೆಲ್ಲರೂ ಮೇ 10 ರಂದು ಮತ ಚಲಾಯಿಸಲು ಮುಂದಾಗದಿದ್ದರೂ, ಅದೊಂದು ರೀತಿಯ ಹಿನ್ನಡೆಯಾಗಲಿದೆ. ವರುಣಾದ ಗ್ರಾಮೀಣ ಭಾಗಗಳಲ್ಲಿ ಸಿದ್ದರಾಮಯ್ಯ ಪರ ಅಲೆಯಿದೆ. ನಾವು ಹಳ್ಳಿ ಮತದಾರೊಂದಿಗೆ ಮಾತನಾಡುತ್ತಿದ್ದ ವೇಳೆ ನಮ್ಮನ್ನು ನೋಡಿದ ಲಿಂಗಾಯತ ಯುವತಿಯು ತನ್ನ ಮನೆಯ ಸಣ್ಣ ಗೇಟ್‌ನ ಹಿಂದಿನಿಂದ ಮಾತನಾಡಿ ತಾನು ಸಿದ್ದರಾಮಯ್ಯನ ಅಭಿಮಾನಿ ಎಂದು ಹೇಳಿದಳು.
ಸಮುದಾಯವು ಈ ಹಿಂದೆ ಸಿದ್ದರಾಮಯ್ಯ ನೀಡಿದ ಯೋಜನೆಗಳಿಗಾಗಿ ಮತ್ತೆ ಅವರಿಗೆ ಮತ ಹಾಕುವ ಸಾಧ್ಯತೆಯಿದೆ. ಶೇ.10ರಷ್ಟು ಒಡೆದ ಲಿಂಗಾಯತ ಮತಗಳು ನನಗೆ ಬರುತ್ತವೆ ಎಂದು ತಾನು ಎಂದಿಗೂ ನಿರೀಕ್ಷಿಸುವುದಿಲ್ಲ ಎಂದು ಸಿದ್ದರಾಮಯ್ಯ ಕೂಡ ಹೇಳುತ್ತಾರೆ.
ಅವರು ವರುಣದಲ್ಲಿ 32,000 ಕುರುಬ ಸಮುದಾಯ, 20,000 ಉಪ್ಪಾರರು, 25,000 ಎಸ್ಟಿಗಳು, 12,000 ಒಕ್ಕಲಿಗರು, ಎಸ್ಸಿ-ಬಲ ಮತ್ತು ಇತರ ಸೂಕ್ಷ್ಮ ಸಮುದಾಯಗಳಿವೆ. ಮುಸ್ಲಿಮರು ಕನಿಷ್ಠ 6,000 ಮತಗಳನ್ನು ಹೊಂದಿದ್ದಾರೆ. ವರುಣಾ ಕ್ಷೇತ್ರದಲ್ಲಿ ತಮ್ಮ ಮಗ ಯತೀಂದ್ರ ಅವರ ಜನಪ್ರಿಯತೆಯನ್ನು ಪ್ಲಸ್ ಪಾಯಿಂಟ್ ಆಗಿ ಸೇರಿಸುತ್ತಾರೆ.
ಎಸ್‌ಸಿ/ಎಸ್‌ಟಿಗಳು ಮತ್ತು ಒಕ್ಕಲಿಗ ಮತಗಳನ್ನು ತನ್ನ ಪರವಾಗಿ ಸಾಧ್ಯವಾದಷ್ಟು ವಿಭಜಿಸುವುದು ಬಿಜೆಪಿ ಪ್ಲಾನ್ ಆಗಿದೆ ಬಂಗಾಳದ ನಂದಿ ಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿದ ಇಡೀ ಚುನಾವಣೆಯನ್ನು ಬದಲಿಸಿದಂತೆ ವರುಣಾದಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಬದಲಿಸಲು ಬಿಜೆಪಿ ಸರ್ವ ಪ್ರಯತ್ನ ಮಾಡುತ್ತಿದೆ.
ಅದೇ ರೀತಿ ಕೊರಟಗೆರೆಯಲ್ಲಿ ಕಾಂಗ್ರೆಸ್‌ನ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್‌ಗೆ ಸಂಕಷ್ಟ ಎದುರಾಗಿದೆ. ಅವರದೇ ಕಾಯಸ್ತಾ ಸಮುದಾಯ (ಎಸ್‌ಸಿ-ಬಲ) ಕೇವಲ 10,000 ಮತಗಳನ್ನು ಹೊಂದಿದೆ. ಬಿಜೆಪಿ, ಎಸ್‌ಡಿಪಿಐ ಸೇರಿದಂತೆ ಎಲ್ಲರಿಗೂ ತನ್ನನ್ನು ನೋಡುವಂತೆ ಅವರು ಮನವಿ ಮಾಡುತ್ತಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಹಳೇ ಮೈಸೂರು ಭಾಗದ ಒಕ್ಕಲಿಗ ಮತಗಳು ಜೆಡಿಎಸ್ ಮತ್ತು ದೇವೇಗೌಡರ ಕುಟುಂಬ ಮತ್ತು ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ನಡುವೆ ವಿಭಜನೆಯಾಗುವ ನಿರೀಕ್ಷೆಯಿದೆ.
ಬಿಜೆಪಿ ಯುವಜನರ ಮತಗಳನ್ನು ಕಸಿದುಕೊಳ್ಳುತ್ತಿದೆ. ಕಳೆದ ಬಾರಿ ಜೆಡಿಎಸ್‌ಗೆ ಲಾಭವಾಗಿದ್ದ ಒಕ್ಕಲಿಗ ಸಿಟ್ಟು ಈ ಬಾರಿ ಇಲ್ಲದಂತಾಗಿದೆ.
ಜತೆಗೆ, ಬಿಜೆಪಿ ಯಾವುದೇ ಗುಪ್ತ ಹೊಂದಾಣಿಕೆ ಇಲ್ಲದೆ ಪ್ರತಿ ಕ್ಷೇತ್ರದಲ್ಲೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಎಸ್‌ಗೆ 30-40 ಸಾವಿರ ಮತಗಳು ಕಡಿಮೆಯಾಗುತ್ತವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇದು ತನ್ನ ಹಳೆಯ ಭದ್ರಕೋಟೆಗಳಲ್ಲಿ ಜೆಡಿಎಸ್ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಯಿದೆ.
2018 ರಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ 7 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಮಂಡ್ಯ ನಗರದಲ್ಲಿ ಸ್ವತಂತ್ರ ಅಭ್ಯರ್ಥಿ ಮತ್ತು ಮೇಲುಕೋಟೆಯಲ್ಲಿ ರೈತ ಸಂಘದ ಅಭ್ಯರ್ಥಿಯು ಟಿಕೆಟ್ ಹಂಚಿಕೆಯಲ್ಲಿ ಅವ್ಯವಸ್ಥೆಯನ್ನು ಸೂಚಿಸುತ್ತದೆ.
ಕ್ಷೇತ್ರದಲ್ಲಿ ಸಾಕಷ್ಟು ವರ್ಚಸ್ಸು ಹೊಂದಿರುವ ದಿವಂಗತ ಸಿನಿ ದಿಗ್ಗಜ ಅಂಬರೀಷ್ ಅವರ ಪತ್ನಿ, ಸ್ವತಂತ್ರ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ ನೀಡಿರುವುದು ಜೆಡಿಎಸ್ ಗೆ ಹೊಡೆತ ನೀಡುವ ಸಾಧ್ಯತೆಯಿದೆ.
ಮೇ 13 ರ ತನಕ ಎಲ್ಲಾ ಅಭ್ಯರ್ಥಿಗಳು ಉಸಿರು ಬಿಗಿ ಹಿಡಿದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ತುಮಕೂರು (11 ಸ್ಥಾನಗಳು), ಕೋಲಾರ (6) ಮತ್ತು ರಾಮನಗರ (4), ಗಳಲ್ಲಿ , ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲ ತೋರುತ್ತಿವೆ. ಹಾಸನ (7) ಮತ್ತು ಚಿಕ್ಕಬಳ್ಳಾಪುರ (4) ನಲ್ಲಿ ನಂತರದ ಸ್ಥಾನವು ಸ್ಪಷ್ಟವಾಗಿದೆ.
ಬೆಂಗಳೂರು ಗ್ರಾಮಾಂತರದಂತೆಯೇ ಚಾಮರಾಜನಗರದಲ್ಲಿಯೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಬಹುದು.
ಚನ್ನಪಟ್ಟಣದಲ್ಲಿ ಬಿಜೆಪಿಯ ಯೋಗೇಶ್ವರ್ ಜೆಡಿಎಸ್ ಮುಖ್ಯಸ್ಥ ಎಚ್‌ಡಿ ಕುಮಾರಸ್ವಾಮಿ ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಹಳೆ ತಲೆಮಾರಿನ ಕನ್ನಡ ನಾಯಕರಿಗೆ ಕಠಿಣ ಸ್ಪರ್ಧೆ ನೀಡಲು ಬಿಜೆಪಿ ನಿರ್ಣಾಯಕ ನಿರ್ಧೈರ ಕೈಗೆತ್ತಿಕೊಂಡಂತಿದೆ. ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ, 28 ಸ್ಥಾನಗಳೊಂದಿಗೆ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೋಟೋ ಫಿನಿಶ್ ಆಗಿದೆ. ಮೇ 13 ರಂದು ನಿಜವಾದ ಬಜರಂಗ ಬಲಿ ಯಾರೆಂಬುದು ಬಹಿರಂಗವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


