ರಾಜಕೀಯ

ರೇವಣ್ಣಗೆ ಭವಾನಿ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಭಾಗ್ಯವಿಧಾತ ಸಿದ್ದರಾಮಯ್ಯಗೆ ಕ್ಷೇತ್ರದ್ದೇ ಚಿಂತೆ: ಪ್ರತಾಪ್ ಸಿಂಹ ವ್ಯಂಗ್ಯ

ಅನ್ನಭಾಗ್ಯ, ಶಾದಿ ಭಾಗ್ಯ, ಕ್ಷೀರಭಾಗ್ಯ ಮುಂತಾದ ಭಾಗ್ಯಗಳನ್ನು ಕೊಟ್ಟ ಸಿದ್ದರಾಮ್ಯನವರಿಗೆ ಕ್ಷೇತ್ರ ಭಾಗ್ಯವೇ ಇಲ್ಲ. ಅವರು ಕ್ಷೇತ್ರವನ್ನು ಹುಡುಕುವ ದುಃಸ್ಥಿತಿ ಬಂದಿದೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ರೇವಣ್ಣಗೆ ಭವಾನಿ ಚಿಂತೆ, ಕುಮಾರಣ್ಣನಿಗೆ ನಿಖಿಲ್ ಚಿಂತೆ, ಭಾಗ್ಯವಿಧಾತ ಸಿದ್ದರಾಮಯ್ಯಗೆ ಕ್ಷೇತ್ರದ್ದೇ ಚಿಂತೆ: ಪ್ರತಾಪ್ ಸಿಂಹ ವ್ಯಂಗ್ಯ
ಪ್ರತಾಪ್ ಸಿಂಹ
Published On :

ಕೊಡಗು: ಅನ್ನಭಾಗ್ಯ, ಶಾದಿ ಭಾಗ್ಯ, ಕ್ಷೀರಭಾಗ್ಯ ಮುಂತಾದ ಭಾಗ್ಯಗಳನ್ನು ಕೊಟ್ಟ ಸಿದ್ದರಾಮ್ಯನವರಿಗೆ ಕ್ಷೇತ್ರ ಭಾಗ್ಯವೇ ಇಲ್ಲ. ಅವರು ಕ್ಷೇತ್ರವನ್ನು ಹುಡುಕುವ ದುಃಸ್ಥಿತಿ ಬಂದಿದೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ಕೊಡಗಿನಲ್ಲಿ ಮಾತನಾಡಿದ ಅವರು, ಎಲ್ಲಾ ಭಾಗ್ಯಗಳನ್ನು ಕೊಟ್ಟು ಈಗ ಒಂದು ಕ್ಷೇತ್ರಕ್ಕಾಗಿ ಹುಡುಕಾಡುತ್ತಿರುವುದನ್ನು ನೋಡಿದರೆ ಆಶ್ಚರ್ಯ ಮತ್ತು ಸೋಜಿವಾಗುತ್ತದೆ ಎಂದರು.

ಯುಗಾದಿ ಹಬ್ಬದ ದಿನದಂದು ಕಾಂಗ್ರೆಸ್ ಅಭ್ಯರ್ಥಿಗಳ ಟಿಕೆಟ್ ಘೋಷಣೆ ಆಗಬೇಕಾಗಿತ್ತು. ಆದರೆ ಯಾಕೆ ಇವತ್ತಿನವರೆಗೆ ಟಿಕೆಟ್ ಘೋಷಣೆ ಆಗಿಲ್ಲ. ಇವರಿಗೆ ಯಾರಿಗೂ ರಾಜ್ಯ ಮತ್ತು ದೇಶದ ಚಿಂತೆಯಿಲ್ಲ. ಸಿದ್ದರಾಮಯ್ಯಗೆ ಕ್ಷೇತ್ರದ ಚಿಂತೆ ಆದರೆ ಅವರ ಧರ್ಮಪತ್ನಿಗೆ ಪುತ್ರನ ಚಿಂತೆ.

ರೇವಣ್ಣ ಅವರಿಗೆ ಭವಾನಿಯವರ ಚಿಂತೆಯಾದರೆ, ಕುಮಾರಣ್ಣನಿಗೆ ನಿಖಿಲ್ ನ ಚಿಂತೆ. ಹೀಗಾಗಿ ಇವರಿಗೆಲ್ಲ ಅವರವರ ಕುಟುಂಬಗಳ ಚಿಂತೆ ಇದೆಯೇ ಹೊರತ್ತು, ಇವರಿಗೆ ರಾಜ್ಯದ ಚಿಂತೆ ಇಲ್ಲ. ಹೀಗಾಗಿ ರಾಜ್ಯದ ಚಿಂತೆ ಇದೆ ಎಂದು ಯಾರು ಮಂಗಗಳಾಗಬೇಡಿ ಎಂದು ಜನರಿಗೆ ಮನವಿ ಮಾಡಿದರು.

ಇವರು ಕೊಡುವ 200 ಯುನಿಟ್ ವಿದ್ಯುತ್, ಗೃಹಿಣಿಯರಿಗೆ 2000 ಗೃಹಲಕ್ಷ್ಮಿ ಯೋಜನೆ ಕೊಡುತ್ತೇವೆ ಎನ್ನುವುದೆನ್ನೆಲ್ಲ ನಂಬಬೇಡಿ. ಪಂಜಾಬ್ ನಲ್ಲಿ ಎಎಪಿಯವರು ಇದನ್ನೇ ಹೇಳಿ ಟೋಪಿ ಹಾಕಿದ್ದಾರೆ. ಈಗ ರಾಜ್ಯದ ಜನತೆಗೆ ಟೋಪಿಹಾಕಲು ಬರುತ್ತಿದ್ದಾರೆ. ಹೀಗಾಗಿ ಇವರನ್ನು ನಂಬಬೇಡಿ ಎಂದು ಪ್ರತಾಪ್ ಸಿಂಹತಿರುಗೇಟು ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.