ಪ್ರಧಾನಿ ನರೇಂದ್ರ ಮೋದಿ ಅವರನ್ನು ನರಹಂತಕ ಎಂದರೆ ಸಿದ್ದರಾಮಯ್ಯ ನಾಲಿಗೆ ಸೀಳುತ್ತೇವೆ: ಈಶ್ವರಪ್ಪ ವಾರ್ನಿಂಗ್
ಪ್ರಧಾನಿ ನರೇಂದ್ರ ಮೋದಿಯವರನ್ನು ಇನ್ನೊಮ್ಮೆ ನರಹಂತಕ ಎಂದು ಕರೆದರೆ ಸಿದ್ದರಾಮಯ್ಯ ಅವರ ನಾಲಿಗೆ ಸೀಳುತ್ತೇವೆ’ ಎಂದು ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು

ಕೊಡಗು: ಕೊಡಗಿನ ಮಣ್ಣು ರಾಷ್ಟ್ರೀಯವಾದಿಗಳ ಮಣ್ಣು ಆದರೆ ಸಿದ್ದರಾಮಯ್ಯ ಟಿಪ್ಪು, ಜಿನ್ನಾ ಸಂತಾನದವರು. ಅಂತಹವರಿಗೆ ಈ ಜಿಲ್ಲೆಯ ಜನರು ಇಲ್ಲಿಗೆ ಬರಲು ಬಿಡುವುದಿಲ್ಲ. ಮತ್ತೆ ಬರುತ್ತೇನೆ ಎಂದಿದ್ದ ಸಿದ್ದರಾಮಯ್ಯ ಬರಲಿ ನೋಡೋಣ ಎಂದು ಬಿಜೆಪಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದ್ದಾರೆ.
ಕೊಡಗಿನಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಮೊಟ್ಟೆಯಲ್ಲಿ ಹೊಡೆಸಿಕೊಂಡ ಸಿದ್ದರಾಮಯ್ಯ ಕೊಡಗಿಗೆ ಮತ್ತೊಮ್ಮೆ ಬರುವುದಾಗಿ ಸವಾಲೆಸೆದಿದ್ದರು. ಆದರೆ ಬರಲಿಲ್ಲ. ಬಂದರೆ ಕೋಳಿಮೊಟ್ಟೆಯಲ್ಲಿ ಹೊಡೆಯಬಾರದು, ಬದಲಿಗೆ ಬಿಜೆಪಿಗೆ ಮತ ಹಾಕಬೇಕು’ ಎಂದರು.
ಪ್ರಧಾನಿ ನರೇಂದ್ರ ಮೋದಿಯವರನ್ನು ಇನ್ನೊಮ್ಮೆ ನರಹಂತಕ ಎಂದು ಕರೆದರೆ ಸಿದ್ದರಾಮಯ್ಯ ಅವರ ನಾಲಿಗೆ ಸೀಳುತ್ತೇವೆ’ ಎಂದು ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು. ನಾವು ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡ್ತೇವೆ ಅಂತ ಸಿದ್ದರಾಮಯ್ಯ ಹೇಳ್ತಾರೆ.
ಬಿಜೆಪಿಯವರು ಪಿಎಫ್ಐನವರನ್ನು ನಿಷೇಧಿಸಿದ್ದಾರೆ, ನಾವು ಅಧಿಕಾರಕ್ಕೆ ಬಂದರೆ ಅದನ್ನು ವಾಪಸ್ ಮಾಡ್ತೇವೆ ಅವರನ್ನು ಸ್ವತಂತ್ರಗೊಳಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾನೆ. ಆದರೆ ಕೊಡಗು ಜಿನ್ನಾ ಸಂತತಿಗೆ ಅವಕಾಶ ಕೊಡಲ್ಲ ಎಂದು ಭಾಷಣದ ಉದ್ದಕ್ಕೂ ಈಶ್ವರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.
ನಿಮ್ಮಂತವರು ನೂರು ಜನ ಬಂದರು ಈ ಕಾಯ್ದೆಗಳನ್ನು ವಾಪಸ್ ಮಾಡುವುದಕ್ಕೆ ಆಗಲ್ಲ ಎಂದರು. ಮತಾಂತರ ನಿಷೇಧ ಕಾಯ್ದೆ ವಾಪಸ್ ಮಾಡ್ತೀವಿ ಅಂತ ಸಿದ್ಧರಾಮಯ್ಯ ಹೇಳ್ತಾರೆ. ಆದರೆ ನಿಮ್ಮನೆ ಹೆಣ್ಣು ಮಗಳನ್ನು ಹೊತ್ಕೊಂಡು ಹೋಗಿ ಮತಾಂತರ ಮಾಡಿದರೆ ಏನು ಮಾಡ್ತೀರಿ, ಎರಡು ವರ್ಷ ಬಳಸಿಕೊಂಡು ವಾಪಸ್ ಕಳುಹಿಸಿದರೆ ಏನು ಮಾಡ್ತೀರಿ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


