ತುರಾತುರಿಯಲ್ಲಿ ಸಿಎಂ ತವರು ಜಿಲ್ಲೆಯವರನ್ನೇ 6 ನಿಗಮಗಳ ನಿರ್ದೇಶಕರಾಗಿ ನೇಮಕ: ಕಾಂಗ್ರೆಸ್ ಟೀಕೆ
ಚುನಾವಣೆ ಘೋಷಣೆಗೆ ಒಂದು ತಿಂಗಳು ಬಾಕಿ ಇರುವಂತೆಯೇ 6 ನಿಗಮಗಳಿಗೆ ಒಟ್ಟು 11 ನಿರ್ದೇಶಕರನ್ನು ನೇಮಕ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೇಮಕಾತಿ ಆದೇಶ ನೀಡಲಾಗಿದೆ.

ಬೆಂಗಳೂರು: ಚುನಾವಣೆ ಘೋಷಣೆಗೆ ಒಂದು ತಿಂಗಳು ಬಾಕಿ ಇರುವಂತೆಯೇ 6 ನಿಗಮಗಳಿಗೆ ಒಟ್ಟು 11 ನಿರ್ದೇಶಕರನ್ನು ನೇಮಕ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನೇಮಕಾತಿ ಆದೇಶ ನೀಡಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರತಿಪಕ್ಷ ಕಾಂಗ್ರೆಸ್, ಚುನಾವಣೆ ಘೋಷಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಬಿಜೆಪಿಯ ಲೂಟಿ ವೇಗ ಪಡೆದುಕೊಂಡಿದೆ ಎಂದು ಆರೋಪಿಸಿದೆ.
ತುರಾತುರಿಯಲ್ಲಿ ಸಿಎಂ ತವರು ಜಿಲ್ಲೆಯವರನ್ನೇ 6 ನಿಗಮಗಳಿಗೆ ನಿರ್ದೇಶಕರನ್ನಾಗಿಸಿದೆ. ಹಲವು ಇಲಾಖೆಗಳಲ್ಲಿ ದುಪ್ಪಟ್ಟು ದರ ನಿಗದಿ ಮಾಡಿ ಟೆಂಡರ್ ಕರೆಯಲಾಗಿದೆ. ಭ್ರಷ್ಟಾಚಾರ ಮಾತ್ರ ಡಬಲ್ ಇಂಜಿನ್ ವೇಗದಲ್ಲಿದೆ ಅಲ್ಲವೇ? ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ.

ಮತ್ತೊಂದು ಟ್ವೀಟ್ ನಲ್ಲಿ ಸಂವಿಧಾನ, ಪ್ರಜಾಪ್ರಭುತ್ವಗಳಿಗೆ ಅಪಚಾರವೆಸಗಿ, ಭ್ರಷ್ಟಾಚಾರ, ಕೋಮುವಾದವನ್ನು ಕಾಯಕ ಮಾಡಿಕೊಂಡಿರುವ ಬಿಜೆಪಿಯಿಂದ ಜನ ಬೇಸತ್ತು "ಎದ್ದೇಳು ಕರ್ನಾಟಕ" ಅಭಿಯಾನ ಹಮ್ಮಿಕೊಂಡಿದ್ದಾರೆ. 'ಎದ್ದೇಳು ಕರ್ನಾಟಕ, ಬಿಜೆಪಿ ವಿರುದ್ಧ ಸಿಡಿದೇಳು ಕರ್ನಾಟಕ' ಎಂಬ ಈ ಕೂಗು ರಾಜ್ಯವನ್ನ ದುಷ್ಟ ಬಿಜೆಪಿ ಆಡಳಿತದಿಂದ ಮುಕ್ತಿಗೊಳಿಸುವುದು ನಿಶ್ಚಿತ ಎಂದು ಟ್ವೀಟ್ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


