ರಾಜಕೀಯ

ಮೋದಿ, ಅಮಿತ್ ಶಾ ಕುರಿತಾದ ವ್ಯಂಗ್ಯವಾಡುವ ವಿಡಿಯೋ ಹಂಚಿಕೊಂಡ ಕಾಂಗ್ರೆಸ್; ರಾಹುಲ್ ಗಾಂಧಿ ಬಗ್ಗೆ ಹೇಳಿದ್ದೇನು?

ಅನಿಮೇಟೆಡ್ ವಿಡಿಯೋವನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿ ವಿಭಜನೆಯ ತಂತ್ರಗಳನ್ನು ಹೂಡುತ್ತಿದೆ ಮತ್ತು ರಾಹುಲ್ ಗಾಂಧಿ 'ನಫ್ರತ್ ಕಾ ಬಜಾರ್' ಅನ್ನು ತೊಡೆದುಹಾಕಿ ಅದನ್ನು 'ಮೊಹಬ್ಬತ್ ಕಿ ದುಕಾನ್' ನೊಂದಿಗೆ ಬದಲಾಯಿಸುತ್ತಿದ್ದಾರೆ ಎಂಬ ಸಂದೇಶ ಸಾರಿದೆ.

ಮೋದಿ, ಅಮಿತ್ ಶಾ ಕುರಿತಾದ ವ್ಯಂಗ್ಯವಾಡುವ ವಿಡಿಯೋ ಹಂಚಿಕೊಂಡ ಕಾಂಗ್ರೆಸ್; ರಾಹುಲ್ ಗಾಂಧಿ ಬಗ್ಗೆ ಹೇಳಿದ್ದೇನು?
ವಿಡಿಯೋದಲ್ಲಿನ ರಾಹುಲ್ ಗಾಂಧಿ
Published On :

ಬೆಂಗಳೂರು: 2024 ರ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಪ್ರಾರಂಭಿಸಿವೆ. ಮಂಗಳವಾರ ಅನಿಮೇಟೆಡ್ ವಿಡಿಯೋವನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿ ವಿಭಜನೆಯ ತಂತ್ರಗಳನ್ನು ಹೂಡುತ್ತಿದೆ ಮತ್ತು ರಾಹುಲ್ ಗಾಂಧಿ 'ನಫ್ರತ್ ಕಾ ಬಜಾರ್' ಅನ್ನು ತೊಡೆದುಹಾಕಿ ಅದನ್ನು 'ಮೊಹಬ್ಬತ್ ಕಿ ದುಕಾನ್' ನೊಂದಿಗೆ ಬದಲಾಯಿಸುತ್ತಿದ್ದಾರೆ ಎಂಬ ಸಂದೇಶ ಸಾರಿದೆ.

ಬಿಜೆಪಿಯು ಒಂದು ಚಿಕ್ಕ ಆನಿಮೇಟೆಡ್ ವಿಡಿಯೋವನ್ನು ಬಿಡುಗಡೆ ಮಾಡಿದ ತಿಂಗಳ ನಂತರ ಬಂದಿರುವ ಕಾಂಗ್ರೆಸ್‌ನ ವಿಡಿಯೋ, ತನ್ನ ಭಾರತ್ ಜೋಡೋ ಯಾತ್ರೆಯ ಮೂಲಕ ರಾಹುಲ್ ಗಾಂಧಿಯವರು ದೇಶವನ್ನು ಒಂದುಗೂಡಿಸುವ ಅಂಶವೆಂದು ಬಿಂಬಿಸುತ್ತದೆ.

ಕರ್ನಾಟಕ ಕಾಂಗ್ರೆಸ್ ಈ ಕುರಿತಾದ ವಿಡಿಯೋವನ್ನು ಹಂಚಿಕೊಂಡಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನಗಳ ಮೌಲ್ಯಗಳನ್ನು ನಾಶ ಮಾಡಿ, ದ್ವೇಷವನ್ನು ಬಿತ್ತಿ, ಸರ್ವಾಧಿಕಾರವನ್ನು ಸ್ಥಾಪಿಸಲು ಹೊರಟಿರುವ ಬಿಜೆಪಿಯ ಪ್ರಯತ್ನಗಳನ್ನು ಪ್ರೀತಿ, ಸಹಬಾಳ್ವೆಯ ಸಂದೇಶಗಳ ಮೂಲಕ ರಾಹುಲ್ ಗಾಂಧಿ ಅವರು ಸೋಲಿಸಲಿದ್ದಾರೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ ಎಂದು ಬರೆದಿದೆ.

1:43 ನಿಮಿಷಗಳ ವೀಡಿಯೊದಲ್ಲಿ, ಪ್ರಧಾನಿ ಮೋದಿಯವರ ಅನಿಮೇಟೆಡ್ ಪಾತ್ರವು ವಾಹನದ ಮೇಲೆ ಪ್ರಜಾಪ್ರಭುತ್ವ, ಮಾಧ್ಯಮ ಮತ್ತು ಅಧಿಕಾರವನ್ನು ಹಿಡಿತದಲ್ಲಿಟ್ಟುಕೊಂಡು ರಥವನ್ನು ಓಡಿಸುತ್ತಿದೆ. ಗೃಹ ಸಚಿವ ಅಮಿತ್ ಶಾ ಅವರು ಹಿಂದೂ ಮತ್ತು ಮುಸ್ಲಿಂ ವ್ಯಕ್ತಿಗಳ ನಡುವೆ ಬಿರುಕು ಉಂಟುಮಾಡುವ ಮತ್ತು ರಾಹುಲ್ ಗಾಂಧಿ ಪ್ರವೇಶಿಸಿ ಎರಡು ಸಮುದಾಯಗಳ ವ್ಯಕ್ತಿಗಳನ್ನು ಒಗ್ಗೂಡಿಸುವ ಅನಿಮೇಟೆಡ್ ಪಾತ್ರವನ್ನು ವಿಡಿಯೋ ತೋರಿಸುತ್ತದೆ.

ಭಾರತ್ ಜೋಡೋ ಯಾತ್ರೆಯ ಮೂಲಕ ಜನರನ್ನು ಒಗ್ಗೂಡಿಸುತ್ತಾ ರಾಹುಲ್ ಗಾಂಧಿ ನಡೆದುಕೊಂಡು ಹೋಗುವ, ಎಲ್ಲಾ ವರ್ಗದ ಜನರೊಂದಿಗೆ ಬೆರೆಯುವ ಚಿತ್ರಣಗಳನ್ನು ಕಟ್ಟಿಕೊಡಲಾಗಿದೆ. ರಾಹುಲ್ ಗಾಂಧಿ ಟ್ರಕ್‌ನಲ್ಲಿ ಪ್ರಯಾಣಿಸುತ್ತಿರುವುದನ್ನು ತೋರಿಸುತ್ತದೆ ಮತ್ತು ಅವರು 'ನಫ್ರತ್ ಕಾ ಬಜಾರ್' ಬೋರ್ಡ್ ಅನ್ನು ಹಾದುಹೋಗುವಾಗ, ಅದು ಕೆಳಗೆ ಬೀಳುತ್ತದೆ ಮತ್ತು 'ಮೊಹಾಬತ್ ಕಿ ದುಕಾನ್' ಹಿನ್ನೆಲೆಯಲ್ಲಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.