ಬಿಜೆಪಿಯ ಉರಿ ಶಮನಕ್ಕಾಗಿ "ಬರ್ನಲ್ ಭಾಗ್ಯ" ಕೊಡುವ ಬಗ್ಗೆ ಚಿಂತನೆ: ಕಾಂಗ್ರೆಸ್
ಬಿಜೆಪಿ ಪಕ್ಷದ ಉರಿ, ನೋವು ನಮಗೆ ಅರ್ಥವಾಗುತ್ತದೆ, ಬಿಜೆಪಿಯ ಉರಿ ಶಮನಕ್ಕಾಗಿ "ಬರ್ನಲ್ ಭಾಗ್ಯ" ಕೊಡುವ ಬಗ್ಗೆ ಚಿಂತಿಸುತ್ತೇವೆ ಎಂದು ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನು ಟೀಕಿಸಿದ ಪ್ರತಿಪಕ್ಷ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಬೆಂಗಳೂರು: ಬಿಜೆಪಿ ಪಕ್ಷದ ಉರಿ, ನೋವು ನಮಗೆ ಅರ್ಥವಾಗುತ್ತದೆ, ಬಿಜೆಪಿಯ ಉರಿ ಶಮನಕ್ಕಾಗಿ "ಬರ್ನಲ್ ಭಾಗ್ಯ" ಕೊಡುವ ಬಗ್ಗೆ ಚಿಂತಿಸುತ್ತೇವೆ ಎಂದು ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನು ಟೀಕಿಸಿದ ಪ್ರತಿಪಕ್ಷ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಮಹಿಳೆಯರಿಗೆ ಉಚಿತ ಯೋಜನೆ ಜಾರಿಯಾದ ಮರುದಿನವೇ ಬಾಲಕಿಯೊಬ್ಬಳು ಸರ್ಕಾರಿ ಬಸ್ ನಿಂದ ಬಿದ್ದು ಸಾವನ್ನಪ್ಪಿದ ಪ್ರಕರಣವನ್ನು ಉಲ್ಲೇಖಿಸಿ ಬಿಜೆಪಿ ಮಾಡಿದ ಟ್ವೀಟ್ ಗೆ ಕಾಂಗ್ರೆಸ್ ಈ ರೀತಿಯಾಗಿ ಪ್ರತಿಕ್ರಿಯಿಸಿದೆ.
ಬಿಜೆಪಿ ಪಕ್ಷದ ಉರಿ, ನೋವು ನಮಗೆ ಅರ್ಥವಾಗುತ್ತದೆ, ಬಿಜೆಪಿಯ ಉರಿ ಶಮನಕ್ಕಾಗಿ "ಬರ್ನಲ್ ಭಾಗ್ಯ" ಕೊಡುವ ಬಗ್ಗೆ ಚಿಂತಿಸುತ್ತೇವೆ.
ಪೂರ್ವಸಿದ್ಧತೆ ಇಲ್ಲದೆ ಲಾಕ್ ಡೌನ್ ಮಾಡಿ, ನೋಟು ನಿಷೇಧ ಮಾಡಿ ಸತ್ತ ನೂರಾರು ಮಂದಿಯ ಬಗ್ಗೆ ಈ ಕಾಳಜಿ ಇರಲಿಲ್ಲವೇಕೆ?
ಇದನ್ನು ಓದಿ: ಬಿಜೆಪಿ ರೇಟ್ ಕಾರ್ಡ್ ಮಾನನಷ್ಟ ಮೊಕದ್ದಮೆ ಪ್ರಕರಣ: ಸಿದ್ದು, ಡಿಕೆಶಿ ಸೇರಿ 36 'ಕೈ' ನಾಯಕರ ವಿರುದ್ಧ ಕೋರ್ಟ್ ಸಮನ್ಸ್!
ಹೆಚ್ಚುವರಿ ಬಸ್ ಗಳನ್ನು ಖರೀದಿಸಲು ಚಿಂತಿಸುತ್ತಿದ್ದೇವೆ, ಸಾರಿಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಹುನ್ನಾರ ನಡೆಸಿದ ನಿಮ್ಮಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


