ಕರ್ತವ್ಯದ ಅರಿವು ಇಲ್ಲದ್ದರಿಂದಲೇ ಹೀನಾಯ ಸೋಲು; ಈ ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ: ಪ್ರಿಯಾಂಕ್ ಖರ್ಗೆ
ಚೀನಾ ಅತಿಕ್ರಮಣ ಮಾಡಿದಾಗ ರಕ್ಷಣಾ ತಜ್ಞರಾಗುತ್ತಾರೆ, ಬೆಲೆ ಏರಿಕೆಗೆ ಆರ್ಥಿಕ ತಜ್ಞರಾಗುತ್ತಾರೆ, ಮೋದಿ ವಿದೇಶ ಪ್ರವಾಸಕ್ಕೆ ಹೋದರೆ ವಿದೇಶಾಂಗ ತಜ್ಞರಾಗುತ್ತಾರೆ! ಈ ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ .

ಬೆಂಗಳೂರು: ಚೀನಾ ಅತಿಕ್ರಮಣ ಮಾಡಿದಾಗ ರಕ್ಷಣಾ ತಜ್ಞರಾಗುತ್ತಾರೆ, ಬೆಲೆ ಏರಿಕೆಗೆ ಆರ್ಥಿಕ ತಜ್ಞರಾಗುತ್ತಾರೆ, ಮೋದಿ ವಿದೇಶ ಪ್ರವಾಸಕ್ಕೆ ಹೋದರೆ ವಿದೇಶಾಂಗ ತಜ್ಞರಾಗುತ್ತಾರೆ! ಈ ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಾನು ನನ್ನ ಪಕ್ಷದ ವಕ್ತಾರನಾಗಿದ್ದೇನೆ, ಜನರ ಆಶೀರ್ವಾದದಿಂದ ಸಚಿವ ಸ್ಥಾನದ ಜವಾಬ್ದಾರಿ ಹೊತ್ತಿದ್ದೇನೆ, ಸರ್ಕಾರದ ಪರವಾಗಿ, ನಾಡಿನ ಜನರ ಪರವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ ಎಂದು ಟ್ವೀಟ್ ನಲ್ಲಿ ಬರೆದು ಕೊಂಡಿದ್ದಾರೆ.
ಬಿಜೆಪಿಗರಿಗೆ ಕರ್ತವ್ಯದ ಬಗ್ಗೆ ಅಜ್ಞಾನವಿದ್ದರೆ ನಾನು ಹೊಣೆಗಾರನಲ್ಲ! ಬಿಜೆಪಿಗೆ ಕರ್ತವ್ಯದ ಅರಿವು ಇಲ್ಲದಿದ್ದರಿಂದಲೇ ಹೀನಾಯ ಸೋಲಿಗೆ ಗುರಿಯಾಗಿದ್ದು ಎಂದು ಲೇವಡಿ ಮಾಡಿರುವ ಪ್ರಿಯಾಂಕ್ ,ಬಿಜೆಪಿ ಆಡಳಿತದ ಇಬ್ಬರು ಮುಖ್ಯಮಂತ್ರಿಗಳ ಅವಧಿಯಲ್ಲಿ ಯಾರು ಶಾಡೋ ಸಿಎಂ ಆಗಿದ್ದರು, ಯಾರು ಸೂಪರ್ ಸಿಎಂ ಆಗಿದ್ದರು ಎನ್ನುವುದು ಜಗತ್ತಿಗೆ ತಿಳಿದ ವಿಚಾರ, ಬಿಜೆಪಿಗೆ ತಿಳಿದಿಲ್ಲವೆಂದರೆ ಯತ್ನಾಳರ ಹಾಗೂ ರೇಣುಕಾಚಾರ್ಯರ ಮಾತುಗಳನ್ನು ರಿವೈಂಡ್ ಮಾಡಿ ಕೇಳಿಸಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.
ಸೋತು ವಿರೋಧ ಪಕ್ಷದಲ್ಲಿ ಕೂತಿದ್ದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವ ಕನಿಷ್ಠ ಹೊಣೆಗಾರಿಕೆ ಪ್ರದರ್ಶಿಸಲು ಸಾಧ್ಯವಾಗಿಲ್ಲ ಬಿಜೆಪಿಗೆ. ಅಧಿವೇಶನ ಶುರುವಾಗಿ, ರಾಜ್ಯಪಾಲರ ಭಾಷಣವಾಗಿ,ಬಜೆಟ್ ಮಂಡನೆಯಾಗಿ, ಬಜೆಟ್ ಮೇಲಿನ ಚರ್ಚೆಯೂ ಆಯ್ತು, ಆದರೆ ಒಬ್ಬ ವಿರೋಧ ಪಕ್ಷದ ನಾಯಕ ಸಿಗದಿರುವುದು ಬಿಜೆಪಿಯ ರಾಜಕೀಯ ಹಾಗೂ ನೈತಿಕ ದಿವಾಳಿತನಕ್ಕೆ ಸಾಕ್ಷಿ.
ಹೈಕಮಾಂಡ್ ನಾಯಕರಿಂದ ತಿರಸ್ಕಾರಕ್ಕೊಳಪಟ್ಟ ಬಿಜೆಪಿ ಕರ್ನಾಟಕ ವಿಪಕ್ಷ ನಾಯಕನ ಆಯ್ಕೆಯ ವಿಚಾರದಲ್ಲಿ ಬೊಗಸೆಯಷ್ಟಾದರೂ ಗೌರವವನ್ನು ಪಡೆದು ಬಂದ ನಂತರ ನನ್ನ ಬಗ್ಗೆ ಮಾತಾಡಲಿ ಎಂದು ತಿವಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


