ರಾಜಕೀಯ

ಥಟ್ ಅಂತ ಹೇಳಿ! ಬಾಂಧವರಿಗೆ ಮೀಸಲಿಟ್ಟ ಭೂಮಿಯನ್ನು ನುಂಗಿ ಹಾಕಿದ ಭೂಗಳ್ಳ ಯಾರು?

ರಾಜ್ಯ ವಿಧಾನಸಭೆ ಚುನಾವಣ ಸಮೀಪಿಸುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್ ನಾಯಕರ ಪರಸ್ಪರ ವಾಗ್ದಾಳಿ ಮತ್ತಷ್ಟು ರಂಗೇರಿದೆ.

ಥಟ್ ಅಂತ ಹೇಳಿ! ಬಾಂಧವರಿಗೆ ಮೀಸಲಿಟ್ಟ ಭೂಮಿಯನ್ನು ನುಂಗಿ ಹಾಕಿದ ಭೂಗಳ್ಳ ಯಾರು?
ಬಿಜೆಪಿ ಟ್ವೀಟ್
Published On :

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣ ಸಮೀಪಿಸುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್ ನಾಯಕರ ಪರಸ್ಪರ ವಾಗ್ದಾಳಿ ಮತ್ತಷ್ಟು ರಂಗೇರಿದೆ.

ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ವಕ್ಫ್ ಮಂಡಳಿಗೆ ಸೇರಿದ ಅಂದಾಜು 2.30 ಲಕ್ಷ ಕೋಟಿ ರೂಪಾಯಿ ಮೌಲ್ಯದ 29,000 ಎಕರೆ ಭೂಮಿಯನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿತ್ತು. ಈ ಪ್ರಕರಣದ ಭೂಗಳ್ಳ ಯಾರು? ಎಂದು ಟ್ವಿಟ್ಟರ್ ನಲ್ಲಿ  ಪ್ರಶ್ನಿಸಿದೆ.

ಪದವಿ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಲ್ಯಾಪ್‌ಟಾಪ್‌ ವಿತರಣೆಯಲ್ಲೂ ಗೋಲ್‌ ಮಾಡಿ ಬರೋಬ್ಬರಿ 300 ಕೋಟಿ ರೂ. ಲಪಟಾಯಿಸಿದವರು ಯಾರು? ಎಂದು ಬಿಜೆಪಿ ಟ್ವೀಟ್ ಮಾಡಿದೆ.

‘ಕಾಮನ್‌ ಮ್ಯಾನ್‌ ಸಿಎಂ’ ಅವರನ್ನು ನಾಯಿಗೆ ಹೋಲಿಸುವ ಸಿದ್ದರಾಮಯ್ಯ ಅವರು ಸೋನಿಯಾ, ರಾಹುಲ್‌ ಎದುರು ಬಂದರೆ ಇಲಿಯಂತಾಗುತ್ತಾರೆ, ಬೊಮ್ಮಾಯಿ ಅವರನ್ನು ಬಾಯಿಗೆ ಬಂದಂತೆ ಆಡಿಕೊಂಡವರದ್ದು ಈಗ ನಾಯಿಪಾಡು ಎಂದು ಬಿಜೆಪಿ ಲೇವಡಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.