ಲಂಚಕ್ಕಾಗಿ ಕಿರುಕುಳ ಆರೋಪ: ಇದು ನಕಲಿ ಪತ್ರ ಎಂದ ಸಚಿವ ಚೆಲುವರಾಯಸ್ವಾಮಿ
ನನ್ನ ವಿರುದ್ಧ ರಾಜ್ಯಪಾಲರಿ ದೂರು ನೀಡಿರುವ ಪತ್ರದ ಕುರಿತು ನನಗೆ ತಿಳಿದಿಲ್ಲ, ಪತ್ರವನ್ನು ಯಾರೂ ಬರೆದಿದ್ದಾರೆಂಬುದೂ ಗೊತ್ತಿಲ್ಲ. ಆದರೆ, ಜಂಟಿ ನಿರ್ದೇಶಕರು ನಕಲಿ ಪತ್ರ ಎಂದು ಹೇಳಿದ್ದಾರೆಂದು ಸಚಿವ ಚೆಲುವರಾಯಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.

ಬೆಂಗಳೂರು: ನನ್ನ ವಿರುದ್ಧ ರಾಜ್ಯಪಾಲರಿ ದೂರು ನೀಡಿರುವ ಪತ್ರದ ಕುರಿತು ನನಗೆ ತಿಳಿದಿಲ್ಲ, ಪತ್ರವನ್ನು ಯಾರೂ ಬರೆದಿದ್ದಾರೆಂಬುದೂ ಗೊತ್ತಿಲ್ಲ. ಆದರೆ, ಜಂಟಿ ನಿರ್ದೇಶಕರು ನಕಲಿ ಪತ್ರ ಎಂದು ಹೇಳಿದ್ದಾರೆಂದು ಸಚಿವ ಚೆಲುವರಾಯಸ್ವಾಮಿ ಅವರು ಸೋಮವಾರ ಹೇಳಿದ್ದಾರೆ.
ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನನ್ನ ವಿರುದ್ಧ ರಾಜ್ಯಪಾಲರಿ ದೂರು ನೀಡಿರುವ ಪತ್ರದ ಕುರಿತು ನನಗೆ ತಿಳಿದಿಲ್ಲ, ಪತ್ರವನ್ನು ಯಾರೂ ಬರೆದಿದ್ದಾರೆಂಬುದೂ ಗೊತ್ತಿಲ್ಲ. ಆದರೆ, ಜಂಟಿ ನಿರ್ದೇಶಕರು ನಕಲಿ ಪತ್ರ ಎಂದು ಹೇಳಿದ್ದಾರೆ. ಪಾಪಾ, ಬಹಳ ಹುಡುಕಿ ಹುಡುಕಿ ಕೆಲವರು ಏನೇನೋ ಮಾಡುತ್ತಿದ್ದಾರೆ ಮಾಡಲಿ. ಈ ಬಗ್ಗೆ ತನಿಖೆ ನಡೆಸುವಂತೆ ಕೃಷಿ ಕಾರ್ಯದರ್ಶಿಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಾತನಾಡಿ, ಕೆಲವರು ಬೇರೇನೋ ಮಾಡುತ್ತಿದ್ದಾರೆ. ಹೊಟ್ಟೆಕಿಚ್ಚಿಗೆ ಮದ್ದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಮಂಡ್ಯದಲ್ಲಿ ನಾವು ಚುನಾವಣೆಯಲ್ಲಿ ಏಳು ಸ್ಥಾನಗಳ ಪೈಕಿ 6ರಲ್ಲಿ ಗೆದ್ದಿದ್ದೇವೆ. ಇದು ಕೆಲವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ. ಲಂಚದ ಆರೋಪದ ಬಗ್ಗೆ ತನಿಖೆ ಬೇಕಾದರೆ ಮಾಡಿಸೋಣ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


