ರಾಜಕೀಯ

ಶೋಭಾ ಕರಂದ್ಲಾಜೆ ಬಾಯಿ ಅದುಮಿ ಹಿಡಿದಿರುವವರು ಯಾರು? ವಿಟ್ಲ ದಲಿತ ಬಾಲಕಿ ಅತ್ಯಾಚಾರದ ಬಗ್ಗೆ ಮೌನವೇಕೆ?

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಸಂಘ ಪರಿವಾರದವರಿಂದ ನಿರಂತರ ಅತ್ಯಾಚಾರಕ್ಕೆ ಒಳಪಟ್ಟ ದಲಿತ ಬಾಲಕಿಯ ಬಗ್ಗೆ ಬಿಜೆಪಿಯವರ ಮೌನವೇಕೆ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಶೋಭಾ ಕರಂದ್ಲಾಜೆ ಬಾಯಿ ಅದುಮಿ ಹಿಡಿದಿರುವವರು ಯಾರು? ವಿಟ್ಲ ದಲಿತ ಬಾಲಕಿ ಅತ್ಯಾಚಾರದ ಬಗ್ಗೆ ಮೌನವೇಕೆ?
ಕಾಂಗ್ರೆಸ್ ಟ್ವೀಟ್ ಮಾಡಿರುವ ಫೋಟೋ
Published On :

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಸಂಘ ಪರಿವಾರದವರಿಂದ ನಿರಂತರ ಅತ್ಯಾಚಾರಕ್ಕೆ ಒಳಪಟ್ಟ ದಲಿತ ಬಾಲಕಿಯ ಬಗ್ಗೆ ಬಿಜೆಪಿಯವರ ಮೌನವೇಕೆ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ''ದಲಿತ ಹೆಣ್ಣುಮಗಳು ಎಂಬ ಕಾರಣಕ್ಕೆ ಅಸಡ್ಡೆಯೇ? ಹಿಂದೂ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಶೋಭಾ ಕರಂದ್ಲಾಜೆ ಅವರ ಬಾಯಿಯನ್ನು ಈಗ ಅದುಮಿ ಹಿಡಿದವರು ಯಾರು?'' ಎಂದು ಕೇಂದ್ರ ಸಚಿವೆಯನ್ನು ತರಾಟಗೆ ತೆಗದುಕೊಂಡಿದೆ.

''ಉಡುಪಿಯಲ್ಲಿ ಇಲಿಯನ್ನು ಹುಲಿ ಮಾಡಲು ಹೊರಟಿರುವ ಬಿಜೆಪಿ ನಾಯಕರಿಗೆ ಅದೇ ಕರಾವಳಿಯ ವಿಟ್ಲದಲ್ಲಿಸಂಘ ಪರಿವಾರದವರಿಂದ ನಿರಂತರ ಅತ್ಯಾಚಾರಕ್ಕೆ ಒಳಪಟ್ಟ ದಲಿತ ಬಾಲಕಿಯ ಬಗ್ಗೆ ಮೌನವೇಕೆ?, ಆ ದಲಿತ ಬಾಲಕಿ ಹಿಂದೂ ಅಲ್ಲವೇ?, ಬಿಜೆಪಿಗೆ ನಂಟಿರುವವರು ನಡೆಸುವ ಅತ್ಯಾಚಾರ, ಅನಾಚಾರಗಳಿಗೆ ಬಿಜೆಪಿಯ ಸಮ್ಮತಿ ಇದೆಯೇ?'' ಎಂದು ಕಾಂಗ್ರೆಸ್ ಕಿಡಿಕಾರಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.