ರಾಜಕೀಯ

“ನೀವು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದವರು, ಮತ್ಯಾಕೆ ಬಂದ್ರೀ?”: ನಟಿ ಭಾವನಾ ತಬ್ಬಿಬ್ಬು!

ಕಾಂಗ್ರೆಸ್ ಪಕ್ಷದ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಿತ್ರನಟಿ ಭಾವನಾ ಅವರನ್ನು ಕಾಂಗ್ರಸ್ ನ ಹಿರಿಯ ಮುಖಂಡರ ಮುಂದೆಯೇ ಕೈ ಕಾರ್ಯಕರ್ತೆಯೊಬ್ಬರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆಯಿತು.

“ನೀವು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದವರು, ಮತ್ಯಾಕೆ ಬಂದ್ರೀ?”: ನಟಿ ಭಾವನಾ ತಬ್ಬಿಬ್ಬು!
ನಟಿ ಭಾವನಾ - ಕಾಂಗ್ರೆಸ್ ಕಾರ್ಯಕರ್ತೆ
Published On :

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಚಿತ್ರನಟಿ ಭಾವನಾ ಅವರನ್ನು ಕಾಂಗ್ರಸ್ ನ ಹಿರಿಯ ಮುಖಂಡರ ಮುಂದೆಯೇ ಕೈ ಕಾರ್ಯಕರ್ತೆಯೊಬ್ಬರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಸಲೀಂ ಅಹಮದ್ ಅವರು ಕುಳಿತಿದ್ದ ವೇದಿಕೆಯತ್ತ ತೆರಳಿದ ನಟಿ ಭಾವನಾ ಅವರನ್ನು ಮಹಿಳಾ ಕಾರ್ಯಕರ್ತೆಯೊಬ್ಬರು ತಡೆಹಿಡಿದು, ವೇದಿಕೆ ಬಿಟ್ಟು ಬದಿಗೆ ಬನ್ನಿ ಎಂದು ಅಡ್ಡಿಪಡಿಸಿದರು.

ನೀವು ಬಿಜೆಪಿಗೆ ಹೋಗಿದ್ದೀರಿ ಮತ್ಯಾಕೆ ಇಲ್ಲಿಗೆ ಬಂದಿದ್ದೀರೀ ಎಂದು ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆ ಪ್ರಶ್ನಿಸಿದರು. ಈ ವೇಳೆ ನಟಿ ಭಾವನಾ ತಬ್ಬಿಬ್ಬಾದರು. ತಾನು ಬಿಜೆಪಿಗೆ ಹೋಗಿದ್ದು ನಿಜ. ಆದ್ರೆ ಮತ್ತೆ ಕಾಂಗ್ರೆಸ್ ಗೆ ಮರಳಿದ್ದೇನೆ ಎಂದು ಭಾವನಾ ಹೇಳಿದರು. ಮತ್ತೆ ಈ ಬಗ್ಗೆ ಮಾಧ್ಯಮದಲ್ಲೂ ಸುದ್ದಿ ನೋಡೆ ಇಲ್ಲ ಎಂದು ಮಹಿಳಾ ಕಾರ್ಯಕರ್ತೆ ಪ್ರಶ್ನಿಸಿದರು. ಈ ವೇಳೆ ವೇದಿಕೆಯಲ್ಲೇ ಉಪಸ್ಥಿತರಿದ್ದ ನಾಯಕರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು. ನಂತರ ನಟಿ ಭಾವನಾ ಕಾರ್ಯಕರ್ತರು ಕುಳಿತಿದ್ದ ಬದಿಯಲ್ಲೆ ನಿಂತು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಬಳಿಕ ಭಾವನಾ ಮಾತನಾಡಿ, “ಈ ಹಿಂದೆ ನಾನು ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿದ್ದೆ. ಅದು ಆತುರದ ನಡೆ ಎಂದು ಅನಿಸಿತು. ಈ ಹಿನ್ನೆಲೆಯಲ್ಲಿ ಮತ್ತೆ ಕಾಂಗ್ರಸ್ ಪಕ್ಷಕ್ಕೆ ಮರಳಿರುವುದಾಗಿ” ಸ್ಪಷ್ಟಪಡಿಸಿದರು. ಬಿಜೆಪಿಗೆ ಹೋದ ನಂತರ ನಾನು ಮಾಡಿದ್ದ ತಪ್ಪು ಅರಿವಿಗೆ ಬಂತು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.