ಸಿದ್ದರಾಮಯ್ಯನವರು ಈ ಬಾರಿ ಚುನಾವಣೆಗೆ ನಿಲ್ಲದೆ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ಗಮನ ಹರಿಸಲಿ: ಸಂತೋಷ್ ಲಾಡ್
ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಣ, ಡಿ ಕೆ ಶಿವಕುಮಾರ್ ಬಣ ಎಂಬುದಿಲ್ಲ, ಮೇಲ್ನೋಟದಲ್ಲಿ ಈ ರೀತಿ ಮಾತನಾಡಬಹುದು, ಬೇಕಿದ್ದರೆ ಯಾರು ಬೇಕಾದರೂ ಬಂದು ಸಮೀಕ್ಷೆ ಮಾಡಲಿ, ಹಳ್ಳಿಗಳಲ್ಲಿ ಬೇಕಾದರೆ ಬಂದು ನೋಡಲಿ ಎಂದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಬಣ, ಡಿ ಕೆ ಶಿವಕುಮಾರ್ ಬಣ ಎಂಬುದಿಲ್ಲ, ಮೇಲ್ನೋಟದಲ್ಲಿ ಈ ರೀತಿ ಮಾತನಾಡಬಹುದು, ಬೇಕಿದ್ದರೆ ಯಾರು ಬೇಕಾದರೂ ಬಂದು ಸಮೀಕ್ಷೆ ಮಾಡಲಿ, ಹಳ್ಳಿಗಳಲ್ಲಿ ಬೇಕಾದರೆ ಬಂದು ನೋಡಲಿ ಎಂದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಎಲ್ಲಿ ನಿಂತರೂ ಗೆಲ್ಲುತ್ತಾರೆ, ಆದರೆ ಅವರು ಈ ಬಾರಿ ಚುನಾವಣೆಗೆ ನಿಲ್ಲದೆ ರಾಜ್ಯಾದ್ಯಂತ ಎಲ್ಲ ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಯಾರಾಗಬೇಕೆಂಬುದು ಅಂತಿಮವಾಗಿ ಹೈಕಮಾಂಡ್ ಗೆ ಬಿಟ್ಟ ವಿಚಾರ. ಸಿದ್ದರಾಮಯ್ಯನವರು ಚುನಾವಣೆಗೆ ನಿಂತುಕೊಳ್ಳದೆ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿದರೆ ಪಕ್ಷಕ್ಕೆ ಒಳ್ಳೆಯದಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಸಿದ್ದರಾಮಯ್ಯನವರನ್ನು ಮುಕ್ತವಾಗಿ ಬಿಡಬೇಕು. ಡಿ ಕೆ ಶಿವಕುಮಾರ್ ಅವರನ್ನು ಸಹ ಮುಕ್ತವಾಗಿ ಬಿಡಬೇಕು. ಉನ್ನತ ನಾಯಕರು ಒಂದೇ ಜಿಲ್ಲೆಗೆ ಸೀಮಿತವಾಗಬಾರದು ಇಡೀ ರಾಜ್ಯಕ್ಕೆ ಸಂಬಂಧಿಸಿದವರಾಗಿ ಪಕ್ಷದ ಇತರ ನಾಯಕರು, ಶಾಸಕರ ಬೆಂಬಲಕ್ಕೆ ನಿಂತು ಕೆಲಸ ಮಾಡಬೇಕೆಂಬುದು ನನ್ನ ಅಭಿಪ್ರಾಯ ಎಂದರು.
ಇದು ಪಕ್ಷದ ನಿಲುವು, ಅಭಿಪ್ರಾಯವಲ್ಲ, ಕೇವಲ ನನ್ನ ವೈಯಕ್ತಿಕ, ಇದರ ಹಿಂದೆ ಯಾವುದೇ ರಾಜಕೀಯ ಒತ್ತಡ, ದುರುದ್ದೇಶಗಳಿಲ್ಲ ಎಂದು ಸಂತೋಷ್ ಲಾಡ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


