ಸಿದ್ದರಾಮಯ್ಯಗೆ ಕಲ್ಲು ಸಕ್ಕರೆಯಲ್ಲ 'ಕೋಲಾರ': ಗಂಗಾಡ್ಕರ್-ಮರಸು ಒಕ್ಕಲಿಗ ಜಾತಿ ಲೆಕ್ಕಾಚಾರ; ಮುನಿಯಪ್ಪ ಮನ ಗೆಲ್ಲದಿದ್ದರೆ ಸಂಚಾಕಾರ?
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಸುಳಿವು ನೀಡುವ ಮುನ್ನ ಆ ಕ್ಷೇತ್ರದಲ್ಲಿ ಸರಿಯಾಗಿ ಸಂಶೋಧನೆ ನಡೆಸಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ.

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸುವ ಸುಳಿವು ನೀಡುವ ಮುನ್ನ ಆ ಕ್ಷೇತ್ರದಲ್ಲಿ ಸರಿಯಾಗಿ ಸಂಶೋಧನೆ ನಡೆಸಿದ್ದಾರೆಯೇ? ಎಂಬ ಪ್ರಶ್ನೆ ಮೂಡಿದೆ.
28,000-30,000 ಒಕ್ಕಲಿಗರು, 26,000 ಕುರುಬರು, 45,000 ಮುಸ್ಲಿಂ ಮತ್ತು ಎಸ್‌ಸಿಗಳು, 10,000 ಎಸ್‌ಟಿಗಳು ಹಾಗೂ 11,000 ಒಬಿಸಿಗಳಿಂದ ಮತಗಳು ಬರಲಿದೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
ಕಾಂಗ್ರೆಸ್ ನ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್, ಬಂಗಾರಪೇಟೆಯ ನಾರಾಯಣಸ್ವಾಮಿ, ಮಾಲೂರು ಶಾಸಕ ಕೆವೈ ನಂಜೇಗೌಡ ಸಿದ್ದರಾಮಯ್ಯ ಅವರನ್ನು ಇಲ್ಲಿಂದ ಕಣಕ್ಕಿಳಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಆದರೆ ಈ ಕ್ಷೇತ್ರಗಳಲ್ಲಿ ಶಾಸಕರ ವಿರೋಧಿ ಅಲೆ ಎದ್ದಿದೆ, ಹೀಗಾಗಿ ಸ್ವಲ್ಪ ಎಚ್ಚರ ತಪ್ಪಿದರೆ ಹಿರಿಯ ನಾಯಕರು ಸೋಲು ಎದುರಿಸುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಕೋಲಾರದಲ್ಲಿ ಅಪಾರ ಸಂಖ್ಯೆಯಿರುವ ಮರಸು ಒಕ್ಕಲಿಗರು ಗಂಗಾಡ್ಕರ್ ಗೌಡರಂತೆ ಜೆಡಿಎಸ್‌ಗೆ ಬೆಂಬಲ ನೀಡುವುದಿಲ್ಲ ಎಂದು ಸಿದ್ದರಾಮಯ್ಯ ಬೆಂಬಲಿಗರು ಹೇಳಿದ್ದಾರೆ. ಶರತ್ ಬಚ್ಚೇಗೌಡ, ಕೃಷ್ಣ ಬೈರೇಗೌಡ ಮತ್ತು ಶ್ರೀನಿವಾಸ್ ಗೌಡ ಅವರು ಕೋಲಾರದ ಒಕ್ಕಲಿಗ ಮತಗಳನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸಬಹುದು.
ಇದನ್ನೂ ಓದಿ: ಎರಡು ಸಲ ನನ್ನಿಂದ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ; ಕೋಲಾರದಲ್ಲಿ ಅವರಿಗೆ ಶ್ರೀನಿವಾಸ್ಗೌಡರೇ ಸಮಸ್ಯೆ; ಎಚ್ ಡಿಕೆ
ಆದರೆ ಹೇಳುವುದು ಸುಲಭ ಅದನ್ನು ಕಾರ್ಯಗತಗೊಳಿಸುವುದು ಕಷ್ಟ ಎನ್ನುತ್ತಾರೆ ಸ್ಥಳೀಯರು. ಎಂಎಲ್ಸಿಗಳಾದ ನಜೀರ್ ಅಹಮದ್ ಮತ್ತು ಗೋವಿಂದರಾಜ್ ಸಿದ್ದರಾಮಯ್ಯ ಅವರಿಗೆ ಸಹಾಯ ಮಾಡುತ್ತಾರೆ ಎಂದು ಅವರ ಬೆಂಬಲಿಗರು ಹೇಳಿದ್ದರೂ, ಅವರ ಪ್ರಾಬಲ್ಯ ಸೀಮಿತವಾಗಿದೆ ಎಂಬುದು ಸ್ಥಳೀಯರು ಅಭಿಪ್ರಾಯ.
ಗಂಗಾಡ್ಕರ್ ಒಕ್ಕಲಿಗರ ಪ್ರಾಬಲ್ಯವಿರುವ ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಸುಲಭವಾಗಿ ಗೆಲ್ಲಬಹುದು ಎಂದು ಕೆಲ ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಇದು ಅಸುರಕ್ಷಿತ ಜೂಜಾಟವಿದ್ದಂತೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಂದು ವೇಳೆ ಸಿದ್ದರಾಮಯ್ಯ ಕೋಲಾರದಿಂದ ಗೆಲ್ಲಬೇಕಾದರೇ ಕೆ.ಎಚ್ ಮುನಿಯಪ್ಪ ಅವರ ಮನಗೆಲ್ಲಬೇಕು, ಆದರೆ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮುನಿಯಪ್ಪ ಹಾಗೂ ಅವರ ಪುತ್ರಿ ರೂಪಕಲಾ ಶಶಿಧರ್ ಗೈರಾಗಿದ್ದರು.
ಸುಮಾರು 10,000 ಕ್ರಿಶ್ಚಿಯನ್ನರು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಾರೆ ಎಂಬುದು ಸಿದ್ದರಾಮಯ್ಯ ಬೆಂಬಲಿಗರ ವಾದ, ಆದರೆ ಸುಮಾರು 10,000 ಬ್ರಾಹ್ಮಣರು ಮತ್ತು ಲಿಂಗಾಯತರು ಬೆಂಬಲ ಸಿಗುವುದಿಲ್ಲ ಎಂಬುದು ಸತ್ಯ, ಕ್ಷೇತ್ರದಲ್ಲಿ 10,000 ಬಲಿಜರಿದ್ದು, ಸಿದ್ದರಾಮಯ್ಯ ಅವರನ್ನು ಬೆಂಬಲಿಸದಿರಬಹುದು ಎಂದು ಹೇಳಲಾಗಿದೆ, ಒಟ್ಟಾರೆ ಕ್ಷೇತ್ರ ಆಯ್ಕೆಯ ವೇಳೆ ಸಿದ್ದರಾಮಯ್ಯ ಎಚ್ಚರಿಕೆ ಹೆಜ್ಜೆ ಇಡಬೇಕಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


