ನನ್ನನ್ನು ಮಟ್ಟ ಹಾಕಲು ಹೋಗಿ ನಿಖಿಲ್ ಕುಮಾರಸ್ವಾಮಿಯನ್ನು ಬಲಿಪಶು ಮಾಡಿದ್ರು: ಎಲ್ ಆರ್ ಶಿವರಾಮೇಗೌಡ
ಜಿಲ್ಲೆಯ ಜೆಡಿಎಸ್ ನಾಯಕರು ನನ್ನ ಮಟ್ಟ ಹಾಕಲು ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಲ್ಲಿ ಬಲಿಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬಾಂಬ್ ಸಿಡಿಸಿದ್ದಾರೆ.

ಮಂಡ್ಯ: ಜಿಲ್ಲೆಯ ಜೆಡಿಎಸ್ ನಾಯಕರು ನನ್ನ ಮಟ್ಟ ಹಾಕಲು ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯದಲ್ಲಿ ಬಲಿಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬಾಂಬ್ ಸಿಡಿಸಿದ್ದಾರೆ.
ನಿಖಿಲ್ ಅವರನ್ನು ಮಂಡ್ಯಗೆ ತರುವ ಯೋಚನೆ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಇರಲಿಲ್ಲ. ನನ್ನನ್ನು ತೆಗೆಯಲು ಮಂಡ್ಯ ಜಿಲ್ಲೆಯ ಕೆಲ ಶಾಸಕರು ಏನೇನೋ ಕಥೆ ಕಟ್ಟಿದ್ದರು. 75 ಸಾವಿರ ಮತ ಹಾಕುವುದು ನನ್ನ ಜವಾಬ್ದಾರಿ, ನೀವು ನಿಖಿಲ್ ನಿಲ್ಲಿಸಿ ಎಂದು ಕುಮಾರಸ್ವಾಮಿ ಜೊತೆ ಮಾತುಕಥೆ ಮಾಡಿದ್ದರು.
ನನ್ನನ್ನು ಮಂಡ್ಯ ಜಿಲ್ಲೆಯಲ್ಲಿ ಸೈಡ್ ಲೈನ್ ಮಾಡಲು ಹೋಗಿ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರು ನಿಖಿಲ್ ಅವರನ್ನು ಬಲಿ ಕೊಟ್ಟಿದ್ದಾರೆ. ನಿಖಿಲ್‍ಗೆ ತುಂಬಾ ಅವಕಾಶವಿತ್ತು, ಅವರು ಒಳ್ಳೆಯ ಸಿನಿಮಾ ನಟ. ಅವರು ಚುನಾವಣೆಗೆ ನಿಲ್ಲಲು ರೆಡಿ ಇರಲಿಲ್ಲ, ಮಂಡ್ಯ ಜಿಲ್ಲೆಯ ಶಾಸಕರ ಒತ್ತಡದ ಮೇಲೆ ಕುಮಾರಸ್ವಾಮಿ ಅವರು ಚುನಾವಣೆಗೆ ನಿಲ್ಲಿಸಿದರು. ಇದರಿಂದ ಅವರಿಗೆ ಕೆಟ್ಟ ಹೆಸರು ಬಂದಿದೆ ಎಂದಿದ್ದಾರೆ.
ನಾಗಮಂಗಲದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ ನೀಡಲಾಗುತ್ತಿದೆ, ಕೋಟ್ಯಂತರ ರೂಪಾಯಿ ಅಭಿವೃದ್ಧಿ ಹೆಸರಲ್ಲಿ ಲೂಟಿ ಆಗುತ್ತಿದೆ. ಶಾಸಕರು, ಅಧಿಕಾರಿಗಳು ಇದರಲ್ಲಿ ಸಂಪೂರ್ಣವಾಗಿ ಶಾಮೀಲಾಗಿದ್ದಾರೆ. 20 ಲಕ್ಷ ಕೆಲಸ ಆಗಿಲ್ಲ, ಆದ್ರೆ ಒಂದು ಕೋಟಿ ಕಾಮಗಾರಿ ಬಿಲ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


