ರಾಜಕೀಯ

ಜೆಡಿಎಸ್ ಪಂಚರತ್ನ ಯಾತ್ರೆಗೆ ಮಳೆ ಅಡ್ಡಿ: ವಾರದಮಟ್ಟಿಗೆ‌ ಕಾರ್ಯಕ್ರಮ ಮುಂದೂಡಿದ ಎಚ್.ಡಿಕೆ

ಸತತ ಮಳೆ ಕಾರಣ ಪಂಚರತ್ನ ರಥಯಾತ್ರೆಯನ್ನು ವಾರದ‌ಮಟ್ಟಿಗೆ ಮುಂದೂಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಜೆಡಿಎಸ್ ಪಂಚರತ್ನ ಯಾತ್ರೆಗೆ ಮಳೆ ಅಡ್ಡಿ: ವಾರದಮಟ್ಟಿಗೆ‌ ಕಾರ್ಯಕ್ರಮ ಮುಂದೂಡಿದ ಎಚ್.ಡಿಕೆ
ಜೆಡಿಎಸ್ ಪಂಚರತ್ನ ಯಾತ್ರೆ
Published On :

ಮುಳಬಾಗಿಲು:  ಸತತ ಮಳೆ ಕಾರಣ ಪಂಚರತ್ನ ರಥಯಾತ್ರೆಯನ್ನು  ವಾರದ‌ಮಟ್ಟಿಗೆ ಮುಂದೂಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಗಳವಾರ  ಸುದ್ದಿಗಾರರೊಂದಿಗೆ ಮಾತನಾಡಿ, 'ದೇವರ ಪ್ರಸಾದವೂ ಆಗಿದೆ, ಚೆನ್ನಾಗಿ ಪೂಜೆಯೂ ನಡೆದಿದೆ. ಆದರೆ, ಮಳೆ ಕಾರಣ ಸಮಾವೇಶ ನಡೆಸಲು ಸಾಧ್ಯವಾಗುತ್ತಿಲ್ಲ. ಹವಾಮಾನ ಇಲಾಖೆ  ಮಾಹಿತಿ ಪ್ರಕಾರ  ಇನ್ನೂ ನಾಲ್ಕೈದು ದಿನ ಮಳೆ ಬರಲಿದೆ' ಎಂದರು.

ಕಾರ್ಯಕ್ರಮ ಅಸ್ತವ್ಯಸ್ತವಾಗಲಿದೆ ಎಂಬ ಮುಖಂಡರ ಸಲಹೆ ಮೇರೆಗೆ ರಥಯಾತ್ರೆ ಮುಂದೂಡಲಾಗಿದೆ. ಗ್ರಾಮ ವಾಸ್ತವ್ಯವೂ ನಡೆಯುವುದಿಲ್ಲ ಎಂದು ಹೇಳಿದರು. ಪಂಚರತ್ನ ನನ್ನ ಮಹತ್ವಾಕಾಂಕ್ಷೆಯ ಕಾರ್ಯಕ್ರಮ. ಮಳೆ ಬಂದಿರುವುದು ಪಂಚರತ್ನಕ್ಕೆ ಶುಭ ಸೂಚನೆ. ಮುಂದಿನ ದಿನಾಂಕವನ್ನು  ಮೂರು ದಿನಗಳಲ್ಲಿ ಚರ್ಚೆ ಮಾಡಿ ನಿಗದಿ ಮಾಡುತ್ತೇವೆ.

ಮುಳಬಾಗಿಲಿನಿಂದಲೇ ಮತ್ತೆ ರಥಯಾತ್ರೆಗೆ ಚಾಲನೆ ನೀಡುತ್ತೇವೆ ಎಂದರು. ಇನ್ನು ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಪಂಚರತ್ನ ಯೋಜನೆ ಜಾರಿಯಾಗಬೇಕೆಂದ್ರೆ ಜೆಡಿಎಸ್ ಪಕ್ಷಕ್ಕೆ ಬಹುಮತ ಅಗತ್ಯ ಎಂದು  ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.