'ಕಾಂಗ್ರೆಸ್ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದಿರಿ; ಮೂಲ ಕಾಂಗ್ರೆಸ್ಸಿಗರು ನಾಚುವ ರೀತಿಯಲ್ಲಿ ದಿಲ್ಲಿ ಸೇವೆ ಮಾಡಿದಿರಿ!'
ವ್ಯಕ್ತಿ ಗೆಲ್ಲುತ್ತಾನೆ ಎಂದಾಗ ಸೋಲಿಸಲು ತುಂಬಾ ಜನ ಪ್ರಯತ್ನಿಸುವುದು ಸಹಜ, 2013 ರಲ್ಲಿ ನೀವು ಮಾಡಿದ್ದು ಅದನ್ನೇ ಅಲ್ಲವೇ ಸಿದ್ದರಾಮಯ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

ಬೆಂಗಳೂರು: ವ್ಯಕ್ತಿ ಗೆಲ್ಲುತ್ತಾನೆ ಎಂದಾಗ ಸೋಲಿಸಲು ತುಂಬಾ ಜನ ಪ್ರಯತ್ನಿಸುವುದು ಸಹಜ, 2013 ರಲ್ಲಿ ನೀವು ಮಾಡಿದ್ದು ಅದನ್ನೇ ಅಲ್ಲವೇ ಸಿದ್ದರಾಮಯ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಚಾಮುಂಡೇಶ್ವರಿ ಸೋಲಿನ ಭೀತಿ ಇನ್ನೂ ಮಾಸಿಲ್ಲ, ಅದಕ್ಕಾಗಿ ಹೋದಲ್ಲೆಲ್ಲಾ ಜೈಕಾರ ಹಾಕಿಸಿಕೊಳ್ಳುತ್ತಿದ್ದೀರಿ. ಅಷ್ಟಕ್ಕೂ ನೀವು ಮುಂದೆ ಎಲ್ಲಿ ನಿಂತು ಗೆಲ್ಲುತ್ತೀರಿ?
ಬಿತ್ತಿದ್ದೇ ಬೆಳೆಯುತ್ತದೆ, ಬೇವು ಬಿತ್ತಿ ಮಾವು ಬಯಸಲು ಸಾಧ್ಯವೇ, ಅವಕಾಶವಾದಿಸಿದ್ದರಾಮಯ್ಯ ? ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿ ಹೊಟ್ಟೆಕಿಚ್ಚು ಬಿತ್ತಿದಿರಿ, ಖರ್ಗೆ, ಪರಮೇಶ್ವರ್, ಡಿಕೆಶಿ ಪ್ರತಿಸ್ಪರ್ಧಿ ಯಾಗುತ್ತಾರೆಂದು ಮೂಲೆಗುಂಪು ಮಾಡಿದಿರಿ. ಈಗ ಅದರ ಫಲ ಅನುಭವಿಸುತ್ತಿದ್ದೀರಿ, ಈ ಬಾರಿ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ.
ಸಿದ್ದರಾಮಯ್ಯ ಅವರೇ ನಿಮ್ಮ ಬಗ್ಗೆ ಹೊಟ್ಟೆಕಿಚ್ಚಿರುವುದು ನಿಜ, ಆದರೆ ಅದು ನಿಮ್ಮ ಪಕ್ಷದವರಿಗೆ ಮಾತ್ರ, ಯಾವ ಪಕ್ಷದ ಬಗ್ಗೆಯೂ ನಿಷ್ಠೆಯಿಲ್ಲದೇ, ವಲಸೆಯನ್ನೇ ರಾಜಕೀಯ ಧ್ಯೇಯವಾಗಿಸಿಕೊಂಡಿದ್ದಕ್ಕಾಗಿ ನಿಮ್ಮ ಬಗ್ಗೆ ಅಸಹನೆ ಇದೆ. ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚು, ಏಕೆ ಗೊತ್ತೇ? ಎಂದು ಪ್ರಶ್ನಿಸಿದೆ.
ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ಸಿಗೆ ವಲಸೆ ಬಂದು ಕೇವಲ ಹತ್ತು ವರ್ಷದಲ್ಲೇ ಮುಖ್ಯಮಂತ್ರಿಯಾಗಿದ್ದನ್ನು ಮೂಲ ಕಾಂಗ್ರೆಸ್ಸಿಗರು ತಡೆದುಕೊಳ್ಳಲು ಹೇಗೆ ಸಾಧ್ಯ? ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ಸಿಗರಿಗೆ ಹೊಟ್ಟೆಕಿಚ್ಚು, ಏಕೆ ಗೊತ್ತೇ? ಕಾಂಗ್ರೆಸ್ ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ್ದಕ್ಕಾಗಿ. ಮೂಲ ಕಾಂಗ್ರೆಸ್ಸಿಗರು ನಾಚುವ ರೀತಿಯಲ್ಲಿ ದಿಲ್ಲಿ ಸೇವೆ ಮಾಡಿದ್ದಕ್ಕಾಗಿ. ನಕಲಿ ಗಾಂಧಿ ಕುಟುಂಬದ ಗುಲಾಮರಾಗಿದ್ದಕ್ಕಾಗಿ ಅವಕಾಶವಾದಿ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದೆ.
ಸಿದ್ದರಾಮಯ್ಯನವರೇ, ನಿಮ್ಮ ಬಗ್ಗೆ ಸ್ವಪಕ್ಷೀಯರಲ್ಲಿರುವುದು ಹೊಟ್ಟೆಕಿಚ್ಚು ಮಾತ್ರವಲ್ಲ, ದ್ವೇಷವೂ ಇದೆ. ಈ ಕಾರಣಕ್ಕಾಗಿಯೇ ನೀವು ಈ ಬಾರಿ ಎಲ್ಲೇ ನಿಂತರೂ ಒಳ ಏಟಿನ ರುಚಿ ತೋರಿಸಲು ಸಿದ್ದರಾಗಿದ್ದಾರೆ. ಕ್ಷೇತ್ರ ಹುಡುಕುವಾಗ ಎಚ್ಚರದಿಂದಿರಿ. ಯೋಚಿಸಿ ವಲಸೆ ನಿರ್ಧರಿಸಿ ಎಂದು ಬಿಜೆಪಿ ಸಲಹೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


