ಇಬ್ಬರು ಧರ್ಮಪತ್ನಿಯರಿಗೆ ಒಬ್ಬನೇ ಗಂಡ, ಏನು ನಾಟಕನಪ್ಪ ನಿಮ್ಮದು?: ಸಿಎಂ ಇಬ್ರಾಹಿಂ
2023ಕ್ಕೆ ಕುಮಾರಸ್ವಾಮಿ ಸಿಎಂ ಆಗೋದಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಫೌಂಡೇಶನ್ ಹಾಕಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಬೆಂಗಳೂರು: 2023ಕ್ಕೆ ಕುಮಾರಸ್ವಾಮಿ ಸಿಎಂ ಆಗೋದಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿ ಫೌಂಡೇಶನ್ ಹಾಕಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇವತ್ತಿನ ಮುಹೂರ್ತ ಬರೆದಿಟ್ಟುಕೊಳ್ಳಿ.. ಬಿಜೆಪಿಯವರಿಗೆ ಜೆಡಿಎಸ್ ನಂಬರ್ 1 ಆಗಿ ಬರತ್ತೆ ಎನ್ನೋದು ಗೊತ್ತಾಗಿದೆ. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗೋದು ಗೊತ್ತಾಗಿದೆ. ನಮ್ಮವರು 10 ಜನ ಜೆಡಿಎಸ್ ಗೆ ಬರ್ತಾರೆ ಎಂದು ಬಿಜೆಪಿ, ಕಾಂಗ್ರೆಸ್ ನಾಯಕರಿಗೆ ಇಬ್ರಾಹಿಂ ತಿರುಗೇಟು ನೀಡಿದರು.
ರಮೇಶ್ ಕುಮಾರ್ ಭಾರೀ ಸಿದ್ದಾಂತ ಮಾತಾಡ್ತಾರೆ. ಇದೇ ಡಿ ಕೆ ಶಿವಕುಮಾರ್ ಕಾಂಗ್ರೆಸ್ ನ ಒಂದು ಓಟು ಬಿಜೆಪಿ ಒಂದು ಓಟು ಹಾಕ್ಸಿದ್ದು. ಇಬ್ಬರು ಧರ್ಮಪತ್ನಿಯರು ಒಂದೇ ಗಂಡ, ಏನು ನಾಟಕನಪ್ಪ ನಿಮ್ಮದು. ಕುಪೇಂದ್ರ ರೆಡ್ಡಿ ಓಟು ಕೇಳಕ್ಕೇ ಹೋದಾಗ ಸತೀಶ್ ರೆಡ್ಡಿ ಏನು ಹೇಳಿದ್ರಿ? ಸಿದ್ದರಾಮಯ್ಯಗೆ ಉಸಿರಿರಲಿಲ್ಲ. ಕೆಪಿಸಿಸಿ ಪ್ರೆಸಿಡೆಂಟ್ ಡಿ ಕೆ ಶಿವಕುಮಾರ್ ಬಿಜೆಪಿಗೆ ಓಟು ಹಾಕ್ಸಿದ್ದಾನೆ. ಸೋನಿಯಾ ರಾಹುಲ್, ಡಿ.ಕೆ ಶಿವಕುಮಾರ್ ರನ್ನು ಕಿತ್ತುಹಾಕಬೇಕು ಎಂದು ಹೇಳಿದರು.
ಸಿದ್ದರಾಮಯ್ಯರನ್ನು ವಿರೋಧ ಪಕ್ಷದಿಂದ ತೆಗೆದು ಹಾಕೋ ತಾಕತ್ತಿದೆಯಾ? ಸುರ್ಜೆವಾಲಾ ಎಲ್ಲಿ ಹೋದ್ಯಪ್ಪ ಡಬರಿವಾಲಾ? ಅವರವರ ಪಾಲು ಇಸ್ಕೊಂಡು ಊರು ಬಿಟ್ಟರು. ಅವನು ಬಂದ ಸೂಟ್ ಕೇಸ್, ಇವನು ಬಂದ ಸೂಟ್ ಕೇಸು. ಸೂಟ್ ಕೇಸ್ ಇಸ್ಕೊಳ್ಳೋದು ಬಹುತ್ ಅಚ್ಚಾ ಹೈ ಅಂತಾ ಹೇಳೋದು. ದೆಹಲಿಯಿಂದ ಬಂದವರೆಲ್ಲ ಹೀಗೆ ಸೂಟ್ ಕೇಸ್ ಎತ್ಕೊಂಡು ಹೋಗೋದು ಎಂದು ತಿಳಿಸಿದರು.
ಪಾಪ ಮನ್ಸೂರ್ ಖಾನ್ ಗೆ ಜಟ್ಕಾ ಮಾಡಿಬಿಟ್ರಲ್ಲ
ಕುಪೇಂದ್ರ ರೆಡ್ಡಿ ಗೂಟ ಭಾರೀ ಗಟ್ಟಿ, ನಿಮಗೆ ಬುದ್ದಿ ಕಲಿಸ್ತಾರೆ. ಪಾಪ ಮನ್ಸೂರ್ ಖಾನ್ ಗೆ ಜಟ್ಕಾ ಮಾಡಿಬಿಟ್ರಲ್ಲ. ಹಲಾಲ್ ಮಾಡಿದ್ದಾದರೂ ನಡಿತಿತ್ತು ಜಟ್ಕಾ ಮಾಡಿಬಿಟ್ಟರಲ್ಲಾ. ನನಗೂ ಕಾಂಗ್ರೆಸ್ ನವರು ಜಟ್ಕಾ ಮಾಡೋದಕ್ಕೆ ಹೊರಟಿದ್ದರು. ನಾನು ತಪ್ಪಿಸಿಕೊಂಡು ಬಂದು ಕುಮಾರಸ್ವಾಮಿ ಪಕ್ಕದಲ್ಲಿ ಗಂಡಸಾಗಿ ಕುಳಿತಿದ್ದೇನೆ. 12 ಜನರನ್ನು ಮುಂಬೈಗೆ ಕಳಿಸಿ ಮಂಚದ ಮೇಲೆ ಮಲಗಿಸಿ ವೀಡಿಯೋ ಮಾಡ್ಸಿ ಯಡಿಯೂರಪ್ಪನ್ನ ಸಿದ್ದರಾಮಯ್ಯ ಸಿಎಂ ಮಾಡಿದ್ರು ಎಂದರು.
ಸಿದ್ದರಾಮಯ್ಯ, ಬಿಎಸ್‌ವೈ ಜೊತೆಗೆ ಈಗ್ಲೂ ಡೀಲ್
ಏರ್‌ಪೋರ್ಟ್ ನಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪನ ಜೊತೆಗೆ ಈಗಲೂ ಡೀಲ್ ಮಾಡ್ಕೊಂಡಿದ್ದಾರೆ. ಸಿಟಿ ರವಿ ಅದಕ್ಕೆ ಕಾಂಗ್ರೆಸ್ ಆಫೀಸಿಗೆ ಹೋಗಿ ಅಭಿನಂದನೆ ಸಲ್ಲಿಸಿದ್ದಾರೆ. ಒಬ್ಬರ ಬಳಿ ತಾಳಿ ಕಟ್ಟಿಸಿಕೊಳ್ಳೋದು ಇನ್ನೊಬ್ಬರ ಹತ್ತಿರ ಬಾನ ಮಾಡ್ತೀರಲ್ಲ. ನಾಚಿಕೆಗೆಟ್ಟವರು, ಮಾನಗೆಟ್ಟವರು ಎಂದು ಇಬ್ರಾಹಿಂ ತೀವ್ರ ಟೀಕಾ ಪ್ರಹಾರ ನಡೆಸಿದರು. ಜೆಡಿಎಸ್ ಕಾರ್ಯಕರ್ತರಿಗೆ ನೋವಿದೆ, ಜನರಲ್ಲಿ ಆಕ್ರೋಶ ಇದೆ. ಇವರು ಬಿಬಿಎಂಪಿ ಚುನಾವಣೆ ಮಾಡಲ್ಲ ಗೊತ್ತಿದೆ. ಕುಮಾರಸ್ವಾಮಿ ಬಗ್ಗೆ ಗುಬ್ಬಿ ಶ್ರೀನಿವಾಸ್ ಮಾತಾಡ್ತಿದ್ದಾನೆ ಅಂತ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಾಯಿ ಮನ್ಯುಷ್ಯನಿಗೆ ಕಚ್ಚುತ್ತದೆ ಹೊರತು ಮನುಷ್ಯ ನಾಯಿಗೆ ಕಚ್ಚುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


