ರಾಜಕೀಯ

ಮುದ್ದಾಗಿ ಸಾಕಿದ ಗಿಣಿ, ಹದ್ದಾಗಿ ಕುಕ್ಕುತ್ತಿದೆ! ಚಂದಾ ಎತ್ತಿ 'ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ?

ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟಿದ್ದ ಸಿದ್ದರಾಮಯ್ಯ ಅವರಿಗೆ ಈಗ ಅದೇ ಬಾಣವಾಗಿದೆ. ಮತೀಯ ಭಾಗ್ಯಗಳೆಲ್ಲ, ಬಾಣವಾಗಿ ಸಿದ್ದರಾಮಯ್ಯ ಅವರನ್ನು ಕಾಡಲಿದೆ ಎಂದು ಬಿಜೆಪಿ ಟೀಕಿಸಿದೆ.

ಮುದ್ದಾಗಿ ಸಾಕಿದ ಗಿಣಿ, ಹದ್ದಾಗಿ ಕುಕ್ಕುತ್ತಿದೆ! ಚಂದಾ ಎತ್ತಿ 'ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ?
ಸಿದ್ದರಾಮಯ್ಯ ಅವರಿಗೆ ಹಣ ವಾಪಸ್ ನೀಡಿದ ಮಹಿಳೆ
Published On :

ಬೆಂಗಳೂರು: ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರನ್ನು ಎತ್ತಿ ಕಟ್ಟಿದ್ದ ಸಿದ್ದರಾಮಯ್ಯ ಅವರಿಗೆ ಈಗ ಅದೇ ಬಾಣವಾಗಿದೆ. ಮತೀಯ ಭಾಗ್ಯಗಳೆಲ್ಲ, ಬಾಣವಾಗಿ ಸಿದ್ದರಾಮಯ್ಯ ಅವರನ್ನು ಕಾಡಲಿದೆ ಎಂದು ಬಿಜೆಪಿ ಟೀಕಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ,  ಅಲ್ಪಸಂಖ್ಯಾತ ಮಹಿಳೆ ಆಮಿಷಕ್ಕೂ ಬಗ್ಗದೆ, ನ್ಯಾಯ ಕೇಳಿದ್ದು, ಆಕೆಯ ಒಬ್ಬಾಕೆಯ ದನಿ ಅಲ್ಲ, ಅದು ಅಲ್ಪಸಂಖ್ಯಾತರ ಧ್ವನಿ. ಕಾಂಗ್ರೆಸ್ ಓಲೈಕೆ ರಾಜಕಾರಣ ಎಂದು ಲೇವಡಿ ಮಾಡಿದೆ.

ಸಿದ್ದರಾಮಯ್ಯನವರು ನೀಡಿದ ದುಡ್ಡು ಬಿಸಾಕಿದ್ದು ಕೇವಲ ಒಬ್ಬ ಮುಸ್ಲಿಂ ಮಹಿಳೆ ಎಂದು ಭಾವಿಸಬೇಕಿಲ್ಲ. ಸುಳ್ಳು, ಕಪಟ, ದುರಂಹಕಾರ, ಅಧಿಕಾರ ಮದದ ಸಂಕೇತವಾಗಿರುವ ವ್ಯಕ್ತಿಯ ವಿರುದ್ಧ ಸಮಾಜವೇ ತಿರುಗಿ ಬೀಳುತ್ತಿರುವ ಪರಿಯಿದು. ಸಿದ್ದರಾಮಯ್ಯ ಅವರೇ,  ಅಲ್ಪಸಂಖ್ಯಾತರು ತಿರುಗಿ ಬೀಳುತ್ತಿದ್ದಾರೆ. ಎಚ್ಚರಿಕೆಯ ಕರೆಗಂಟೆಯಿದು. ಮುದ್ದಾಗಿ ಸಾಕಿದ ಗಿಣಿ, ಹದ್ದಾಗಿ ಕುಕ್ಕುತ್ತಿದೆ! ಎಂದು ಬಿಜೆಪಿ ಟ್ವೀಟ್ ಮಾಡಿದೆ.

ವಿರೋಧ ಪಕ್ಷದ ನಾಯಕರೇ, ನಾಳೆ ನಿಮ್ಮ ಪಟಾಲಂ ಮಾಡುವ ಸಿದ್ದರಾಮೋತ್ಸವ ನಂತರ ಇದೇ ಸ್ಥಿತಿ ಉದ್ಭವವಾಗುವ ಲಕ್ಷಣ ದಟ್ಟವಾಗಿದೆ. ಚಂದಾ ಎತ್ತಿ 'ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ? ಸಿದ್ದರಾಮೋತ್ಸವದ ಆರಂಭಿಕ ಲಕ್ಷಣವೇ ಹೀಗಾದರೇ, ಅಂತ್ಯ ಹೇಗಿರಬಹುದು ಎಂದು ಬಿಜೆಪಿ ಪ್ರಶ್ನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.