ರಾಜಕೀಯ

'ನೆಹರು ಕುಟುಂಬದ ಸಕಲ ಸದಸ್ಯರ ಹೆಸರಿಟ್ಟು ಬದುಕಲು ಇದು ಹಳೆಯ ಭಾರತ ಅಲ್ಲ, ವಿಶ್ವಗುರುವಾಗುತ್ತಿರುವ ಭಾರತ'

ನೆಹರು ಕುಟುಂಬದ ಸಕಲ ಸದಸ್ಯರ ಹೆಸರಿಟ್ಟು ಬದುಕಲು ಇದು ಹಳೆಯ ಭಾರತ ಅಲ್ಲ, ವಿಶ್ವಗುರುವಾಗುತ್ತಿರುವ ಭಾರತ ಎಂಬುದನ್ನು ಕಾಂಗ್ರೆಸ್ ಅರ್ಥೈಸಿಕೊಳ್ಳಬೇಕು ಎಂದು ಬಿಜೆಪಿ ಹೇಳಿದೆ.

'ನೆಹರು ಕುಟುಂಬದ ಸಕಲ ಸದಸ್ಯರ ಹೆಸರಿಟ್ಟು ಬದುಕಲು ಇದು ಹಳೆಯ ಭಾರತ ಅಲ್ಲ, ವಿಶ್ವಗುರುವಾಗುತ್ತಿರುವ ಭಾರತ'
ಜವಹರ್ ಲಾಲ್ ನೆಹರು (ಸಂಗ್ರಹ ಚಿತ್ರ)
Published On :

ಬೆಂಗಳೂರು: ನೆಹರು ಕುಟುಂಬದ ಸಕಲ ಸದಸ್ಯರ ಹೆಸರಿಟ್ಟು ಬದುಕಲು ಇದು ಹಳೆಯ ಭಾರತ ಅಲ್ಲ, ವಿಶ್ವಗುರುವಾಗುತ್ತಿರುವ ಭಾರತ ಎಂಬುದನ್ನು ಕಾಂಗ್ರೆಸ್ ಅರ್ಥೈಸಿಕೊಳ್ಳಬೇಕು ಎಂದು ಬಿಜೆಪಿ ಹೇಳಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದವರನ್ನು, ಬದುಕು ಸವೆಸಿದವರನ್ನು ಸ್ಮರಿಸುವ ಕಾಲದ ಭಾರತ. ಸೋಲನ್ನೊಪ್ಪಿಕೊಳ್ಳುವ ಭಾರತವಲ್ಲ, ಗೆಲುವಿನ ಹೊಸ್ತಿಲಲ್ಲಿರುವ ಭಾರತ ಎಂದು ಹೇಳಿದೆ.

ಕಾಲಾಪಾನಿಯಂತಹ ಕಠೋರ ಶಿಕ್ಷೆಯಿಂದ ಸಾವರ್ಕರ್ ಬಿಡುಗಡೆಗೊಂಡ ಪೂರ್ವರಂಗದ ಬಗ್ಗೆ ಇಡೀ ದೇಶಕ್ಕೆ ಸ್ಪಷ್ಟತೆಯಿದೆ. ಅದರ ಬಗ್ಗೆ ಐವತ್ತಕ್ಕೂ ಹೆಚ್ಚಿನ ಸಂಶೋಧನಾತ್ಮಕ ಪುಸ್ತಕಗಳು, ನಿಖರ ದಾಖಲೆಗಳ ಸಮೇತ ಪ್ರಕಟವಾಗಿವೆ. ಆದರೆ ಕಾಂಗ್ರೆಸ್ ಮತಬ್ಯಾಂಕಿನ ಬೇಟೆಗಾಗಿ ತಮ್ಮ ಹಳೆ ವಿತಂಡವಾದಗಳ ಸುಳಿಗಳೊಳಗೆ ಸುತ್ತಾಡುತ್ತಿದೆ ಎಂದು ಟ್ವೀಟ್ ಮಾಡಿದೆ.

ಇನ್ನೊಂದು ಟ್ವೀಟ್‌ನಲ್ಲಿ, ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರು ನಿಮ್ಮ ಪಕ್ಷದ ವಿನಯ್ ಕುಲಕರ್ಣಿಯೇ ವಿನಾ ವೀರ ಸಾವರ್ಕರ್ ಅಲ್ಲ ಈ ರಾಜಕಾರಣದ ದುರಂತ ಏನೆಂದರೆ, ಕೊತ್ವಾಲನ ತಟ್ಟೆ ಕಾಸಲ್ಲಿ ಜೀವನ ಸಾಗಿಸುತ್ತಿದ್ದವರೆಲ್ಲ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಸಾವರ್ಕರ್ ಬಗ್ಗೆ ಮಾತಾಡುತ್ತಿದ್ದಾರೆ ಎಂದು ಲೇವಡಿ ಮಾಡಿದೆ.

ಜೈಲಿಗೆ ಹೋದವರು ಯಾರು? ಯಾಕೆ ಹೋದರು? ಯಾವ ಆಧಾರದಲ್ಲಿ ಹೊರಬಂದರು ಎನ್ನುವುದನ್ನು ಖುದ್ದು ಅನುಭವವಿದ್ದ ಹಾಗೆ ಮಾತಾಡುವ ಬಿ.ಕೆ.ಹರಿಪ್ರಸಾದ್‌ ಅವರೇ ನಿಮ್ಮ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವ ಕಾರಣಕ್ಕಾಗಿ ತಿಹಾರ್ ಜೈಲಿಗೆ ಹೋದರು ಎಂಬುದನ್ನೂ ಹೇಳಿ. ಹಾಗೆ ಜೈಲಿಗೆ ಹೋಗಿಬಂದ ಇತರ ಕಾಂಗ್ರೆಸಿಗರ ಬಗ್ಗೆಯೂ ತಿಳಿಸಿ ಎಂದು ಪ್ರಶ್ನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.