ರಾಜಕೀಯ

'ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿ, ಕಾರ್ಕಳದಲ್ಲಿ ಅವಕಾಶ ಕೊಟ್ಟು ನೋಡಿ, ಹಿಂದುತ್ವ ಎಂದರೇನೆಂದು ಸಾಬೀತು ಮಾಡಿ ತೋರಿಸುತ್ತೇನೆ'

ನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ ಅವಕಾಶ ಕೊಟ್ಟು ನೋಡಿ, ಹಿಂದುತ್ವ ಎಂದರೇನೆಂದು ಸಾಬೀತು ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

'ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿ, ಕಾರ್ಕಳದಲ್ಲಿ ಅವಕಾಶ ಕೊಟ್ಟು ನೋಡಿ, ಹಿಂದುತ್ವ ಎಂದರೇನೆಂದು ಸಾಬೀತು ಮಾಡಿ ತೋರಿಸುತ್ತೇನೆ'
ಸುನೀಲ್ ಕುಮಾರ್ ಮತ್ತು ಪ್ರಮೋದ್ ಮುತಾಲಿಕ್
Published On :

ಉಡುಪಿ: ನನಗೊಮ್ಮೆ ಕಾರ್ಕಳದಲ್ಲಿ ಶಾಸಕನಾಗುವ ಅವಕಾಶ ಕೊಟ್ಟು ನೋಡಿ, ಹಿಂದುತ್ವ ಎಂದರೇನೆಂದು ಸಾಬೀತು ಮಾಡಿ ತೋರಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಮಂಗಳವಾರ ಕಾರ್ಕಳದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಮೋದ್‌ ಮುತಾಲಿಕ್‌ ಅವರು, ನಾನು ಕಾರ್ಕಳದಿಂದ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಹೇಳಿದಾಗಿನಿಂದ ನನ್ನ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಹಿಂದುತ್ವಕ್ಕಾಗಿ ನಾನು ಸಾಕಷ್ಟು ಆರೋಪಗಳನ್ನು ಎದುರಿಸಿದ್ದೇನೆ, ಸಂಕಷ್ಟ ಅನುಭವಿಸಿದ್ದೇನೆ. ಮುಖಕ್ಕೆ ಮಸಿ ಬಳಿಸಿಕೊಂಡಿದ್ದೇನೆ, ಅದಕ್ಕೆಲ್ಲ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ. ಸಂಘವು ನನಗೆ ರಾಷ್ಟ್ರಪ್ರೇಮ, ಹಿಂದುತ್ವದ ರಕ್ಷಣೆಯ ಪಾಠವನ್ನು ಕಲಿಸಿದೆ  ಎಂದು ಹೇಳಿದರು.

ʻಹಿಂದುಗಳ ನೋವಿಗೆ ಧ್ವನಿಯಾಗಲು ಕಾರ್ಕಳಕ್ಕೆ ಬಂದಿದ್ದೇನೆ. ನನಗೆ ಹಣ, ಆಸ್ತಿ ಮಾಡುವ ಉದ್ದೇಶವಿಲ್ಲ, ಆದ್ದರಿಂದ‌ ಬಾರಿ ಗುರುವಿಗಾಗಿ ಕ್ಷೇತ್ರ ತ್ಯಾಗ ಮಾಡಿʼʼ ಎಂದು ಪ್ರಮೋದ್‌ ಮುತಾಲಿಕ್‌ ಅವರು ಸಚಿವ ಸುನಿಲ್‌ ಕುಮಾರ್‌ಗೆ ಮನವಿ ಮಾಡಿದರು.

ತಮ್ಮ ಟೀಮ್‌ಗೆ ಟಿಕೆಟ್‌ ಕೊಟ್ಟರೂ ಕೊಡದಿದ್ದರೂ ಸ್ಪರ್ಧೆಗೆ ಇಳಿಯೋದು ಗ್ಯಾರಂಟಿ ಎಂದು ಹಠ ತೊಟ್ಟಿರುವ ಪ್ರಮೋದ್‌ ಮುತಾಲಿಕ್‌ ಅವರು ಇಂಧನ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್‌ ಕುಮಾರ್‌ ಅವರ ಮುಂದೆ ಒಂದು ಬೇಡಿಕೆ ಇಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.