ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಕಾರ ನಾಯಕತ್ವ ಅಂದರೆ ಗೂಂಡಾಗಿರಿ ಮಾಡುವುದು: ಸಿ.ಟಿ. ರವಿ
ಬಿಜೆಪಿಗೆ ಜೆಡಿಎಸ್ ಬೆಂಬಲ ಬಗ್ಗೆ ಯಡಿಯೂರಪ್ಪ ಮಾತಾಡಿದ್ದಾರೆ. ಜೆಡಿಎಸ್ ಬೆಂಬಲ ಬಗ್ಗೆ ನಾನು ಮಾತಾಡಲ್ಲ. ರಾಜಕೀಯದಲ್ಲಿ ಶತ್ರುಗಳು ಅಂತ ಇರಲ್ಲ.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಕಾರ ನಾಯಕತ್ವ ಅಂದರೆ ಗೂಂಡಾಗಿರಿ ಮಾಡೋದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ತಮ್ಮ ಸರ್ಕಾರಿ ನಿವಾಸ ಸೆವೆನ್ ಮಿನಿಸ್ಟರ್ಸ್ ಕ್ವಾಟರ್ಸ್ ನಲ್ಲಿ ಪಕ್ಷದ ಎಸ್ಸಿ ಮೋರ್ಚಾ ಪದಾಧಿಕಾರಿಗಳ ಜೊತೆ ಸಂವಾದ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ದುಡ್ಡು ಮಾಡಿರೋರೇ ನಿಲ್ಬೇಕು ಅನ್ನೋದು ಅವರ ಮನಸ್ಥಿತಿ. ನಮ್ಮದು ಕೇಡರ್ ಆಧಾರಿತ ಪಕ್ಷ ಎಂದು ಹೇಳಿದರು.
ಬಿಜೆಪಿ ಸೇರದೇ ಇದ್ದುದಕ್ಕೆ ಜೈಲು ಸೇರುವಂತಾಯಿತು ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ ಸಿ.ಟಿ ರವಿ, ಡಿಕೆಶಿ ಕಾಂಗ್ರೆಸ್ ನಲ್ಲಿ ಅಕ್ರಮ ಆಸ್ತಿ ಮಾಡಿಕೊಂಡಿದ್ರು ಅಂತ ಒಪ್ಕೊಂಡ ಹಾಗಾಯ್ತು. ಅವರು ಜೈಲಿಗೆ ಹೋಗಿದ್ದು ಬಿಜೆಪಿಗೆ ಹೋಗ್ಲಿಲ್ಲ ಅಂತ ಅಲ್ಲ. ಬಿಜೆಪಿಗೆ ಹೋಗ್ಲಿಲ್ಲ ಅಂತ ಎಫ್ಐಆರ್, ಚಾರ್ಜ್ ಶೀಟ್ ಹಾಕ್ಲಿಲ್ಲ. ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಚಾರ್ಜ್ ಶೀಟ್, ಎಫ್ಐಆರ್ ಹಾಕಲಾಗಿದೆ ಎಂದು ಹೇಳಿದರು.
ಪರಿಷತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತೆ. ಬಿಜೆಪಿಗೆ ಕಾಂಗ್ರೆಸ್ ಏಳು ದಶಕಗಳಿಂದಲೂ ವಿರೋಧ ಪಕ್ಷ. ಮೊದಲ ಆದ್ಯತೆ ಬಿಜೆಪಿ ಗೆಲ್ಸೋದು, ಎರಡನೇ ಆದ್ಯತೆ ಕಾಂಗ್ರೆಸ್ ನ ಸೋಲಿಸೋದು. ಬಿಜೆಪಿಗೆ ಜೆಡಿಎಸ್ ಬೆಂಬಲ ಬಗ್ಗೆ ಯಡಿಯೂರಪ್ಪ ಮಾತಾಡಿದ್ದಾರೆ. ಜೆಡಿಎಸ್ ಬೆಂಬಲ ಬಗ್ಗೆ ನಾನು ಮಾತಾಡಲ್ಲ. ರಾಜಕೀಯದಲ್ಲಿ ಶತ್ರುಗಳು ಅಂತ ಇರಲ್ಲ. ರಾಜಕೀಯ ವಿರೋಧಿಗಳು ಇದ್ದಾರೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


