ಚಿರತೆ ಹಿಡಿಯವುದರಲ್ಲಿ ಸಚಿವ ಗೋವಿಂದ ಕಾರಜೋಳ ಎಕ್ಸ್ ಪರ್ಟ್!
ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಚಿರತೆ ಹಿಡಿಯಲು ಪರಿಣಿತರ ತಂಡ ಬೇಕಿಲ್ಲ. ಕಾರಜೋಳ ಅವರೇ ಹಿಡಿಯಬಹುದು ಎಂದರು. ಆಗ ಸದನ ಕೆಲ ಕಾಲ ನೆಗೆಗಡಲಲ್ಲಿ ತೇಲಾಡಿತು.

ಬೆಂಗಳೂರು: ಚಿರತೆ ಹಿಡಿಯುವ ವಿಷಯ ವಿಧಾನಸಭೆಯಲ್ಲಿಂದು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಶೂನ್ಯವೇಳೆಯಲ್ಲಿ ಸದಸ್ಯರಾದ ಅಬ್ಬಯ್ಯ ಪ್ರಸಾದ್ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳಿ ಸಮೀಪದ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡು ಆ ಭಾಗದಲ್ಲಿ ಜನ ಭಯಭೀತರಾಗಿದ್ದಾರೆ.
ಶಾಲೆಗಳನ್ನು ಬಂದ್ ಮಾಡಲಾಗಿದೆ. ಚಿರತೆ ಭಯದಿಂದ ಕೂಲಿ-ಕಾರ್ಮಿಕರು ಕೆಲಸಕ್ಕೆ ಹೋಗುತ್ತಿಲ್ಲ. ಮನೆಯಲ್ಲೇ ಕೂರುವಂತಾಗಿದೆ. ಚಿರತೆ ಬೆಟ್ಟದ ಸುತ್ತಮುತ್ತ ಓಡಾಡುತ್ತಿರುವ ದೃಶ್ಯಗಳು ಪತ್ತೆಯಾಗಿವೆ. ಅದನ್ನು ಹಿಡಿಯಲು ಸಮಸ್ಯೆಯಾದರೂ ಏನು? ಪರಿಣಿತರ ಕೊರತೆ ಇದೆಯೇ? ಎಂದು ಪ್ರಶ್ನೆ ಮಾಡಿದರು.
ಸಚಿವ ಕಾರಜೋಳ ಉತ್ತರಿಸಿ ಕೂಡಲೇ ಪರಿಣಿತರ ತಂಡ ಕಳುಹಿಸಿ ಚಿರತೆ ಹಿಡಿದು ಸಮಸ್ಯೆ ಪರಿಹಾರಿಸಲಾಗುವುದು ಎಂದರು. ಆಗ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಚಿರತೆ ಹಿಡಿಯಲು ಪರಿಣಿತರ ತಂಡ ಬೇಕಿಲ್ಲ. ಕಾರಜೋಳ ಅವರೇ ಹಿಡಿಯಬಹುದು ಎಂದರು. ಆಗ ಸದನ ಕೆಲ ಕಾಲ ನೆಗೆಗಡಲಲ್ಲಿ ತೇಲಾಡಿತು.
ಉತ್ತರ ಮುಂದುವರಿಸಿದ ಕಾರಜೋಳ, ಚಿರತೆ ಹಿಡಿಯಲು ಪರಿಣಿತರ ಅವಶ್ಯಕತೆ ಇದೆ ಎಂದರು. ಇದಕ್ಕೂ ಮುನ್ನ ಶಾಸಕ ರೇಣುಕಾಚಾರ್ಯ, ತಮ್ಮ ಕ್ಷೇತ್ರದಲ್ಲೂ ಚಿರತೆ ಹಾವಳಿಯಿಂದ ಜನ ಭಯ ಭೀತರಾಗಿದ್ದಾರೆ ಎಂದು ಸರ್ಕಾರದ ಗಮನ ಸೆಳೆದರು.
ಆಗ ಮಾಜಿ ಸ್ಪೀಕರ್ ರಮೇಶ್ ಕುಮಾರ್, ರೇಣುಕಾಚಾರ್ಯ ಕ್ಷೇತ್ರದಲ್ಲಿ ಚಿರತೆ ಹಾವಳಿ ಇದೆ ಎಂದರೆ ನಾನು ಒಪ್ಪುವುದಿಲ್ಲ. ಭಹುಶಃ ಅವರು ಸುಳ್ಳು ಹೇಳುತ್ತಿರಬಹುದು. ಏಕೆಂದರೆ ಅವರಿರುವ ಜಾಗದಲ್ಲಿ ಚಿರತೆ ಬರಲು ಸಾಧ್ಯವೇ ಇಲ್ಲ ಎಂದಾಗ ಸದನ ನಗೆಗಡಲಲ್ಲಿ ತೇಲಾಡಿತು. ಒಟ್ಟಾರೆ ವಿಧಾನಸಭೆಯ ಬೆಳಗಿನ ಕಲಾಪದಲ್ಲಿ ಚಿರತೆ ಚರ್ಚೆ ಸ್ವಾರಸ್ಯಕರವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


