ಜಿಟಿಟಿಸಿ ಟೆಂಡರ್‌ನಲ್ಲಿ ಅಕ್ರಮ: ಕಾಂಗ್ರೆಸ್ ನಾಯಕ ಉಗ್ರಪ್ಪ ಆರೋಪ
ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದ (ಜಿಟಿಟಿಸಿ) ಟೆಂಡರ್‌ನಲ್ಲಿ ಅಕ್ರಮ ನಡೆದಿದ್ದು, ಸುಮಾರು ರೂ.34 ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ’ ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಅವರು ಭಾನುವಾರ ಆರೋಪಿಸಿದ್ದಾರೆ.

ಬೆಂಗಳೂರು: ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರದ (ಜಿಟಿಟಿಸಿ) ಟೆಂಡರ್‌ನಲ್ಲಿ ಅಕ್ರಮ ನಡೆದಿದ್ದು, ಸುಮಾರು ರೂ.34 ಕೋಟಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ಅವರು ಭಾನುವಾರ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣ ಸಚಿವಾಲಯ ವ್ಯಾಪ್ತಿಯಲ್ಲಿ ಬರುವ ಜಿಟಿಟಿಸಿಯಲ್ಲಿ ಉಪಕರಣಗಳ ಖರೀದಿ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಅವರ ಅನುಮತಿ ಮೇರೆಗೆ ನಡೆದಿದೆ. ಈ ವಿಚಾರವಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿರುವ ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ, ಆಡಳಿತ ವ್ಯವಸ್ಥಾಪಕ ಮತ್ತು ಖರೀದಿ ಅಧಿಕಾರಿ, ಸಚಿವರ ಗಮನದಲ್ಲೇ ರೂ.61.52 ಕೋಟಿ ಮೊತ್ತದ ಎಂಟು ಟೆಂಡರ್ ಕರೆದಿದ್ದಾರೆ. ಖರೀದಿಗೆ ಕಾರ್ಯಾದೇಶ ನೀಡಿದ ಉಪಕರಣಗಳ ಮಾರುಕಟ್ಟೆ ಮೊತ್ತ ರೂ.27.15 ಕೋಟಿ ಮಾತ್ರ. ಈ ಟೆಂಡರ್‌ಗಳಲ್ಲಿ ಬಹುತೇಕ ಬಿಡ್‌ಗಳನ್ನು ಅಕ್ವಾ ಟೆಕ್ವಿಪ್ಮೆಂಟ್ಸ್‌ಗೆ ನೀಡಲಾಗಿದೆ. ಬಿಡ್ ನಂ. 7 ಅನ್ನು ರವಿತೇಜ ಎಲೆಕ್ಟೋಸಿಸ್ಟಮ್ಸ್‌ಗೆ ನೀಡಲಾಗಿದ್ದು, ಇದು ಅಕ್ವಾ ಟೆಕ್ವಿಪ್ಮೆಂಟ್ಟ್‌ನ ಸ್ನೇಹಿತರಾಗಿದ್ದಾರೆ. ಮೊದಲ ಬಿಡ್ ಅನ್ನು ಲಾರೆನ್ಸ್ ಅಂಡ್ ಮೇಯೋ ಅವರಿಗೆ ನೀಡಿದ್ದಾರೆ. ಈ ಟೆಂಡರ್‌ನಲ್ಲಿ ಭಾಗಿಯಾಗಿರುವವರು ಉತ್ಪನ್ನ ತಯಾರಕರಲ್ಲ, ಸರಬರಾಜು ಏಜೆನ್ಸಿಗಳೂ ಅಲ್ಲ’ ಎಂದು ತಿಳಿಸಿದ್ದಾರೆ.
‘ಪಾರದರ್ಶಕ ಟೆಂಡರ್ ಕಾಯ್ದೆ ಪ್ರಕಾರ ರೂ.1 ಕೋಟಿಗೂ ಹೆಚ್ಚು ಮೊತ್ತದ ಟೆಂಡರ್‌ಗೆ ಪೂರ್ವಭಾವಿ ಸಭೆ ಕರೆಯಬೇಕು. ಯಾವುದೇ ಪೂರ್ವಭಾವಿ ಸಭೆ ನಡೆಸಿಲ್ಲ. 2019ರಲ್ಲಿ ತಲಾ ರೂ. 28.98 ಲಕ್ಷಕ್ಕೆ 5 ಸಿಎಂಸಿ ಯಂತ್ರಗಳನ್ನು ಖರೀದಿಸಿದ್ದರೆ, ಅದೇ ಯಂತ್ರಗಳನ್ನು 2021ರಲ್ಲಿ ತಲಾ ರೂ.31.27 ಲಕ್ಷ ನೀಡಿ 6 ಖರೀದಿಸಲಾಗಿದೆ. ಮಾರ್ಚ್‌ನಲ್ಲಿ ರೂ.99.12 ಲಕ್ಷದಂತೆ 4 ಯಂತ್ರ ಖರೀದಿಸಲಾಗಿದೆ. ಹೀಗೆ ಒಂದು ಯಂತ್ರವನ್ನು 3 ಪಟ್ಟು ಬೆಲೆಯಲ್ಲಿ ಖರೀದಿಸಲಾಗಿದೆ’ ಎಂದು ಆರೋಪಿಸಿದರು.
‘ಪಾರದರ್ಶಕ ಕಾಯ್ದೆ ಪ್ರಕಾರ ಒಂದು ಅಥವಾ ಎರಡು ಕಂಪನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದರೆ, ಅದನ್ನು ರದ್ದುಗೊಳಿಸಿ ಮರು ಟೆಂಡರ್ ಕರೆಯಬೇಕು. 8 ಟೆಂಡರ್‌ಗಳಲ್ಲಿ 2 ಕಂಪನಿಗಳು ಭಾಗವಹಿಸಿದ್ದರೂ ಮರು ಟೆಂಡರ್ ಕರೆಯಲಿಲ್ಲ‘ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


