ಅಂದಿನ ಬಜರಂಗದಳ ಕಾರ್ಯಕರ್ತ ಕೋಟಿ ರವಿ ಆಗಿದ್ದು ಹೇಗೆ? ಹಿಂದುತ್ವ ಜಪದಿಂದ ಇಷ್ಟೊಂದು ಆಸ್ತಿ ಸಂಪಾದಿಸಬಹುದೇ?
ಕರ್ನಾಟಕ ಕಾಂಗ್ರೆಸ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ಧ ಹರಿಹಾಯ್ದಿದೆ, ನಿಮ್ಮ ಸಂಬಂಧಿಯನ್ನು ಮುಂದಿಟ್ಟುಕೊಂಡು ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆಗಳನ್ನು ಪಡೆದಿರುವ ನೀವು ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದೀರ? ಎಂದು ಪ್ರಶ್ನಿಸಿದೆ.

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿರುದ್ಧ ಹರಿಹಾಯ್ದಿದೆ, ನಿಮ್ಮ ಸಂಬಂಧಿಯನ್ನು ಮುಂದಿಟ್ಟುಕೊಂಡು ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆಗಳನ್ನು ಪಡೆದಿರುವ ನೀವು ಎಷ್ಟೆಷ್ಟು ಕಮಿಷನ್ ಕೊಟ್ಟಿದ್ದೀರ? ಎಂದು ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಾರಿಗೆ ಬಸ್ಸಿನಲ್ಲಿ ಓಡಾಡುತ್ತಿದ್ದ ಅಂದಿನ ಬಜರಂಗದಳ ಕಾರ್ಯಕರ್ತ, ಇಂದಿನ ಫುಲ್ ಟೈಂ ರಾಜಕಾರಣಿ ಸಿಟಿ ರವಿ ಕೋಟಿರವಿ ಆಗಿದ್ದು ಹೇಗೆ? ಎಲ್ಲಿ, ಯಾರಿಂದ, ಎಷ್ಟೆಷ್ಟು ಕಲೆಕ್ಷನ್ ಮಾಡಿದಿರಿ? ಲೂಟಿರವಿ ಎಂದು ಪ್ರಶ್ನಿಸಿದೆ.
2004-2010ರ ಮಧ್ಯೆ ನಿಮ್ಮ ಆಸ್ತಿ 49 ಲಕ್ಷದಿಂದ 3.18 ಕೋಟಿ ರು ಏರಿಕೆಯಾಗಿದೆ ಎಂಬ ದೂರು ದಾಖಲಾಗಿತ್ತು. 2018 ರಲ್ಲಿ ನೀವೇ ಘೋಷಿಸಿದ ಅಧಿಕೃತ ಆಸ್ತಿ 5 ಕೋಟಿಗೂ ಅಧಿಕ, ನಿಮ್ಮ ಕುಟುಂಬದ್ದು ಇನ್ನೂ ಅಧಿಕ, ಬೇನಾಮಿ ಅತ್ಯಧಿಕವಾಗಿದೆ ಹಿಂದುತ್ವ ಜಪದಿಂದ ಈ ಪ್ರಮಾಣದ ಆಸ್ತಿ ಸಂಪಾದಿಸಬಹುದೇ ಲೂಟಿರವಿ ಅವರೇ? ಎಂದು ಕಾಂಗ್ರೆಸ್ ಲೇವಡಿ ಮಾಡಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


