JDS ಸೇರಿದ ಒಂದೇ ದಿನದಲ್ಲಿ ಸಿದ್ದರಾಮಯ್ಯ ಆಪ್ತ ಮಂಜೇಗೌಡಗೆ ಪರಿಷತ್ ಟಿಕೆಟ್; ಹಾಲಿ ಸದಸ್ಯ ಸಂದೇಶ್ ನಾಗರಾಜ್ ಗೆ ಮುಖಭಂಗ
ರಾಜ್ಯದಲ್ಲಿ ಈಗ ವಿಧಾನಪರಿಷತ್ ಚುನಾವಣೆಯ ಭರಾಟೆ. ಪಕ್ಷಗಳು ಟಿಕೆಟ್ ಅಂತಿಮಗೊಳಿಸುತ್ತಿದ್ದು, ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ.

ಮೈಸೂರು: ರಾಜ್ಯದಲ್ಲಿ ಈಗ ವಿಧಾನಪರಿಷತ್ ಚುನಾವಣೆಯ ಭರಾಟೆ. ಪಕ್ಷಗಳು ಟಿಕೆಟ್ ಅಂತಿಮಗೊಳಿಸುತ್ತಿದ್ದು, ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ.
ಈ ಮಧ್ಯೆ ಮೈಸೂರಿನ ಜೆಡಿಎಸ್ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಗೆ ಎರಡನೇ ಬಾರಿ ಸ್ಪರ್ಧಿಸುವುದಕ್ಕೆ ಟಿಕೆಟ್ ಕೈತಪ್ಪಿದ್ದು ಭಾರಿ ನಿರಾಸೆಯಾಗಿದೆ. ನ.22 ರಂದು ಜೆಡಿಎಸ್ ಸೇರಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಮಂಜೇಗೌಡ ಅವರಿಗೆ ಜೆಡಿಎಸ್ ನ ಟಿಕೆಟ್ ನೀಡಲಾಗಿದೆ.
ಇದಕ್ಕೂ ಮುನ್ನ ಸಂದೇಶ್ ನಾಗರಾಜ್ ಬಿಜೆಪಿ ಸೇರಲು ಯತ್ನಿಸಿ ವಿಫಲವಾದ ಹಿನ್ನೆಲೆಯಲ್ಲಿ ಮತ್ತೆ ಜೆಡಿಎಸ್ ನಲ್ಲೇ ಮುಂದುವರೆಯಲು ನಿರ್ಧರಿಸಿದ್ದರು. ಆದರೆ ಬಿಜೆಪಿ ಸೇರುವ ಉತ್ಸಾಹದಲ್ಲಿ ಜೆಡಿಎಸ್ ವಿರುದ್ಧ ತೀವ್ರ ಹೇಳಿಕೆಗಳನ್ನು ನೀಡಿದ್ದರು.
ಸಂದೇಶ್ ನಾಗರಾಜ್ ಅವರ ಈ ನಡೆಯಿಂದ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೂ ನ.22 ರಂದು ಸಂದೇಶ್ ನಾಗರಾಜ್ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


