ಸಿದ್ದರಾಮಯ್ಯ 'ನಾಯಕತ್ವ' ಹಾಗೂ ಶಿವಕುಮಾರ್ 'ಮಾರ್ಗದರ್ಶನದಲ್ಲಿ' ಚುನಾವಣೆ: ಉರಿವ ಬೆಂಕಿಗೆ ತುಪ್ಪ ಸುರಿದ ಕಾಂಗ್ರೆಸ್ ಶಾಸಕ!
ಡಿಕೆ ಶಿವಕುಮಾರ್ ಅವರೇ, ಹಾನಗಲ್ ಫಲಿತಾಂಶದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಯಾವುದೇ ಸಂಭ್ರಮವಿರಲಿಲ್ಲ. ಏಕೆಂದರೆ ನಿಮ್ಮ ಸಂತಸವನ್ನು ಅದಾಗಲೇ ಸಿದ್ದರಾಮಯ್ಯ ಕಸಿದು ಬಿಟ್ಟಿದ್ದಾರಲ್ಲವೇ?

ಬೆಂಗಳೂರು: ಸಿದ್ದರಾಮಯ್ಯ ಅವರ 'ನಾಯಕತ್ವದಲ್ಲಿ' ಹಾಗೂ ಶಿವಕುಮಾರ್ ಅವರ 'ಮಾರ್ಗದರ್ಶನದಲ್ಲಿ' ಚುನಾವಣೆ ಎದುರಿಸುತ್ತೇವೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಬೈರತಿ ಸುರೇಶ್ ಹೇಳಿಕೆ ನೀಡಿರುವುದು ಕಾಂಗ್ರೆಸ್ ನಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಡಿಕೆ ಶಿವಕುಮಾರ್ ಅವರನ್ನು ಮಾರ್ಗದರ್ಶಿ ಮಂಡಳಿಗೆ ಸೇರಿಸುವುದಕ್ಕೆ ಸಿದ್ದರಾಮಯ್ಯ ಬಣ ಹುನ್ನಾರ ನಡೆಸುತ್ತಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಡಿಕೆ ಶಿವಕುಮಾರ್ ಅವರೇ, ಹಾನಗಲ್ ಫಲಿತಾಂಶದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಯಾವುದೇ ಸಂಭ್ರಮವಿರಲಿಲ್ಲ. ಏಕೆಂದರೆ ನಿಮ್ಮ ಸಂತಸವನ್ನು ಅದಾಗಲೇ ಸಿದ್ದರಾಮಯ್ಯ ಕಸಿದು ಬಿಟ್ಟಿದ್ದಾರಲ್ಲವೇ? ಕಸರತ್ತು ಮಾಡಿ ಕೆಪಿಸಿಸಿ ಪಟ್ಟ ಒಲಿಸಿಕೊಂಡರೂ ಈಗ ದ್ವಿತೀಯ ಸಾಲಿನ ನಾಯಕನಂತಾಗಿರುವ ಶಿವಕುಮಾರ್ ಅವರ ಬಗ್ಗೆ ಅನುಕಂಪವಿದೆ ಎಂದಿದೆ.
ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲವೆಂದು ನುಣುಚಿಕೊಳ್ಳುವ ಶಿವಕುಮಾರ್ ಅವರೇ, ನಿಮಗೊಂದು ಸವಾಲು. ನಿಮ್ಮ ಪದವಿಯ ಮೇಲೆ ನಿಮಗೆ ಹಿಡಿತವಿದ್ದರೆ ಶೀಘ್ರದಲ್ಲೇ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಿ, ನೋಡೋಣ. ಪಟ್ಟಿ ಪ್ರಕಟವಾದ ಕ್ಷಣದಿಂದ ಪದಚ್ಯುತಿಯ ಕಾರ್ಯಾಚರಣೆ ಆರಂಭವಾಗಲಿದೆ ಎಂಬ ಭಯ ಕಾಡುತ್ತಿದೆಯೇ?" ಎಂದು ಕಾಲೆಳೆದಿದೆ.
ಡಿಕೆ ಶಿವಕುಮಾರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾದ ಬಳಿಕ ನಡೆದ ಉಪಚುನಾವಣೆಯಲ್ಲಿ ಪ್ರಯಾಸದ ಎರಡನೇ ಗೆಲುವು ಕಾಂಗ್ರೆಸ್‌ಗೆ ಲಭಿಸಿದೆ. ಆದರೆ ಈ ಗೆಲುವನ್ನು ಸಂಭ್ರಮಿಸುವುದಕ್ಕೂ ಡಿಕೆ ಶಿವಕುಮಾರ್ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ. ಉಪಚುನಾವಣೆ ಯಶಸ್ಸಿಗೆ ನಾನೇ ಕಾರಣ ಎಂಬ ಪೈಪೋಟಿಗೆ ಡಿಕೆ ಶಿವಕುಮಾರ್ ಸೋತು ಹೋಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


