ಎಂಎಲ್ ಸಿ ಸ್ಥಾನದ ಮೇಲೆ ಗೋಕಾಕ್ ಸಹೋದರರ ಕಣ್ಣು: ಸ್ಥಳೀಯ ಸಂಸ್ಥೆ ಚುನಾವಣೆಗೆ ಲಖನ್ ಜಾರಕಿಹೊಳಿ ಸಿದ್ಧತೆ
ಕುಟುಂಬದಿಂದ ಈಗಾಗಲೇ ಮೂವರು ಶಾಸಕರಿದ್ದರೂ ಜಾರಕಿಹೊಳಿ ಸಹೋದರರು ತಮ್ಮ ಮತ್ತೊಬ್ಬ ಕಿರಿಯ ಸಹೋದರನನ್ನು ಶಾಸಕನಾಗಿಸಲು ಹೊರಟಿದ್ದಾರೆ.

ಬೆಳಗಾವಿ: ಕುಟುಂಬದಿಂದ ಈಗಾಗಲೇ ಮೂವರು ಶಾಸಕರಿದ್ದರೂ ಜಾರಕಿಹೊಳಿ ಸಹೋದರರು ತಮ್ಮ ಮತ್ತೊಬ್ಬ ಕಿರಿಯ ಸಹೋದರನನ್ನು ಶಾಸಕನಾಗಿಸಲು ಹೊರಟಿದ್ದಾರೆ.
2022 ರ ಜನವರಿಯಲ್ಲಿ ನಡೆಯುವ ಬೆಳಗಾವಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಯನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದಾರೆ.
ಜಾರಕಿಹೊಳಿ ಕುಟುಂಬದ ಮೂವರು ಶಾಸಕರಷ್ಟು ಲಖನ್ ಜನಪ್ರಿಯವಾಗಿಲ್ಲ, ಹೀಗಾಗಿ ಚುನಾವಣಾ ರಾಜಕಾರಣದ ಮೂಲಕ ಆಯ್ಕೆಯಾಗುವುದು ಕಷ್ಟಕರವಾಗಿದೆ.
ಲಖನ್ ಜಾರಕಿಹೊಳಿ ಬೆಂಬಲ ಕೋರಿ ಬಿಜೆಪಿ ನಾಯಕರು ಗೋಕಾಕ್‌ನಲ್ಲಿ ಅವರನ್ನು ಭೇಟಿಯಾದಾಗಿನಿಂದ, ಜಾರಕಿಹೊಳಿ ಸಹೋದರರು ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿಯಿಂದ ಅವರನ್ನು ಕಣಕ್ಕಿಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಬಿಜೆಪಿ ಟಿಕೆಟ್ ನಿರಾಕರಿಸಿದರೇ ಸ್ವತಂತ್ರ್ಯವಾಗಿ ಸ್ಪರ್ಧಿಸುವಂತೆ ಹಲವು ನಾಯಕರು ಅವರಿಗೆ ಸಲಹೆ ನೀಡುತ್ತಿದ್ದಾರೆ. ಕೌನ್ಸಿಲ್ ಚುನಾವಣೆ ಜಾರಕಿಹೊಳಿ ಸಹೋದರರಿಗೆ ಹೊಸತಲ್ಲ. ಸದ್ಯ ಶಾಸಕರಾಗಿರುವ ಸತೀಶ್ ಜಾರಕಿಹೊಳಿ ಈ ಹಿಂದೆ ಎರಡು ಬಾರಿ ಬೆಳಗಾವಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


