ಚಾಮರಾಜನಗರ ದುರಂತ: ಮೃತರ ಮನೆಗೆ ಇಂದು ಡಿಕೆ.ಶಿವಕುಮಾರ್ ಭೇಟಿ
ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೆ, ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ.

ಬೆಂಗಳೂರು: ಚಾಮರಾಜನಗರದಲ್ಲಿ ಆಮ್ಲಜನಕ ಇಲ್ಲದೆ, ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನ ಹೇಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ.
ಬೆಳಿಗ್ಗೆ 8.30ರಿಂದ ರಾತ್ರಿ 8.45ರವರೆಗೆ ಎಲ್ಲಾ ಮೃತರ ಕುಟುಂಬಗಳನ್ನು ಭೇಟಿ ಮಾಡಲು ಪಾಳ್ಯ, ಕೊಳ್ಳೇಗಾಲ, ಚೆನ್ನಪ್ಪನಪುರ ದೊಡ್ಡಿ, ಹನೂರು, ತಿಮ್ಮರಾಜೀಪುರ, ಮುಡಿಗುಂಡ, ಯರಿಯೂರು, ಕಸ್ತೂರು, ಯರಗಂಬಳ್ಳಿ, ಬಾಣಹಳ್ಳಿ, ಆಲ್ದೂರು, ಮಂಗಲದ ಹೊಸೂರು, ಚಾಮರಾಜನಗರ ಟೌನ್, ಜ್ಯೋತಿಗೌಡನಪುರ, ನಲ್ಲೂರು, ನಾಗವಳ್ಳಿ, ಚಂದಕಮವಾಡಿ, ವೀರಯ್ಯನಪುರ, ಬಿಸಲವಾಡಿ, ಬಂಡಿಗೆರೆ, ಹೊನ್ನಹಳ್ಳಿ, ನಂಜೇದೇವನಪುರ, ದೇಸಿಗೌಡನಪುರ, ಲಕ್ಕೂರು, ಯರಿಯೂರು, ಶಿಂಡುನಪುರ, ಗುಂಡ್ಲುಪೇಟೆ ಟೌನ್, ಗುಂಡ್ಲುಪೇಟೆ ಹೊಸೂರು, ಹೆಂಗಳಪುರಕ್ಕೆ ಭೇಟಿ ನೀಡಲಿದ್ದಾರೆ.
ಇದೇ ವೇಳೆ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಆರ್.ಧ್ರುವನಾರಾಯಣ ಅವರೂ ಕೂಡ ಡಿಕೆ.ಶಿವಕುಮಾರ್ ಅವರ ಜೊತೆಗೆ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ. ಪ್ರಕರಣ ಸಂಬಂಧ ಕಾನೂನು ಹೋರಾಟ ಮಾಡುತ್ತಿರುವ ಕುಟುಂಬಗಳಿಗೆ ಪಕ್ಷ ಸಹಾಯ ಮಾಡಲಿದೆ ಎಂದು ಧ್ರುವನಾರಾಯಣ್ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


