ರಾಜಕೀಯ

'ಹಿಂದಿಯೇತರರು ದೇಶದ ಅತ್ಯುನ್ನತ ಸ್ಥಾನದಲ್ಲಿರುವುದನ್ನು ಹಿಂದಿ ಲಾಭಿ ಸಹಿಸುವುದಿಲ್ಲ: ರಾಜಕೀಯದಲ್ಲಿನ ಹಿಂದಿ ಪಾರಮ್ಯ ಕಣ್ಣಾರೆ ಕಂಡವನು'

ರಾಜಕೀಯದಲ್ಲಿನ ಹಿಂದಿ ಪಾರಮ್ಯವನ್ನು ಕಣ್ಣಾರೆ ಕಂಡವನು ನಾನು. ಕನ್ನಡಿಗ ಎಚ್.ಡಿ ದೇವೇಗೌಡರು 11 ತಿಂಗಳು ಪ್ರಧಾನ ಮಂತ್ರಿಯಾಗಿದ್ದರು. ಭಾಷೆಯ ವಿಚಾರದಲ್ಲಿ ಅವರೆಷ್ಟು ನೋವು ಅನುಭವಿಸಬೇಕಾಯಿತು ಎಂಬುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ.

'ಹಿಂದಿಯೇತರರು ದೇಶದ ಅತ್ಯುನ್ನತ ಸ್ಥಾನದಲ್ಲಿರುವುದನ್ನು ಹಿಂದಿ ಲಾಭಿ ಸಹಿಸುವುದಿಲ್ಲ: ರಾಜಕೀಯದಲ್ಲಿನ ಹಿಂದಿ ಪಾರಮ್ಯ ಕಣ್ಣಾರೆ ಕಂಡವನು'
ಎಚ್.ಡಿ ಕುಮಾರಸ್ವಾಮಿ
Published On :

ಬೆಂಗಳೂರು: ಕನ್ನಡಿಗರ ಹೋರಾಟ ಕೇವಲ ಕಂಪನಿಗಳ ವಿರುದ್ಧ ಮಾತ್ರವಲ್ಲ, ಕನ್ನಡ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯದ ವಿಚಾರದಲ್ಲಿ ಕೇಂದ್ರೀಕೃತವಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕುಮಾರ ಸ್ವಾಮಿ, ರಾಜಕೀಯದಲ್ಲಿನ ಹಿಂದಿ ಪಾರಮ್ಯವನ್ನು ಕಣ್ಣಾರೆ ಕಂಡವನು ನಾನು. ಕನ್ನಡಿಗ ಎಚ್.ಡಿ ದೇವೇಗೌಡರು 11 ತಿಂಗಳು ಪ್ರಧಾನ ಮಂತ್ರಿಯಾಗಿದ್ದರು. ಭಾಷೆಯ ವಿಚಾರದಲ್ಲಿ ಅವರೆಷ್ಟು ನೋವು ಅನುಭವಿಸಬೇಕಾಯಿತು ಎಂಬುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಹಿಂದಿಯೇತರರು ದೇಶದ ಅತ್ಯುನ್ನತ
ಸ್ಥಾನ ವಹಿಸಿಕೊಳ್ಳುವುದನ್ನು ಹಿಂದಿ ಲಾಭಿ ಎಂದೂ ಸಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಲೋಕಸಭೆಯಲ್ಲಿ ಕನ್ನಡದಲ್ಲಿ ಮಾತನಾಡಿದರೆ ಮಾನ್ಯತೆ ಸಿಗುವುದಿಲ್ಲ, ಗಂಭೀರವಾಗಿಯೂ ಆಲಿಸುವುದಿಲ್ಲ. ಕೇಂದ್ರದ ಪ್ರಕಟಣೆಗಳು ಸ್ಥಳೀಯ ಭಾಷೆಯಲ್ಲಿ ಸಿಗುವುದಿಲ್ಲ. ಕೇಂದ್ರದ ಸೇವೆಗಳು ಕನ್ನಡದಲ್ಲಿಲ್ಲ. ಅಧಿಕಾರಿಗಳು, ಸಿಬ್ಬಂದಿ ಕನ್ನಡದಲ್ಲಿ ಮಾತನಾಡುವುದಿಲ್ಲ. ವೆಬ್‌ಸೈಟ್‌ಗಳಲ್ಲಿ ಕನ್ನಡವಿಲ್ಲ. ಗ್ರಾಹಕ ಸೇವೆ ಕನ್ನಡದಲ್ಲಿ ಸಿಗುವುದಿಲ್ಲ ಎಂಬು ಹೇಳಿದ್ದಾರೆ.

ಕೇಂದ್ರ ಸರ್ಕಾರದ ನೌಕರಿ ಸಿಗಬೇಕಿದ್ದರೆ ಹಿಂದಿ ಭಾಷೆ ಬರಬೇಕೆಂಬ ಷರತ್ತುಗಳು, ಹಿಂದಿಯಲ್ಲೇ ಪರೀಕ್ಷೆ ಬರೆಯಬೇಕೆಂಬ ನಿಬಂಧನೆಗಳು, ತ್ರಿಭಾಷಾ ಸೂತ್ರವೆಂಬ ಕುಣಿಕೆಗಳು ಹಿಂದಿ ಹೇರಿಕೆಯ ಸ್ಪಷ್ಟ ಪ್ರಯತ್ನಗಳು. ಸ್ಥಳೀಯ ಭಾಷೆಗಳನ್ನು ಕೊಲ್ಲುವ ಅಜೆಂಡಾಗಳು. ನಮ್ಮಹೋರಾಟಗಳು ಇಂಥ ಮಾರಕ ಅಜೆಂಡಾಗಳ ವಿರುದ್ಧ ಇರಬೇಕು ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ.

ಕನ್ನಡ, ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ದೊಡ್ಡದಿದ್ದು, ನಮ್ಮ ಹೋರಾಟ ಇರಬೇಕಾದ್ದು ಒಕ್ಕೂಟ ವ್ಯವಸ್ಥೆಯಲ್ಲಿನ ನಮ್ಮ ಹಕ್ಕುಗಳಿಗಾಗಿ. ನಮಗೆ ಸಿಗಬೇಕಾದ ನ್ಯಾಯದ ವಿಚಾರಕ್ಕಾಗಿ ಎಂದು ಪ್ರತಿಪಾದಿಸಿದ್ದಾರೆ. ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿಚಾರದಲ್ಲಿ ಮಾಧ್ಯಮಗಳು ಇನ್ನಷ್ಟು ಕ್ರಿಯಾಶೀಲವಾಗಿ ವರ್ತಿಸಬೇಕಾಗಿದೆ. ಹಲವು ಮಾಧ್ಯಮಗಳು ಆ
ಕೆಲಸ ಮಾಡುತ್ತಿವೆ. ಜನರಲ್ಲಿನ ಭಾಷಾಭಿಮಾನವನ್ನು ಕಾಲಕಾಲಕ್ಕೆ ಬಡಿದೆಬ್ಬಿಸಬೇಕಾದ ಜವಾಬ್ದಾರಿ ಮಾಧ್ಯಮಗಳದ್ದು. ಕನ್ನಡಕ್ಕಾಗುತ್ತಿರುವ ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮಾಧ್ಯಮದ ಪಾಲ್ಗೊಳ್ಳುವಿಗೆ ಪ್ರಧಾನ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕನ್ನಡಿಗರ ಭಾಷಾಭಿಮಾನವನ್ನು ಅಮೇಜಾನ್, ಗೂಗಲ್ ಕೆಣಕಿದ್ದವೋ, ಇಲ್ಲವೇ ಪಟ್ಟಭದ್ರರು ಕೆಣಕಿದ್ದರೋ.. ಆದರೆ, ಕನ್ನಡಿಗರು ಖಚಿತವಾಗಿ ಸಿಡಿಯುತ್ತಾರೆ ಎಂಬ ಉತ್ತರ ಕೆಣಕಿದವರಿಗೆ ಸಿಕ್ಕಿದೆ. ಆದರೆ, ಈ ಸಣ್ಣ ವಿಚಾರಗಳೇ ವೈಭವೀಕರಣಗೊಂಡು, ಚರ್ಚೆಯಾಗಬೇಕಾದ ಗಂಭೀರ ವಿಚಾರಗಳು ಮರೆಯಾಗದಿರಲಿ. ಕನ್ನಡ,ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ದೊಡ್ಡದಿದೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.