ರಾಜಕೀಯ

ನಿಮ್ಮ ಗುಣ ನಿಮ್ಮ ಪುತ್ರರಿಗೆ ಎಷ್ಟರ ಮಟ್ಟಿಗೆ ಬಂದಿದೆ ಸಿದ್ದರಾಮಯ್ಯನವರೇ?: ಬಿಜೆಪಿ ತಿರುಗೇಟು 

ಮಹಾತ್ಮಾ ಗಾಂಧಿ ಬಹಳ ಒಳ್ಳೆಯವರು, ತಮ್ಮ ನಡೆ-ನುಡಿ, ಕೆಲಸಗಳಿಂದ ಮಹಾತ್ಮರಾದರು, ಆದರೆ ಅವರ ಮಗ ಏನಾದ ಕುಡುಕನಾಗಲಿಲ್ಲವೇ, ಅದೇ ರೀತಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಆರ್ ಬೊಮ್ಮಾಯಿಯವರ ಸದ್ಗುಣಗಳು ಅವರ ಪುತ್ರ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬರುತ್ತದೆ, ಬರಬಹುದು ಎಂದು ಹೇಳಲು ಆಗುತ್ತದೆಯೇ,ತಂದೆಯ ಗುಣ ಮಕ್ಕಳಿಗೆ ಬರುವುದಿಲ್ಲ, ಅದು ವಂಶವಾಹಿನಿಯಲ

ನಿಮ್ಮ ಗುಣ ನಿಮ್ಮ ಪುತ್ರರಿಗೆ ಎಷ್ಟರ ಮಟ್ಟಿಗೆ ಬಂದಿದೆ ಸಿದ್ದರಾಮಯ್ಯನವರೇ?: ಬಿಜೆಪಿ ತಿರುಗೇಟು 
ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಮಹಾತ್ಮಾ ಗಾಂಧಿ ಬಹಳ ಒಳ್ಳೆಯವರು, ತಮ್ಮ ನಡೆ-ನುಡಿ, ಕೆಲಸಗಳಿಂದ ಮಹಾತ್ಮರಾದರು, ಆದರೆ ಅವರ ಮಗ ಏನಾದ ಕುಡುಕನಾಗಲಿಲ್ಲವೇ, ಅದೇ ರೀತಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಆರ್ ಬೊಮ್ಮಾಯಿಯವರ ಸದ್ಗುಣಗಳು ಅವರ ಪುತ್ರ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಬರುತ್ತದೆ, ಬರಬಹುದು ಎಂದು ಹೇಳಲು ಆಗುತ್ತದೆಯೇ,ತಂದೆಯ ಗುಣ ಮಕ್ಕಳಿಗೆ ಬರುವುದಿಲ್ಲ, ಅದು ವಂಶವಾಹಿನಿಯಲ್ಲ ಎಂದು ಹೇಳಿ ಸುದ್ದಿ ಮಾಡಿದ್ದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಇದಕ್ಕೆ ರಾಜ್ಯ ಬಿಜೆಪಿ ಟ್ವೀಟ್ ಗಳ ಮೂಲಕ ಮಾಜಿ ಸಿಎಂಗೆ ತಿರುಗೇಟು ನೀಡಿದೆ, ನಿಮ್ಮ ಗುಣಗಳು ನಿಮ್ಮ ಮಗ ಡಾ ಯತೀಂದ್ರ ಅವರಿಗೆ ಎಷ್ಟು ಬಂದಿವೆ, ಸಾಮಾನ್ಯವಾಗಿ ತಂದೆಯಿಂದ ಮಗನಿಗೆ ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ. ಸಂಸ್ಕಾರ, ಗುಣ, ಸಾಮರ್ಥ್ಯ ಅವರವರ ಗಳಿಕೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಸಿದ್ದರಾಮಯ್ಯನವರೇ ಎಂದು ಹೇಳಿದೆ.

ಅಲ್ಲದೆ ಸಿದ್ದರಾಮಯ್ಯನವರ ಹಿರಿಯ ದಿವಂಗತ ಪುತ್ರ ರಾಕೇಶ್ ಸಿದ್ದರಾಮಯ್ಯನವರ ವಿಚಾರವನ್ನು ಕೂಡ ಬಿಜೆಪಿ ತಂದಿದೆ. ನಿಮ್ಮ ಮಗ ವಿಪರೀತ ಕುಡಿಯುವ ಅಭ್ಯಾಸ ಹೊಂದಿದ್ದರು ಎಂದು ಹೇಳುತ್ತಾರೆ, ಕುಡಿದ ಮತ್ತಿನಲ್ಲಿ ಹಿರಿಯ ನಾಗರಿಕರ ಮೇಲೆ ದೌರ್ಜನ್ಯವೆಸಗಿದ್ದರು ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು, ನಿಜವೇ, ಹಾಗಾದರೆ ಅದನ್ನು ಅಪ್ಪನಾದ ನಿಮ್ಮ ಗುಣಗಳಿಗೆ ಹೋಲಿಸಲು ಸಾಧ್ಯವೇ ಎಂದು ಪ್ರಶ್ನಿಸಿದೆ.

ಅಲ್ಲದೆ ನೀವು ಯಾವ ಗಾಂಧಿ ಬಗ್ಗೆ ಹೇಳಿದ್ದು ಇಂದಿರಾ ಗಾಂಧಿ ಪುತ್ರನ ಬಗ್ಗೆಯೇ, ಅಥವಾ ಸೋನಿಯಾ ಗಾಂಧಿ ಪುತ್ರನ ಬಗ್ಗೆಯೇ ಎಂದು ಕುಟುಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.