ಡಿ ಕೆ ಶಿವಕುಮಾರ್ ಸಂಘಟನಾ ಚತುರ, ಅವರ ಸೌಜನ್ಯವನ್ನು ಮೆಚ್ಚುತ್ತೇನೆ: ಹೆಚ್ ವಿಶ್ವನಾಥ್
ಡಿ ಕೆ ಶಿವಕುಮಾರ್ ಪಕ್ಷವನ್ನು ಯಾವ ರೀತಿ ಸಂಘಟನೆ ಮಾಡಬೇಕೆಂದು ಕರಗತ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸೇರಿಕೊಳ್ಳಲು ಇಚ್ಛಿಸುವವರು ಬನ್ನಿ ಎಂದು ಡಿ ಕೆ ಶಿವಕುಮಾರ್ ಕರೆದ ತಕ್ಷಣ ಯಾರೂ ಹೋಗುವುದಿಲ್ಲ. ಆದರೆ ಡಿ ಕೆ ಶಿವಕುಮಾರ್ ಅವರ ಸೌಜನ್ಯ ಬಹಳ ಮುಖ್ಯವಾದುದು ಎಂದು ಬಿಜೆಪಿ ನಾಯಕ ಹೆಚ್ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು: ಡಿ ಕೆ ಶಿವಕುಮಾರ್ ಪಕ್ಷವನ್ನು ಯಾವ ರೀತಿ ಸಂಘಟನೆ ಮಾಡಬೇಕೆಂದು ಕರಗತ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸೇರಿಕೊಳ್ಳಲು ಇಚ್ಛಿಸುವವರು ಬನ್ನಿ ಎಂದು ಡಿ ಕೆ ಶಿವಕುಮಾರ್ ಕರೆದ ತಕ್ಷಣ ಯಾರೂ ಹೋಗುವುದಿಲ್ಲ. ಆದರೆ ಡಿ ಕೆ ಶಿವಕುಮಾರ್ ಅವರ ಸೌಜನ್ಯ ಬಹಳ ಮುಖ್ಯವಾದುದು ಎಂದು ಬಿಜೆಪಿ ನಾಯಕ ಹೆಚ್ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ರಾಜಕೀಯ ಚಲನವಲನಗಳು ಮತ್ತು ಪರಿಸ್ಥಿತಿಗಳು ಎಲ್ಲದರ ಹಿನ್ನೆಲೆಯಲ್ಲಿ 17 ಜನ ಕಾಂಗ್ರೆಸ್ ನಿಂದ ಬಿಟ್ಟುಹೋಗಿದ್ದವರನ್ನು ಮಾತೃಸಂಸ್ಥೆಗೆ ವಾಪಸ್ ಬನ್ನಿ ಎಂದು ಕರೆಯುವುದು ಡಿ ಕೆ ಶಿವಕುಮಾರ್ ಅವರ ಸೌಜನ್ಯವನ್ನು ತೋರಿಸುತ್ತದೆ ಎಂದರು.
ಡಿ ಕೆ ಶಿವಕುಮಾರ್ ಅವರು ಪಕ್ಷದ ರಾಜ್ಯಾಧ್ಯಕ್ಷನಾಗಿ ಅವರ ಪಕ್ಷದ ಸಂಘಟನೆ, ಚಾತುರ್ಯತೆಗೆ ಮೆಚ್ಚುತ್ತೇನೆ, ಅವರು ಕರೆದು ತಕ್ಷಣ ದಿಢೀರ್ ಎಂದು ಯಾರೂ ಹೋಗುವುದಿಲ್ಲ, ಸಿದ್ದರಾಮಯ್ಯನವರು ಹೇಳಿದಂತೆ ಪ್ರಳಯವೇನು ಆಗುವುದಿಲ್ಲ, ನಾವ್ಯಾರು ಆತುರಾತುರವಾಗಿ ಹೋಗುತ್ತೇವೆ ಎಂಬ ಭಯ ಸಿದ್ದರಾಮಯ್ಯನವರಿಗೆ ಬೇಡ. ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಂದಿದ್ದಾಗ ನಾವ್ಯಾರಾದರು ಪ್ರಳಯವಾಗುತ್ತದೆ ಎಂದು ಹೇಳಿದ್ದೆವೇ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಅಂದು ಜೆಡಿಎಸ್ ನಲ್ಲಿದ್ದುಕೊಂಡು ಉಪಮುಖ್ಯಮಂತ್ರಿ, ರಾಜ್ಯಾಧ್ಯಕ್ಷರಾಗಿದ್ದ ಸಿದ್ದರಾಮಯ್ಯನವರನ್ನು ಪಕ್ಷದಿಂದ ಹೊರಹಾಕಿದ್ದಾಗ ಇದೇ ಕಾಂಗ್ರೆಸ್ ನಾಯಕರು ಪ್ರೀತಿಯಿಂದ ಬರಮಾಡಿಕೊಂಡಿರಲಿಲ್ಲವೇ, ಸಿದ್ದರಾಮಯ್ಯನವರು ಬಂದರೆ ಪ್ರಳಯವಾಗುತ್ತದೆಯೇ ಎಂದು ಹೇಳಿದ್ದರೇ, ರಾಜಕೀಯದಲ್ಲಿ ಕಾಲಕಾಲಕ್ಕೆ ಸ್ಥಿತ್ಯಂತರವಾಗುತ್ತಿರುತ್ತದೆ, ರಾಜಕಾರಣಿಗಳು ಸೌಜನ್ಯಮೂರ್ತಿಗಳಾಗಬೇಕು, ಬರೀ ದ್ವೇಷ ಸಾಧಿಸಿಕೊಂಡು ಕುಳಿತರೆ ಏನೂ ಆಗುವುದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


