ರಾಜಕೀಯ

ಕೋರ್ಟ್​ನಿಂದ ತಡೆಯಾಜ್ಞೆ ತಂದ ಸದಾನಂದಗೌಡ: ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ- ಕಾಂಗ್ರೆಸ್ ಲೇವಡಿ

ತಮ್ಮ ವಿರುದ್ದ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ತಂದ ನಿರ್ಬಂಧಕಾಜ್ಞೆ ಕುರಿತು ರಾಜ್ಯ ಕಾಂಗ್ರೆಸ್ ಶನಿವಾರ ವ್ಯಂಗ್ಯವಾಡಿದೆ.

ಕೋರ್ಟ್​ನಿಂದ ತಡೆಯಾಜ್ಞೆ ತಂದ ಸದಾನಂದಗೌಡ: ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ- ಕಾಂಗ್ರೆಸ್ ಲೇವಡಿ
ಸಂಗ್ರಹ ಚಿತ್ರ
Published On :

ಬೆಂಗಳೂರು: ತಮ್ಮ ವಿರುದ್ದ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ತಂದ ನಿರ್ಬಂಧಕಾಜ್ಞೆ ಕುರಿತು ರಾಜ್ಯ ಕಾಂಗ್ರೆಸ್ ಶನಿವಾರ ವ್ಯಂಗ್ಯವಾಡಿದೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ಟೀವ್ ಮಾಡಿರುವ ರಾಜ್ಯ ಕಾಂಗ್ರೆಸ್, "ತಮ್ಮವರಿಂದಲೇ ಬ್ಲ್ಯಾಕ್'ಮೇಲ್ ಜನತಾ ಪಾರ್ಟಿ ಎಂದು ಕರೆಸಿಕೊಂಡ ಬಿಜೆಪಿಯಲ್ಲಿ ಬ್ಲಾಕ್‌ಮೇಲ್ ಭರ್ಜರಿಯಾಗಿ ನಡೆಯುತ್ತಿರುವಂತಿದೆ. ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ ಹೊಂದಿರುವ ಕರ್ನಾಟಕದ ಬಿಜೆಪಿ ನಾಯಕರು ಡಿವಿ ಸದಾನಂದ ಗೌಡ ಅವರನ್ನೂ ಬ್ಲಾಕ್‌ಮೇಲ್ ಮಾಡುತ್ತಿರುವಂತಿದೆ. ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ ಎಂದು ಹೇಳಿದೆ.

ಮತ್ತೊಂದು ಟ್ವೀಡಲ್ ನಲ್ಲಿ ಸದಾನಂದಗೌಡ ಅವರನ್ನು ಲೇವಡಿ ಮಾಡಿರುವ ಕಾಂಗ್ರೆಸ್, ಕಳ್ಳನ ಮನಸು ಹುಳ್ಳುಳ್ಳಗೆ ಎಂಬಂತೆ ಕೇಂದ್ರ ಸಚಿವ ಸದಾನಂದ ಗೌಡ ಅವರು ಸಿಡಿ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದಾರೆ, ತಡೆಯಾಜ್ಞೆ ತಂದ ಬಿಜೆಪಿಗರಲ್ಲಿ ಇವರು ಏಳನೆಯವರು! ಬಿಜೆಪಿಯವರಿಗೇ ಏಕೆ ಈ ಪರಿ ಸಿಡಿ ಭಯ ಕಾಡುವುದು ಎಂಬುದೇ ಯಕ್ಷಪ್ರಶ್ನೆ. ತಡೆಯಾಜ್ಞೆ ತರುವ ಮೂಲಕ ತಮ್ಮದೂ ಸಿಡಿ ಇದೆ ಎಂದು ಗೌಡರು ಸ್ವಯಂ ಒಪ್ಪಿಕೊಂಡಂತಾಗಿದೆ ಎಂದು ಹೇಳಿ ಅಪಹಾಸ್ಯಕ್ಕೆ ಗುರಿ ಮಾಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.