ಶಾಸನಸಭೆಯಲ್ಲಿ ಎಂತಹ ಮೇಲ್ಪಂಕ್ತಿ ಹಾಕಿ ಬಿಟ್ಟಿರಿ! ವಿದ್ವತ್ ಕೇವಲ ಪೊಳ್ಳು ಭಾಷಣಕ್ಕೆ ಸೀಮಿತ; ತಿಪ್ಪೆ ಸಾರಿಸುವ ಕ್ಷಮೆ ನಿಮಗೆ ಭೂಷಣವೇ?
ಅತ್ಯಾಚಾರ ಕುರಿತು ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರು ಸದನದಲಲ್ಲಿ ಆಡಿರುವ ಮಾತಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.

ಬೆಂಗಳೂರು : ಅತ್ಯಾಚಾರ ಕುರಿತು ಮಾಜಿ ಸ್ಪೀಕರ್ ಹಾಗೂ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ ಅವರು ಸದನದಲಲ್ಲಿ ಆಡಿರುವ ಮಾತಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಅತ್ಯಾಚಾರದ ಬಗ್ಗೆ ರಮೇಶ್ ಕುಮಾರ್ ಅವರು ಕೀಳಾಗಿ ಮಾತನಾಡುವಾಗ ಮಹಿಳಾ ಸದಸ್ಯರೂ ಉಪಸ್ಥಿತರಿದ್ದರು. ಉಚಿತ – ಅನುಚಿತ ಪ್ರಜ್ಞೆ ಇಲ್ಲದೇ ಆಡುವ ಮಾತುಗಳು ಕ್ಷಮೆಗೆ ಅರ್ಹವೇ? ರಮೇಶ್ ಕುಮಾರ್ ಅವರೇ, ತಿಪ್ಪೇ ಸಾರಿಸುವ ಕ್ಷಮೆ ನಿಮ್ಮಂಥವರಿಗೆ ಭೂಷಣವೇ ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
ಮಾನ್ಯ ರಮೇಶ್ ಕುಮಾರ್ ಅವರೇ, ಶಾಸನಸಭೆಯಲ್ಲಿ ಎಂತಹ ಮೇಲ್ಪಂಕ್ತಿ ಹಾಕಿ ಬಿಟ್ಟಿರಿ! ಮಹಿಳೆಯರ ಗೌರವದ ಬಗ್ಗೆ ಸದನದಲ್ಲಿ ಈ ರೀತಿ ಮಾತನಾಡಿದ್ದು ಸೂಕ್ತವೇ? ಕಿರಿಯರಿಗೆ ಮೇಲ್ಪಂಕ್ತಿ ಹಾಕಬೇಕಿದ್ದ ನೀವು ಇಂಥ ಕೀಳು ಅಭಿರುಚಿಯ ಮಾತನಾಡಿದ್ದು ಎಷ್ಟು ಸರಿ ಎಂದು ಬಿಜೆಪಿ ಪ್ರಶ್ನಿಸಿದೆ.
ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎಂಬ ಆಡುಮಾತಿನ ಅರ್ಥವನ್ನು ರಮೇಶ್ ಕುಮಾರ್ ಅವರಿಗೆ ಹೇಳಿ ಕೊಡಬೇಕಿಲ್ಲ. ಮಹಿಳೆಯರ ಬಗ್ಗೆ ಸಂವೇದನಾ ರಹಿತವಾಗಿ ಆಡಿದ ಮಾತುಗಳು ಕ್ಷಮೆಗೂ ಅರ್ಹವಲ್ಲ. ನಿಮ್ಮ ವಿದ್ವತ್ ಕೇವಲ ಪೊಳ್ಳು ಭಾಷಣಕ್ಕೆ ಸೀಮಿತವಾದಂತಿದೆ.
ಮಹಿಳೆಯರ ಗೌರವದ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ಅವರು ತೀರಾ ಕೆಳಮಟ್ಟದಲ್ಲಿ ಮಾತನಾಡಿದ್ದಾರೆ. ಇದು ಮಹಿಳೆಯರ ಬಗ್ಗೆ ಕಾಂಗ್ರೆಸ್ ಹೊಂದಿರುವ ಒಳಮನಸ್ಸಿನ ಅಭಿವ್ಯಕ್ತಿ. ರಮೇಶ್ ಕುಮಾರ್ ಅವರು ಅದಕ್ಕೊಂದು ದೃಷ್ಟಾಂತ ಮಾತ್ರ. ಮಹಿಳೆಯರ ಬಗ್ಗೆ ಕಾಂಗ್ರೆಸ್ಸಿಗರ ದೃಷ್ಟಿಕೋನವೇ ಇಷ್ಟು ಎಂದು ಟೀಕಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


