ರಾಜಕೀಯ

ಡ್ರಗ್ಸ್ ಹುಡುಗಿ ಅಂತಲ್ಲ, ಚಿತ್ರನಟಿ ಅಂತ ಪ್ರಚಾರಕ್ಕೆ ತೆಗೆದುಕೊಂಡಿದ್ದು: ರಮೇಶ್ ಜಾರಕಿಹೊಳಿ

ಚಿತ್ರನಟಿ ಎಂಬ ಕಾರಣಕ್ಕೆ ರಾಗಿಣಿಯನ್ನು ಅಂತ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ತಗೆದುಕೊಂಡಿದ್ದೆವು, ಡ್ರಗ್ಸ್ ಹುಡುಗಿ ಅಂತ ಅಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಡ್ರಗ್ಸ್ ಹುಡುಗಿ ಅಂತಲ್ಲ, ಚಿತ್ರನಟಿ ಅಂತ ಪ್ರಚಾರಕ್ಕೆ ತೆಗೆದುಕೊಂಡಿದ್ದು: ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
Published On :

ಬೆಂಗಳೂರು: ಚಿತ್ರನಟಿ ಎಂಬ ಕಾರಣಕ್ಕೆ ರಾಗಿಣಿಯನ್ನು ಅಂತ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರಕ್ಕೆ ತಗೆದುಕೊಂಡಿದ್ದೆವು, ಡ್ರಗ್ಸ್ ಹುಡುಗಿ ಅಂತ ಅಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವರೊಂದಿಗೆ ಡ್ರಗ್ಸ್ ಪೆಡ್ಲರ್​ಗಳು ಫೋಟೋ ತೆಗೆಸಿಕೊಂಡಿದ್ದಾರೆ ಎಂದಾಕ್ಷಣ ಪ್ರಭಾವ ಬೀರುತ್ತಾರೆ ಎನ್ನುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಜತೆಗೆ ಫೋಟೋ ತೆಗೆಸಿಕೊಂಡಿರುವುದು ಬಂದಿದೆ. ಹಾಗೆಂದ ಮಾತ್ರ ಸ್ನೇಹ, ನಂಟು ಕಲ್ಪಿಸಲಾಗದು. ಪ್ರಕರಣ ತನಿಖೆ ಹಂತದಲ್ಲಿರುವಾಗ ಏನನ್ನದಾರೂ ಹೇಳುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಸಚಿವರಾಗುವುದಕ್ಕೆ ಆಕಾಂಕ್ಷಿಗಳು ಕಾಯಬೇಕು. ನಾವು 14 ತಿಂಗಳು ಕಾದಿದ್ದೇವೆ. ಅದರಲ್ಲಿ 8 ತಿಂಗಳು ಕೋರ್ಟ್​ಗೆ ಅಲೆದಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಮ್ಮ ಸ್ನೇಹಿತರಿಗೆ ತಾಳ್ಮೆ ಮಂತ್ರ ಬೋಧಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.