ಕೋವಿಡ್ ನಿಯಮ ಪಾಲನೆಗೆ ಡೋಂಟ್ ಕೇರ್: ಚುನಾವಣೆ ಪ್ರಚಾರದಲ್ಲಿ ನಾಯಕರ ಜೊತೆ ಬೆಂಬಲಿಗರ ದಂಡೋ ದಂಡು!
ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣಾ ಕಣದ ಪ್ರಚಾರದ ತೀವ್ರತೆ ಏರುತ್ತಲೇ ಇದೆ, ಮೂರು ಪಕ್ಷಗಳ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸುವುದರ ಜೊತೆಗೆ ರ್ಯಾಲಿ, ರೋಡ್ ಶೋ ನಡೆಸುತ್ತಿದ್ದಾರೆ

ಬೆಂಗಳೂರು: ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣಾ ಕಣದ ಪ್ರಚಾರದ ತೀವ್ರತೆ ಏರುತ್ತಲೇ ಇದೆ, ಮೂರು ಪಕ್ಷಗಳ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸುವುದರ ಜೊತೆಗೆ ರ್ಯಾಲಿ, ರೋಡ್ ಶೋ ನಡೆಸುತ್ತಿದ್ದಾರೆ.
ಆದರೆ ಮೂರು ಪಕ್ಷಗಳ ನಾಯಕರುಗಳು ಕೊವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಾಮಾಜಿಕ ಅಂತರ ಪಾಲನೆಯನ್ನು ನಾಯಕರು ಮರೆತಿದ್ದಾರೆ. ಸಾವಿರಾರು ಬೆಂಬಲಿಗರ ದಂಡೇ ಸೇರುತ್ತಿದೆ.
ಚುನಾವಣಾ ಸಮಯದಲ್ಲಿ ರ್ಯಾಲಿಗಳಿಂದ ಸೂಪರ್ ಸ್ಪ್ರೆಡರ್ ಆಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರು ಕೂಡ ಯಾರು ನಿಯಮ ಪಾಲಿಸುತ್ತಿಲ್ಲ, ಆಡಳಿತಾರೂಢ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ , ಡಿಸಿಎಂ ಅಶ್ವತ್ಥ ನಾರಾಯಣ ಮತ್ತು ಲಕ್ಷ್ಮಣ ಸವದಿ, ಬಿವೈ ವಿಜಯೇಂದ್ರ, ಸಂಸದ ಜಿಎಸ್ ಬಸವರಾಜು, ತೇಜಸ್ವಿ ಸೂರ್ಯ, ಆರ್ ಅಶೋಕ್, ಕೆ ಸುಧಾಕರ್ ಮಾಧುಸ್ವಾಮಿ ಸೇರಿದಂತೆ ಎಲ್ಲಾ ನಾಯಕರು ಸಾಮೂಹಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದಾರೆ.
ಇನ್ನು ಕಾಂಗ್ರೆಸ್ ನ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಟಿ ಬಿ ಜಯಚಂದ್ರ,ಡಿಕೆ ಸುರೇಶ್, ಮುದ್ದ ಹನುಮೇಗೌಡ ಮುಂತಾದವರು ಬೃಹತ್ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದಾರೆ.
ಜೆಡಿಎಸ್ ನ ಎಚ್.ಡಿ ದೇವೇಗೌಡ, ಕುಮಾರಸ್ವಾಮಿ ಮತ್ತು ಕೊರೋನಾದಿಂದ ಚೇತರಿಸಿಕೊಂಡಿರುವ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಕೂಡ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದಾರೆ.
ಇನ್ನೂ ಉಪ ಚುನಾವಣೆ ಪ್ರಚಾರದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುವುದಾಗಿ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಇತ್ತೀಚೆಗೆ ಕೇರಳದಲ್ಲಿ ನಡೆದ ಓಣಂ ಸಮಾರಂಭದಲ್ಲಿ ಮತ್ತೆ ಕೊರೋನಾ ಹೆಚ್ಚಿನ ಪ್ರಮಾಣದಲ್ಲಿ ಹರಡಲು ಕಾರಣವಾಯಿತು. ಇದಕ್ಕೆ ಕಾರಣರಾದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮಣಿಪಾಲ್ ಆಸ್ಪತ್ರೆ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ. ಎಲ್ಲಾ ನಾಗರಿಕರು, ನಾಯಕರು ಲಸಿಕೆ ಸಿಗುವವರೊ ಕೊರೋನಾ ನಿಯಮ ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


